ತುಮಕೂರು; ತುಮಕೂರು ಸಮಾವೇಶ ಸರ್ಕಾರದ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮ ಅಲ್ಲ, ಹಾಗಾಗಿ ಹೈಕಮಾಂಡ್ ನಾಯಕರನ್ನು ಕರೆದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ನಾಳೆ ಸರ್ಕಾರದ ಸಮಾವೇಶ ಇದೆ. ಸರ್ಕಾರದಿಂದ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡ್ತಿದೀವಿ. ಸರ್ಕಾರ ಬಂದು ಮೂರು ವರ್ಷ ಆಯ್ತು. ನಾವು ಅನೇಕ ಭರವಸೆ ಕೊಟ್ಟಿದ್ವಿ. ಈ ಮೂರು ವರ್ಷದಲ್ಲಿ ಏನೇನು ಈಡೇರಿಸಿದೀವಿ ಅಂತ ತಿಳಿಸ್ತೇವೆ ಎಂದಿದ್ದಾರೆ.
ಸಮಾವೇಶದಲ್ಲಿ ಪರಮೇಶ್ವರ್ ಶಕ್ತಿ ಪ್ರದರ್ಶನ ಎಂಬ ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಇಲ್ಲಿ ಯಾರ ಶಕ್ತಿ ಪ್ರದರ್ಶನವೂ ಇಲ್ಲ. ಇದು ಸರ್ಕಾರದ ಕಾರ್ಯಕ್ರಮ ಜಾರಿ ಬಗ್ಗೆ ಮಾತ್ರ ಸಮಾವೇಶ. ನನಗೆ ವೈಯಕ್ತಿಕವಾಗಿ ಆಗಲೀ ಬೇರೆಯವರಿಗೆ ಆಗಲಿ ಇದನ್ನು ಆ ರೀತಿ ನೋಡಲ್ಲ. ಈ ಸಮಾವೇಶವನ್ನು ಶಕ್ತಿ ಪ್ರದರ್ಶನ ಅಂತ ನೋಡಲ್ಲ. ನುಡಿದಂತೆ ನಡೆದಿದ್ದೇವೆ ಅಂತ ಹೇಳಲು ಹೊರಟಿದ್ದೇವೆ ಅಷ್ಟೇ. ಇದು ಸರ್ಕಾರದ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮ ಅಲ್ಲ. ಹಾಗಾಗಿ ಹೈಕಮಾಂಡ್ ನಾಯಕರನ್ನು ಕರೆದಿಲ್ಲ ಎಂದಿದ್ದಾರೆ.
ಸಮಾವೇಶ ಬಳಿಕ ಸರ್ಕಾರದಲ್ಲಿ ಬದಲಾವಣೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬದಲಾವಣೆ ಬೇರೆ ವಿಚಾರ, ಅದೇ ಬೇರೆ .ನಾವಿಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಸಮಾವೇಶ ಮಾಡ್ತಿದೀವಿ. ಅದೆಲ್ಲ ಪಕ್ಷದ ಆಂತರಿಕ ವಿಚಾರ. ಅದನ್ನು ಇದರ ಜತೆ ಬೆರೆಸಲು ಹೋಗೋದಿಲ್ಲ ಎಂದ ಅವರು ಸಾರಿಗೆ ನೌಕರರ ಮುಷ್ಕರ ವಿಚಾರದ ಬಗ್ಗೆ ಮಾತನಾಡಿ ಸಾರಿಗೆ ನೌಕರರು ಅವರ ಸಮಸ್ಯೆ ಇಟ್ಟುಕೊಂಡು ಮುಷ್ಕರ ಕರೆದಿದ್ದಾರೆ. ಸಿಎಂ ಸಹ ಅವರ ಜತೆ ಚರ್ಚೆ ಮಾಡಿದ್ದಾರೆ. ಕಪ್ಪು ಬಾವುಟ ಪ್ರದರ್ಶನ ಮಾಡ್ತೀವಿ ಅಂದಿದ್ರು . ಅದನ್ನು ಕೈಬಿಡಿ ಅಂದಿದ್ದೇವೆ. ಸರ್ಕಾರ ಅವರ ಜತೆ ಮಾತಾಡಿದ್ದೇವೆ.ಅವರು ಕಪ್ಪು ಬಾವುಟ ಪ್ರದರ್ಶನ ಕೈಬಿಡುತ್ತೇವೆ ಎಂದಿದ್ದಾರೆ.










