ಮನೆ Latest News ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿ; ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿಕೆ

ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿ; ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿಕೆ

0

ಬಾಗಲಕೋಟೆ; ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿದ್ದಾರೆ.

ಮಹಾಕೂಟದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.  ಗ್ರೆಸ್ ಪಾರ್ಟಿ ಹ್ಯಾಸ್ ಬಿಕಮ್ ಮುಸ್ಲಿಂ ಲೀಗ್. ಮುಸ್ಲಿಂ ಲೀಗ್ ಅಂದ್ರೆ ಬಹಳ ಜನ, ಸಾಬರ ಒಂದು ಪಾರ್ಟಿ ಅನ್ಕೊಂಡಿದ್ರು. ಈ ದೇಶವನ್ನ ಇಬ್ಬಾಗ ಮಾಡಲಿಕ್ಕೆ ಕರೆ ಕೊಟ್ಟ ಮೊದಲ ಪಾರ್ಟಿ ಮುಸ್ಲಿಂ ಲೀಗ್. ಪಕ್ಷದ ನಾಯಕ ರಾಹುಲ್ ಗಾಂಧಿ, ಮುಸ್ಲಿಂ ಲೀಗ್ ನ ಮುಖ್ಯಸ್ಥ. ಮುಸ್ಲಿಂ ಲೀಗ್ ಮುಖ್ಯಸ್ಥ ರಾಹುಲ್ ಗಾಂಧಿಯನ್ನ, ಮಹಮ್ಮದ್ ಅಲಿ ಜಿನ್ನಾ ಇದ್ದಂತೆ ಎಂದಿದ್ದಾರೆ ಪ್ರಲ್ಹಾದ್ ಜೋಶಿ.

ಕೇರಳದಲ್ಲಿ ಮುಸ್ಲೀಂ ಲೀಗ್ ಸಮೋರ್ಟ್ ನಿಂದ ಸರ್ಕಾರ ರಚನೆ ಮಾಡ್ತಿದ್ದಾರೆ. ೧೮ ಜನ್ರೂ ಮುಸ್ಲೀಂರು. ಅವರಿಗೇ ಸಚಿವ ಸ್ಥಾನ ಕೊಡ್ತಾರೆ. ಅಸ್ಸಾಂ ದಲ್ಲಿ ೧೯ ಜನ್ರ ಪೈಕಿ, ೧೮ ಜನ ಮುಸ್ಲಿಂರಿದ್ದಾರೆ. ಅಬ್ದುಲ್ ಬದ್ರುದ್ದೀನ್ ಅವ್ರು ಕಾಂಗ್ರೆಸ್ ಮುಸ್ಲೀಂ ಲೀಗ್ ಆಗಿದೆ ಅಂದಿದ್ದಾರೆ. ಕೇರಳ, ಆಸ್ಸಾಂ, ಪಶ್ಚಿಮ ಬಂಗಾಳ ಸೇರಿ ೯೦ ಸೀಟ್ ಗೆದ್ದಿದ್ದಾರೆ. ತಮಿಳುನಾಡಿನಲ್ಲಿ ೫ ಜನ ಇದ್ದಾರೆ, ಅದ್ರಲ್ಲಿ ೪ ಜನ ಮುಸ್ಲಿಂರು. ಮುಸ್ಲೀಂ ಲೀಗ್ ನವ್ರು ಪ್ರತ್ಯೇಕ ಬಜೆಟ್ ಕೇಳ್ತಿದ್ದಾರೆ. ಪ್ರತ್ಯೇಕ ಅಂದ್ರೆ ಇದ್ರ ಅರ್ಥ ಏನು. ಬಾಂಗ್ಲಾ ನುಸುಳುಕೋರರ ಬಗ್ಗೆ ಮಾತಾಡಲ್ಲ. ಡಿಕೆಶಿ ಅವ್ರು ನಮ್ಮ ಬ್ರದರ್ ಅಂತಾ ಹೇಳಿದ್ದಾರೆ.ಅವ್ರಿಗೆ ಇವ್ರು ಹೇಗೆ ಬ್ರದರ್ಸೋ ನನಗೆ ಗೊತ್ತಿಲ್ಲ. ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿ.ಯಾವುದೇ ವಿಷಯದ ಬಗ್ಗೆ ಗಂಭೀರತೆ ಇಲ್ಲದ ರಾಜಕೀಯ ನಾಯಕ. ಅವನ ಮಾತು ಕೇಳಿ ಸಿದ್ದರಾಮಯ್ಯ ಈ ರೀತಿ ಹೇಳ್ತಿದ್ದಾರೆ ಎಂದಿದ್ದಾರೆ.