ಮನೆ Latest News ಮಹಾರಾಷ್ಟ್ರದ ಬಳಿಕ ಕರ್ನಾಟಕ ಆತ್ಮಹತ್ಯೆ ಯಲ್ಲಿ ಎರಡನೇ ಸ್ಥಾನದಲ್ಲಿದೆ,ಈ ಆತ್ಮಹತ್ಯೆ ಗಳ ಸಮರ್ಪಣೆಗಾಗಿ ತುಮಕೂರಿಗೆ ಹೋಗಿದಾರಾ.?;...

ಮಹಾರಾಷ್ಟ್ರದ ಬಳಿಕ ಕರ್ನಾಟಕ ಆತ್ಮಹತ್ಯೆ ಯಲ್ಲಿ ಎರಡನೇ ಸ್ಥಾನದಲ್ಲಿದೆ,ಈ ಆತ್ಮಹತ್ಯೆ ಗಳ ಸಮರ್ಪಣೆಗಾಗಿ ತುಮಕೂರಿಗೆ ಹೋಗಿದಾರಾ.?; ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನೆ

0

ಬೆಂಗಳೂರು: ಮಹಾರಾಷ್ಟ್ರದ ಬಳಿಕ ಕರ್ನಾಟಕ ಆತ್ಮಹತ್ಯೆ ಯಲ್ಲಿ ಎರಡನೇ ಸ್ಥಾನದಲ್ಲಿದೆ,ಈ ಆತ್ಮಹತ್ಯೆ ಗಳ ಸಮರ್ಪಣೆಗಾಗಿ ತುಮಕೂರಿಗೆ ಹೋಗಿದಾರಾ.? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಸಾಧನಾ ಸಮಾವೇಶ ವಿಚಾರದ ಬಗ್ಗೆ ಮಾತನಾಡಿದ ಅವರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹಲವಾರು ವಿಚಾರಗಳನ್ನು ಹೆಚ್ಚು ಪ್ರಚಾರ ಮಾಡ್ತಿದಾರೆ. ಕಳೆದ ವರ್ಷ ಕೂಡಾ ಹಕ್ಕು ಪತ್ರಗಳ ಬಗ್ಗೆಯೇ ಹೆಚ್ಚು ಚರ್ಚೆ ಮಾಡಿದ್ದರು. ನಮ್ಮ ಬಳಿ ಬರುವ ರೈತರು, ಹಾಗೂ ಅನೇಕ ಜಿಲ್ಲೆಗಳಲ್ಲಿ ನಾವು ಹೋದಾಗ  ಕಂದಾಯ ಇಲಾಖೆಯ ಅನೇಕ ಸಮಸ್ಯೆ ಗಳನ್ನು ಹೇಳಿಕೊಳ್ತಾರೆ. ಆರನೇ ಗ್ಯಾರಂಟಿ ಯಾಗಿ ಭೂ ಗ್ಯಾರಂಟಿ ಕೊಡ್ತಿದಾರಂತೆ. ಎನ್ ಸಿ ಆರ್ ಸಂಸ್ಥೆ ಒಂದು ಸರ್ವೆ ಕೊಟ್ಟಿದೆ.23 ರಲ್ಲಿ 2400 ರೈತರು ಹಾಗೂ  24 ರಲ್ಲಿ 2900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಈ ಆತ್ಮಹತ್ಯೆ ಪ್ರಕರಣಗಳನ್ನು ಜಾಣ್ಮೆಯಿಂದ ಮುಚ್ಚಿಟ್ಟಿದಾರೆ. ಮಹಾರಾಷ್ಟ್ರದ ಬಳಿಕ ಕರ್ನಾಟಕ ಆತ್ಮಹತ್ಯೆ ಯಲ್ಲಿ ಎರಡನೇ ಸ್ಥಾನದಲ್ಲಿ ಇದೆ.ಈ ಆತ್ಮಹತ್ಯೆ ಗಳ ಸಮರ್ಪಣೆಗಾಗಿ ತುಮಕೂರಿಗೆ ಹೋಗಿದಾರಾ.? ಎಂದು ಪ್ರಶ್ನಿಸಿದ್ದಾರೆ.

ಹತ್ತು ನಿಮಿಷಗಳ ಕಾಲ ಮಳೆ ಬಂದ್ರೆ ನೀರು ನಿಲ್ಲುತ್ತೆ. ಈ ಸರ್ಕಾರದ ಈ ಸಮಾವೇಶ ಕೋಟ್ಯಂತರ ಹಣ ಖರ್ಚು ಅಷ್ಟೇ. ಜನರನ್ನೂ ಸರ್ಕಾರವೇ ಕರೆತರಬೇಕು. ಇವರ ಕಾರ್ಯಕ್ರಮಕ್ಕೆ ಜನ ಬರಬೇಕಲ್ಲ. ಈ ಸರ್ಕಾರ ರೈತರ ಜೀವನದ ಮೇಲೆ ಸಮಾಧಿ ಮೇಲೆ ಈ ಪ್ರದರ್ಶನ ಮಾಡ್ತಿದಾರೆ ಎಂದ ಅವರು ಬಿಡದಿ ಟೌನ್ ಶಿಪ್ ವಿಚಾರವಾಗಿ ಡಿಕೆಶಿ ಪಂಥಾಹ್ವಾನ ವಿಚಾರದ ಬಗ್ಗೆ ಮಾತನಾಡಿ ಬನ್ನಿ ಚರ್ಚೆ ಮಾಡೋಣ. ಬಿಡದಿಯಲ್ಲಿ ಮೂರೂವರೆ ಸಾವಿರ ಜನ ತಕರಾರು ಅರ್ಜಿ ಕೊಟ್ಟಿದ್ದಾರೆ ಎಂದಿದ್ದಾರೆ.

ಅಖಂಡ ಶ್ರೀನಿವಾಸ್ ಮೂರ್ತಿ ಭೇಟಿ ವಿಚಾರದ ಬಗ್ಗೆ ಮಾತನಾಡಿ ಅಖಂಡ ಶ್ರೀನಿವಾಸ್ ಮೂರ್ತಿ ನಮ್ಮ ಪಕ್ಷದಿಂದಲೇ ಆಯ್ಕೆ ಆಗಿ ಎರಡು ಸಲ ಶಾಸಕರಾಗಿದ್ರು. ಇಂದು ಅವರ ಮನೆಗೆ ಭೇಟಿ ಮಾಡಿದ್ದೆ. ಜೆಡಿಎಸ್ ಗೆ ಸೇರಲು ಅವರು ಉತ್ಸುಕ ರಾಗಿದ್ದಾರೆ.ಸದ್ಯದಲ್ಲೇ ದಿನಾಂಕ ನಿಗದಿ ಮಾಡಿ ಜೆಡಿಎಸ್ ಗೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.