ಮನೆ Latest News ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರಿನ 18 ನೇ ಆವೃತ್ತಿಗೆ ಚಾಲನೆ ನೀಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರಿನ 18 ನೇ ಆವೃತ್ತಿಗೆ ಚಾಲನೆ ನೀಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

0

ಬೆಂಗಳೂರು;  ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರಿನ 18 ನೇ ಆವೃತ್ತಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು “ಇದು ಓಟ, ಆರೋಗ್ಯಕರ ಜೀವನ, ಶಿಸ್ತು ಮತ್ತು ಸಾಮೂಹಿಕ ಶಕ್ತಿಯ ಆಚರಣೆಯಾಗಿದೆ. ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಈಗ ಬೆಂಗಳೂರಿನ ಗುರುತಾಗಿದೆ. ಈ ಓಟವನ್ನು ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಓಟಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿದೆ. ಈ ಓಟದಲ್ಲಿ ಯುವಜನತೆಯ ಜೊತೆಗೆ ವಿಶೇಷ ಚೇತನರು, ಹಿರಿಯ ನಾಗರಿಕರು ಭಾಗವಹಿಸಿರುವುದು ಬಹಳ ಹರ್ಷದಾಯಕವಾಗಿದೆ ಮತ್ತು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಮುಖ ಯೋಜನೆಯಾದ ಫಿಟ್ ಇಂಡಿಯಾ ಆಂದೋಲನಕ್ಕೆ ಮಾದರಿಯಾಗಿದೆ.  ಸಮಾಜ, ಕ್ರೀಡೆ ಮತ್ತು ಸೇವೆ ಒಟ್ಟಿಗೆ ಸೇರಿದಾಗ, ಸಕಾರಾತ್ಮಕ ಬದಲಾವಣೆ ಸಂಭವಿಸುತ್ತದೆ. ಈ ಮ್ಯಾರಥಾನ್ ಜನರನ್ನು ಸಂಪರ್ಕಿಸುವ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮತ್ತು ರಾಷ್ಟ್ರ ನಿರ್ಮಾಣದತ್ತ ಬಲವಾದ ಹೆಜ್ಜೆಯಾಗಿದೆ” ಎಂದರು.

“ಈ ಅದ್ಧೂರಿ ಯಶಸ್ವಿ ಕಾರ್ಯಕ್ರಮಕ್ಕಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಎಲ್ಲಾ ಭಾಗವಹಿಸುವವರು, ಸಂಘಟಕರು, ಪ್ರಾಯೋಜಕರು ಮತ್ತು ವಿಶೇಷವಾಗಿ ಪ್ರೊಕೆಮ್ ಇಂಟರ್‌ನ್ಯಾಷನಲ್‌ಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಎಲ್ಲಾ ನಾಗರಿಕರು ತಮ್ಮ ದೈನಂದಿನ ಜೀವನದಲ್ಲಿ ಫಿಟ್‌ನೆಸ್‌ಗೆ ಆದ್ಯತೆ ನೀಡಬೇಕು, ಕ್ರೀಡೆಗಳನ್ನು ಕೈಗೆತ್ತಿಕೊಳ್ಳಬೇಕು ಮತ್ತು ಆರೋಗ್ಯಕರ, ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಬೇಕೆಂದು” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಎನ್.ಎ.ಹ್ಯಾರಿಸ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಪಿ.ಸಿ.ಮೋಹನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.