ಬೆಂಗಳೂರು; ದಸರಾ ಜಂಬೂ ಸವಾರಿಯಲ್ಲೂ ಆನೆಯ ಸಮೀಪ ಬರದಂತೆ ಕಟ್ಟುನಿಟ್ಟಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ದುಬಾನೆ ಸಾಕಾನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟಕ್ಕೆ ಮಹಿಳೆ ಬಲಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ದುಬಾರೆ ಆನೆ ಶಿಬಿರದಲ್ಲಿ ಎರಡು ಆನೆಗಳ ಮಧ್ಯೆ ಕಾಳಗ ಆಗಿ ಅಮಾಯಕರ ಸಾವಾಗಿದೆ. ಯಾರೂ ಊಹಿಸದ ರೀತಿ ಘಟನೆ ನಡೆದಿದೆ. ಪ್ರವಾಸಿಗರಿಗೆ ಆನೆ ಸಮೀಪ ಬರದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇವೆ. ಆನೆ ಶಿಬಿರದಲ್ಲಿ ಎಸ್ಓಪಿ ಪಾಲನೆಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇವೆ. ಎಲ್ಲ ಆನೆಗಳು ಕುಮ್ಕಿ ಆನೆಗಳು ಪಳಗಿಸಿದ ಆನೆಗಳು. ಆದರೆ ದುರ್ಘಟನೆಯಿಂದ ಎಲ್ಲರ ಕಣ್ಣು ತೆರೆದಿದೆ. ಆನೆಯ ಬಿಹೇವಿಯರ್ ಹೇಗೆ ಎಂಬುದು ತಿಳಿಯುವುದಿಲ್ಲ. ದಸರಾ ಜಂಬೂ ಸವಾರಿಯಲ್ಲಿ ಭಾಗಿಯಾಗದಂತೆ ಸೂಚನೆ ನೀಡಿದ್ದೇನೆ. ದಸರಾ ಜಂಬೂ ಸವಾರಿಯಲ್ಲೂ ಆನೆಯ ಸಮೀಪ ಬರದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಸಫಾರಿ ತೆರೆದ ವಾಹನದಲ್ಲಿ ದಾಳಿ ಮಾಡುತ್ತಿರುವ ಪ್ರಕರಣ ಕೂಡ ನಡೆಯುತ್ತಿದೆ. ಸಫಾರಿ ವಾಹನಗಳ ಸುರಕ್ಷಿತ ಮಾಡೆಲ್ ರಚನೆಗೂ ಸೂಚನೆ ನೀಡಿದ್ದೇವೆ ಎಂದಿದ್ದಾರೆ.
ಆನೆಗಳಿಂದ ರಾಜ್ಯದಲ್ಲಿ ವರ್ಷಕ್ಕೆ 30-40 ಜನ ಸಾವನ್ನುಪ್ಪುತ್ತಿದ್ದಾರೆ. ಆನೆ ತುಳಿತದಿಂದ ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಆನೆ ಮಾನವ ಸಂಘರ್ಷ ತಪ್ಪಿಸಲು ತಜ್ಞರ ಸಮಿತಿ ರಚನೆ ಮಾಡಿದ್ದೇವೆ. ಅವರು ವರದಿ ನೀಡಿದ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ. ಎಲಿಫೆಂಟ್ ಟಾಸ್ಕ್ ಫೋರ್ಸ್ ಕೂಡ ಮಾಡಿದ್ದೇವೆ. ಆನೆ ಪ್ರಪೋರ್ಷನೇಟ್ ತೆಗೆದುಕೊಂಡರೆ ಕರ್ನಾಟಕದಲ್ಲಿ ಒಂದೇ ಒಂದು ಸಾವೂ ಆಗಬಾರದು. ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ಅತ್ಯಂಯ ಅಪಾಯಕಾರಿ. ಬೇರೆ ರಾಜ್ಯಗಳಿಗೂ ಆನೆ ಸೆರೆ ಹಿಡಿಯಲು ನಮ್ಮ ರಾಜ್ಯವೇ ತರಬೇತಿ ಹಾಗೂ ಮಾದರಿಯಾಗಿದೆ. ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಆಗಬೇಕಿದೆ. ರೈಲ್ವೇ ಬ್ಯಾರಿಕೇಡ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಆನೆಗಳನ್ನು ಸಾಪ್ಟ್ ರಿಲೀಸ್ ಸೆಂಟರ್ ಮಾಡಿ ನಿಯಂತ್ರಣ ಮಾಡುವ ಯೋಜನೆ ರೂಪಿಸಿದ್ದೇವೆ. ಕಾಡು ಪ್ರಾಣಿಗಳ ಸಂತಾನ ನಿಯಂತ್ರಣ/ ಮುಂದೂಡಿಕೆ ವಿಚಾರದಲ್ಲಿ ಪರ ವಿರೋಧ ಎರಡು ಚರ್ಚೆ ಇದೆ . ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಚರ್ಚೆ ಆಗಬೇಕು ಎಲ್ಲರ ಅಭಿಪ್ರಾಯ ಬೇಕು ಎಂದು ತಿಳಿಸಿದ್ದಾರೆ.
ಜಿಬಿಎ ಚುನಾವಣೆಗೆ ಸುಪ್ರಿಂ ಸಮಯ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಸುಪ್ರಿಂ ಕೋರ್ಟ್ ತೀರ್ಮಾನಕ್ಕೆ ಗೌರವ ಸೂಚಿಸುತ್ತೇವೆ. ಆಗಸ್ಟ್ ೩೧ ರ ಒಳಗೆ ಎಲ್ಲ ತಯಾರಿ ಮಾಡುತ್ತೇವೆ. ಬಿಜೆಪಿಯವರಿಗೆ ಚುನಾವಣೆ ಮಾಡುವ ಮನಸ್ಸು ಇರಲಿಲ್ಲ. ಸಮಯ ವಿಳಂಬ ಆಗಿದ್ದಕ್ಕೆ ಅವರಿಗೆ ಈಗಲೂ ಖುಷಿ ಆಗಿರಬಹುದು. ಖಂಡಿತ ಜಿಬಿಎ ಚುನಾವಣೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.











