ಮನೆ Latest News ಕುರ್ಚಿಯಲ್ಲಿ ಎಷ್ಟು ದಿನ ಕುಳಿತಿರುತ್ತೇನೆ ಎಂಬ ಗ್ಯಾರಂಟಿ ಸಿಎಂ ಸಿದ್ದರಾಮಯ್ಯನವರಿಗೇ ಇಲ್ಲ: ವಿಧಾನ ಪರಿಷತ್ ಸದಸ್ಯ...

ಕುರ್ಚಿಯಲ್ಲಿ ಎಷ್ಟು ದಿನ ಕುಳಿತಿರುತ್ತೇನೆ ಎಂಬ ಗ್ಯಾರಂಟಿ ಸಿಎಂ ಸಿದ್ದರಾಮಯ್ಯನವರಿಗೇ ಇಲ್ಲ: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ

0

ಬೆಂಗಳೂರು: ಕುರ್ಚಿಯಲ್ಲಿ ಎಷ್ಟು ದಿನ ಕುಳಿತಿರುತ್ತೇನೆ ಎಂಬ ಗ್ಯಾರಂಟಿ ಸಿಎಂ ಸಿದ್ದರಾಮಯ್ಯನವರಿಗೇ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ತುಮಕೂರಿನಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ವಿಚಾರದ ಬಗ್ಗೆ ಮಾತನಾಡಿದ ಅವರು ಸಾಧನೆ ಮಾಡಿದವರು ಸಮಾವೇಶ ಮಾಡಬೇಕು. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾ‌ನದಲ್ಲಿರುವುದು ಸಾಧನೆಯೇ?. ಮುಡಾ ಹಗರಣ, ವಾಲ್ಮೀಕಿ ಹಗರಣ ಸಾಧನೆ ಆಗುತ್ತಾ?. ಮೂರು ವರ್ಷದಲ್ಲಿ ಕರ್ನಾಟಕದ ಜನ ತಲೆ ಎತ್ತಿ ಓಡಾಡುವಂತಹ ಸಾಧನೆ ಏನು ಮಾಡಿದ್ದಾರೆ?. ಕುರ್ಚಿಯಲ್ಲಿ ಎಷ್ಟು ದಿನ ಕುಳಿತಿರುತ್ತೇನೆ ಎಂಬ ಗ್ಯಾರಂಟಿ ಸಿಎಂ ಸಿದ್ಧರಾಮಯ್ಯನವರಿಗೇ ಇಲ್ಲ. ಇನ್ನು ಯಾವ ಗ್ಯಾರಂಟಿ ಬಗ್ಗೆ ಅವರು ಮಾತಾಡುತ್ತಾರೆ?. ಹೆಮ್ಮೆ ಪಟ್ಟುಕೊಳ್ಳುವಂತಹ ಸಾಧನೆ ಯಾವುದು ಇದೆ? ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ದರ ಏರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಪೆಟ್ರೋಲ್, ಡೀಸೆಲ್ ಮೇಲೆ ಕರ್ನಾಟಕ ಸರ್ಕಾರ ಹಾಕಿರುವ ತೆರಿಗೆ ಜಾಸ್ತಿ ಇದೆಯೋ ಕೇಂದ್ರ ಸರ್ಕಾರದ ತೆರಿಗೆ ಜಾಸ್ತಿ ಇದೆಯೋ?. ಮೂರು ಮೂರು ಸಲ ಕರ್ನಾಟಕ ಸರ್ಕಾರ ಸೆಸ್ ಹಾಕಿದ್ದು ಯಾಕೆ?. ಉಪಚುನಾವಣಾ ಗೆಲುವಿನ ಮರ್ಮ ಏನು ಅಂತಾ ಖಾಸಗಿಯಾಗಿ ಕೇಳಿದರೆ ಕಾಂಗ್ರೆಸ್ ನವರೇ ಹೇಳುತ್ತಾರೆ.ಎಲ್ಲಾ ಸಂಪತ್ತು, ಸೌಲಭ್ಯ ಬಳಸಿ ಕಾಂಗ್ರೆಸ್ ಪಕ್ಷ ಜನಾದೇಶವನ್ನು ಖರೀದಿ ಮಾಡುತ್ತದೆ. ಜನಾದೇಶವನ್ನು ಉಪಚುನಾವಣೆಯ ಹಿನ್ನೆಲೆಯಲ್ಲಿ ನೋಡಬೇಡಿ ಎಂದಿದ್ದಾರೆ.

ಚಿಕ್ಕಮಗಳೂರು ಡಿಸಿ ವರ್ಗಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಮತ ಎಣಿಕೆ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಿದರೆ ಅದು ಸರ್ಕಾರದ ಹತಾಶೆ. ಇದು ತಪ್ಪು ಸಂದೇಶ ಕೊಟ್ಟಂತೆ ಆಗುತ್ತದೆ. ಶೃಂಗೇರಿ ಕ್ಷೇತ್ರದ ಫಲಿತಾಂಶದ ನಂತರ ವರ್ಗಾವಣೆ ಅನುಮಾನಕ್ಕೆ ದಾರಿ ಮಾಡಿಕೊಡುತ್ತದೆ ಎಂದ ಅವರು ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನ ಹಸ್ತಾಂತರ ವಿಚಾರದ ಬಗ್ಗೆ ಮಾತನಾಡಿ ಯಾರನ್ನು ಸಿಎಂ ಮಾಡಬೇಕು ಅಂತಾ ನಮಗೆ ಸಂಬಂಧಿಸಿದ ವಿಷಯ ಅಲ್ಲ. ಮೂಗಿಗೆ, ಮೊಣಕೈಗೆ ದಲಿತ ಸಿಎಂ ಅಂತಾ ತುಪ್ಪ ಸವರುವುದನ್ನು ಅವರು ಬಿಟ್ಟಿಲ್ಲ. ಹಾಗೆ ಆಗುವುದಾಗಿದ್ದರೆ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸಿಎಂ ಆಗಬೇಕಿತ್ತು. ಬಾಬು ಜಗಜೀವನ್ ರಾಂ ಅವರೂ ಪ್ರಧಾನಿ ಆಗಬೇಕಿತ್ತು. ಬಸವಲಿಂಗಪ್ಪನವರಿಗೂ ತುಪ್ಪ ಸವರಿದ್ದರು. ಜಾಗತಿಕ ಯುದ್ಧ ಜಗತ್ತಿನ ಮೇಲೆ ಪರಿಣಾಮ ಬೀರುತ್ತದೆ. ಯುದ್ಧದ ಕಾರಣದಿಂದ ಜಾಗತಿಕ ತೈಲ ಬೆಲೆ ಏರಿರುವುದು ಸುಳ್ಳಾ?. ಕಾಂಗ್ರೆಸ್ ಸರ್ಕಾರ ಎಲ್ಲಾ ಮಾಡಿದ್ದರೆ ಹಿಜಾಬ್ ಹಾಕಿಕೊಂಡು ಬನ್ನಿ ಎಂದು ಹೇಳುವ, ಬ್ಲ್ಯಾಕ್‌ ಮೇಲ್ ಗೆ ಮಣಿಯುವ ದುಸ್ಥಿತಿ ಬರುತ್ತಿರಲಿಲ್ಲ. ಠೇವಣಿ ಉಳಿಸಿಕೊಳ್ಳುವಷ್ಟಾದರೂ ಮತ ಬ್ಯಾಂಕ್ ಉಳಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ತುಮಕೂರಿಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ನಾಮಕರಣಕ್ಕೆ ಗೃಹ ಸಚಿವ ಪರಮೇಶ್ವರ ಬೇಡಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಹೆಸರು ಬದಲಿಸಿದರೆ ಪರಿಸ್ಥಿತಿ ಬದಲಾಗುತ್ತಾ?. ಅಭಿವೃದ್ಧಿಗೆ ಈ ಸರ್ಕಾರದ ಯೋಜನೆಗಳೇನು?.ಇದನ್ನು ಸರಿಯಾಗಿ ಮಾಡಿದ್ದರೆ ತುಮಕೂರಿಗೇ ಒಂದು ಐಡೆಂಟಿಟಿ ಬರುತ್ತಿತ್ತು ಎಂದಿದ್ದಾರೆ.