ಬೆಂಗಳೂರು: ನನ್ನ ಕೈಲಾದ ಮಟ್ಟಿಗೆ ರಾಜ್ಯದ ಜನತೆಗೆ ಜನರ ಸಮಸ್ಯೆ ಮುಂದಿಟ್ಟು ಹೋರಾಟ ಮಾಡ್ತೀನಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ನನ್ನ ಕೈಲಾದ ಮಟ್ಟಿಗೆ ರಾಜ್ಯದ ಜನತೆಗೆ ಜನರ ಸಮಸ್ಯೆ ಮುಂದಿಟ್ಟು ಹೋರಾಟ ಮಾಡ್ತೀನಿ.ಜನರಿಗಾಗಿ ಹೋರಾಟ ಮಾಡ್ಬೇಕು ಎಂದು ದೃಢ ಸಂಕಲ್ಪ ಮಾಡಿದೀನಿ. 93 ಆಯಿತು ಎಂದು ಮನೆಯಲ್ಲೇ ಕುಳಿತುಕೊಳ್ಳಲ್ಲ. ಜನರ ಸಮಸ್ಯೆ ಯಾವ ರೀತಿ ಹದಗೆಟ್ಟಿದೆ ಮೊನ್ನೆ ಹೇಳಿದ್ದೇನೆ. 20 ನೇ ತಾರೀಕು ಸುದ್ದಿಗೋಷ್ಠಿ ಮಾಡಿ ಮಾತಾಡ್ತೀನಿ. ರಾಜ್ಯ ಮತ್ತು ದೇಶದ ಸಮಸ್ಯೆ ಬಗ್ಗೆ ಚರ್ಚೆ ಮಾಡ್ತೀನಿ. ಪ್ರಧಾನ ಮಂತ್ರಿಗಳು ತುಂಬಾ ಒಳ್ಳೆ ಸಂದೇಶ ಕಳುಸಿದ್ದಾರೆ. ಗೃಹ ಸಚಿವರು ವೈಯಕ್ತಿಕ ವಾಗಿ ಮಾತಾಡಿದ್ದಾರೆ .ಇನ್ನು ಅನೇಕರು ಸಂದೇಶ ಕಳುಸಿದ್ದಾರೆ.ಯಡಿಯೂರಪ್ಪ ನವರು ಸಂದೇಶ ಕಳಿಸಿದ್ದಾರೆ ಎಂದಿದ್ದಾರೆ.
NDA ನಲ್ಲಿ ಮೋದಿ ಮತ್ತು ನಮ್ಮ ಸಂಬಂಧದಲ್ಲಿ ಯಾವ ಬಿಕ್ಕಟ್ಟು ಬರೋಲ್ಲ. ಏನೇ ಸಮಸ್ಯೆ ಬಂದ್ರು ಕೂತು. ಬಗೆಹರಿಸಿಕೊಳ್ಳುತ್ತೇವೆ. ನನಗೆ ದೃಢ ವಿಶ್ವಾಸ ಇದೆ. ಪ್ರಧಾನಿ ಜೊತೆ ಒಳ್ಳೆ ಸಂಬಂಧ ಇರೋದರಿಂದ ಯಾವುದೇ ಆತಂಕ ಇಲ್ಲ. ದಕ್ಷಿಣ ಕೇರಳ ಕರ್ನಾಟಕ, ತೆಲಂಗಾಣದಲ್ಲಿ ಮಾತ್ರ ಇದೆ. ನೋಡೋಣ ಏನ್ ಆಗುತ್ತೆ ಈಗ ಮಾತಾಡಲ್ಲ ಸಮಯ ಬಂದಾಗ ಮಾತಾಡ್ತೀನಿ ಎಂದಿದ್ದಾರೆ.











