ಸ್ವಾಮೀಜಿ ಹೇಳಿಕೆ
ಬೆಂಗಳೂರು; ಸಿದ್ದರಾಮಯ್ಯ ಅವರು ಡಿಕೆಶಿ ಅವರನ್ನು ಕರೆದು ಅಧಿಕಾರವನ್ನ ಬಿಟ್ಟು ಕೊಟ್ರೆ ಬಹಳ ಎತ್ತರಕ್ಕೆ ಹೋಗುತ್ತಾರೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಡಿಕೆಶಿ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು ನಾವು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ವಿ. ಅತೀ ಹಿಂದೂಳಿದ ಮಠಾಧೀಶರ ಸಭೆಯಿಂದ ಡಿಕೆ ಅವರನ್ನ ಸಿಎಂ ಆಗಿ ಮಾಡಬೇಕು ಅನ್ನೋದು ನಮ್ಮ ಒತ್ತಾಯ.ಈ ವಿಚಾರದಲ್ಲಿ ಹೈಕಮಾಂಡ್ ಸ್ಟ್ರಾಂಗ್ ನಿರ್ಧಾರ ತೆಗೆದುಕೊಳ್ಳಬೇಕು. ಕಾಂಗ್ರೆಸ್ 136 ಸೀಟ್ ತೆಗೆದುಕೊಳ್ಳಬೇಕಾದ್ರೆ ಡಿಕೆ ಶಿವಕುಮಾರ್ ಅವರ ಪಾತ್ರ ದೊಡ್ಡದಿದೆ. ರಾಜ್ಯ ಸುತ್ತಿ, ಹಣ ಖರ್ಚು ಮಾಡಿ ಶ್ರಮ ಹಾಕಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ಡಿಕೆಶಿ ಅವರಿಗೆ ಕೊಟ್ಟಿರುವ ಮಾತನ್ನ ಕೂಡಲೇ ಈಡೇರಿಸಬೇಕು. ಸಂಕ್ರಾಂತಿ, ಯುಗಾದಿ ಪಂಚರಾಜ್ಯ ಚುನಾವಣೆ ಎಲ್ಲವೂ ಆಗಿ ಹೋಯ್ತು. ಡಿಕೆಶಿ ಅವರಿಗೆ ಅವಮಾನ ಮಾಡೋ ಮೂಲಕ ಒಕ್ಕಲಿಗ ಸಮುದಾಯಕ್ಕೂ ಅವಮಾನ ಮಾಡಿದ್ದೀರಾ ಇದು ಸರಿಯಾದ ಪದ್ದತಿ ಅಲ್ಲ. 15ನೇ ತಾರೀಖು ಡಿಕೆಶಿ ಅವರಿಗೆ ಹೈಕಮಾಂಡ್ ಬರ್ತ್ ಡೇ ಗಿಫ್ಟ್ ಆಗಿ ಸಿಎಂ ಸ್ಥಾನವನ್ನ ಕೊಡಬೇಕು. ಇದು ರಾಜ್ಯದ 32 ಸಮುದಾಯಗಳ ಸ್ವಾಮೀಜಿಗಳನ್ನೊಳಗೊಂಡ ಅತಿ ಹಿಂದೂಳಿದ ಮಹಾಸಭಾ ಕಾಂಗ್ರೆಸ್ ಹೈ ಕಮಾಂಡಿಗೆ ಮನವಿ ಮಾಡ್ತಿದ್ದೇವೆ ಎಂದಿದ್ದಾರೆ
ಇವತ್ತು ಅಥವಾ ನಾಳೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲು ನಾವು ಚಿಂತನೆ ಮಾಡ್ತಿದ್ದೇವೆ. ಕೆ.ಸಿ ವೇಣುಗೋಪಾಲ್ ಅವರನ್ನ ಕೇರಳದಲ್ಲಿ ಹಾಗೂ ಉಳಿದವರನ್ನ ದೆಹಲಿಯಲ್ಲಿ ಭೇಟಿ ಮಾಡ್ತೇವೆ. ಹೈ ಕಮಾಂಡ್ ಡಿಕೆಶಿ ಅವರಿಗೆ ನ್ಯಾಯ ನೀಡಿಲ್ಲ ಅಂದ್ರೆ ಅವರು ಕಠೋರ ನಿರ್ಧಾರವನ್ನ ತೆಗೆದುಕೊಳ್ಳಬೇಕಾಗುತ್ತೆ. ಸ್ವಾಭಿಮಾನವನ್ನ ಒತ್ತೆ ಇಡುವ ಅವಶ್ಯಕತೆಯಿಲ್ಲ. ಪಕ್ಷದಲ್ಲಿ ಕೆಲವರು ನಿರಂತವಾಗಿ ಅ ಅಧಿಕಾರ ಅನುಭವಿಸ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ದುಡಿದವರಿಗೆ ಸರಿಯಾದ ಅವಕಾಶ ಈಗ ಸಿಕ್ತಾಯಿಲ್ಲ. ಮೇ ೫ ತಾರೀಖು ವಿಶ್ವಕರ್ಮ ಸಮುದಾಯದ ಸ್ಚಾಮೀಜಿಗಳ ನೇತೃತ್ವದಲ್ಲಿ ಕಲಬುರಿಗಿಯಲ್ಲಿ ಅಂಬಾ ಭವಾನಿ ಗುಡಿಯಲ್ಲಿ ಬಹಳ ದೊಡ್ಡ ಚಂಡಿಕಾ ಹೋಮ ಮಾಡ್ತಿದ್ದೇವೆ. ಸಿದ್ದರಾಮಯ್ಯ ಅವರು ಕೂಡ ಡಿಕೆಶಿ ಅವರನ್ನು ಕರೆದು ಅಧಿಕಾರವನ್ನ ಬಿಟ್ಟು ಕೊಟ್ರೆ ಬಹಳ ಎತ್ತರಕ್ಕೆ ಹೋಗುತ್ತಾರೆ. ಹಾಗೇ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶವನ್ನ ಮಾಡಬೇಕು ಅನ್ನೋ ಚರ್ಚೆ ಕೂಡ ಮಾಡಿದ್ದೇವೆ ಎಂದು ಹೇಳಿದ್ದಾರೆ.











