ಹಾಸನ: ಡಿಕೆಶಿ ಅವರಿಗೆ ಸಿಕ್ಕಿರೋ ಡಿಸಿಎಂ ಸ್ಟೇಟಸ್ ಅದು ನಾಡಿನ ಜನರ ಭಿಕ್ಷೆ ಎಂದು ನಿಖಿಲ್ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ತುಮಕೂರಿನಲ್ಲಿ ಸಾಧನ ಸಮಾವೇಶ ಮಾಡಿದ್ದಾರೆ. ನಿನ್ನೆ ಡಿಸಿಎಂ ಒಂದು ವಿಚಾರ ವ್ಯಕ್ತಪಡಿಸಿದ್ದರು.ಇದನ್ನ ನೋಡಿ ನಾನು ಒಂದು ವಿಚಾರ ಮುಂದಿಟ್ಟಿದ್ದೀನಿ. ಜೆಡಿಎಸ್ ಕೇವಲ 17 ಸ್ಥಾನ ಪಡೆದು ಕಡಿಮೆ ಸಂಖ್ಯೆ ಗೆ ಇಳಿದಿದೆ ಎಂದು ಡಿಕೆ ಶಿವಕುಮಾರ್ ಮಾತಾಡಿದ್ದಾರೆ. ಅವರಿಗೆ ಒಂದು ಪ್ರಶ್ನೆ ಕೇಳ್ತಿನಿ. 136 ಸ್ಥಾನ ಹೊಂದಿರೊ ಕಾಂಗ್ರೆಸ್ ಪಕ್ಷದ ಡಿಸಿಎಂ. ಅದೆಂತದೋ ಡಿಸೈನ್ ಬಾಕ್ಸ್ ಅಂತಾ ಟೀಂ ಇದ್ಯಲ್ಲ ಅಲ್ಲಿ ಪಾಪಾ ಡಿಕೆ ಸಾಹೇಬರು. ಡಿ ಕೆ ಶಿವಕುಮಾರ್ ಎಂಬವ ನಾನು ಎಂದು ಹಾಕೊಂಡಿದ್ದಾರೆ. ಮುಂದೆ ಹೋದ ಮೇಲೆ ಏನು ಎಂದು ಜನರಿಗೆ ಗೊತ್ತಾಗ್ತಾ ಇಲ್ಲ. ಹಾಗಾಗಿ ಪ್ರಶ್ನೆ ಕೇಳಿದೀನಿ ನಮ್ಮ ಬಗ್ಗೆ ಚಿಂತೆ ಮಾಡೋದು ಬಿಡ್ಲಿ. ನಿಖಿಲ್ ಕುಮಾರಸ್ವಾಮಿ ಸ್ಟೇಟಸ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸಾಹೇಬರು ನನ್ನ ಸ್ಟೇಟಸ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರು ಒಂದು ಅರಿಯಲಿ. ಅವರಿಗೆ ಜನ ಸ್ಟೇಟಸ್ ಕೊಟ್ಟಿದಾರಲ್ಲ ಡಿಸಿಎಂ ಸ್ಟೇಟಸ್. ಅದು ನಾಡಿನ ಜನರ ಭಿಕ್ಷೆ. ಅದನ್ನು ಕಣ್ಣಿಗೆ ಒತ್ತಿಕೊಂಡು ಅದಿಕಾರ ಇದ್ದಾಗ ದುರಹಂಕಾರ ಪಡದೇ ದುಡ್ಡಿದ ಮದ ತಲೆಗೆ ಏರಿ ಜಾಸ್ತಿ ಮಾತನಾಡದೆ ತಲೆ ತಗ್ಗಿಸಿ ಜನರಿಗೆ ಗೌರವದಿಂದ ದುಡಿಯೊ ಕೆಲಸ ಮಾಡಲಿ ಎಂದು ಕಿಡಿಕಾರಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಏನು ಎಂದು ಜನ ತೋರಿಸಿಕೊಡ್ತಾರೆ. ಮಿಸ್ಟರ್ ಶಿವಕುಮಾರ್ ಅವರು ತಲೆ ಕೆಡಿಸಿಕೊಳ್ಳೋದು ಬೇಡ. ಇಷ್ಟು ಲಘುವಾಗಿ ಮಾತಾಡೊದು ಬೇಡ. ನೋಡಿದೆ ಜಿಬಿಐಟಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಅವರ ಹೇಳಿಕೆ ಕೇಳಿದಿನಿ. ಮಾತೆತ್ತಿದರೆ ಅವರ ಸಹೊದರ ಪಾಪ ಕೂಲಿ ಸಿಕ್ಕಿಲ್ಲ ಕೂಲಿ ಸಿಕ್ಕಿಲ್ಲ ಅಂತಾ ಬೀದಿಯಲ್ಲಿ ಬಾಯಿ ಬಡಿದುಕೊಂಡು ಓಡಾಡ್ತರಲ್ಲ.ಅಲ್ಲಿ ದೆಹಲಿ ಗೆ ಹೋಗ್ತಾರೆ. ಇಲ್ಲಿಯವರೆಗೆ ಸಿಎಂ ಡಿಸಿಎಂ ಕುರ್ಚಿಯ ಕಿತ್ತಾಟ ಬಡಿದಾಟ. ರಂಪಾಟ ಆಗಿ ಜನರು ನಗೊ ಪರಿಸ್ಥಿತಿ ಬಂದಿದೆ. ಡಿಕೆ ತಮ್ಮ ದುಡಿದಿದಿನಿ ದುಡಿದಿದಿನಿ ಅಂತಾರಲ್ಲ. ಅದೆಂತದೊ ಕೂಲಿ ತಗೊಂಡ್ ಬರಲಿ.ದೆಹಲಿಗೆ ಹೋಲಿಕೂಲಿ ತಗೊಬರ್ಲಿ ಎಂದು ಲೇವಡಿ ಮಾಡಿದ್ದಾರೆ.
ಜನ 136 ಸೀಟ್ ಗೆಲ್ಲಿಸಿದ್ದಾರೆ. ಕುಣಿನಾರದವಳು ನೆಲ ಡೊಂಕು ಅಂದಂಗೆ ಎಂದು ಕಿಡಿಕಾರಿದ ಅವರು ಅವರು ಹತಾಷರಾಗಿ ಹೀಗೆ ಮಾತಾಡ್ತಿದ್ದಾರೆ. ನಿಖಿಲ್ ಬಗ್ಗೆ ಚರ್ಚೆ ಬೇಡ. 2028 ಕ್ಕೆ ಇದೇ ಡಿಕೆ ಶಿವಕುಮಾರ್ ಮಾಜಿ ಆಗ್ತಾರೆ. ಹಾಲಿ ಆಗಿ ಇರಲ್ಲ ಅವರು. ಯಾರಿಗು ಅಧಿಕಾರ ಶಾಶ್ವತ ಅಲ್ಲ. ಮಾತಾಡೊ ಮುನ್ನ ಎಚ್ಚರಿಕೆ ಇರಲಿ ಎಂದು ಗುಡುಗಿದ್ದಾರೆ.











