ಬೆಂಗಳೂರು; ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗೋ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಡಿಕೆಶಿ ಸಂಬಂಧಿ ಕುಣಿಗಲ್ ಶಾಸಕ ಡಾ ರಂಗನಾಥ್ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಅವರು ನಿಮಗೆಲ್ಲಾ ಗೊತ್ತಿದೆ. ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಸನ್ನಿವೇಶ ಆಗುತ್ತಿರುವುದು. ಒಬ್ಬ ಶಾಸಕನಾಗಿ ಒಬ್ಬ ಕಾಂಗ್ರೆಸ್ ಪಕ್ಷದವನಾಗಿ, ನಾವೆಲ್ಲ ಶಿಸ್ತಿನಲ್ಲಿ ಇರುವಂತಹ ಹಿನ್ನೆಲೆ ಹೈಕಮಾಂಡ್ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಲೆ ಬಾಗಿಸಿ ಪಾಲಿಸುತ್ತೇವೆ.. ಒಡಂಬಡಿಕೆ ಆಗಿದೆ ಎಂಬ ಮಾತನ್ನು ಇಬ್ಬರು ಹೇಳಿದ್ದಾರೆ.ಏನಾಗಿದೆ ಎಂಬುದನ್ನ ಹೈಕಮಾಂಡ್ ಅವರು ಬಗೆಹರಿಸುತ್ತಾರೆ ಎಂಬ ಭಾವನೆಯಲ್ಲಿ. ದೆಹಲಿ ಕಡೆ ಮುಖ ಮಾಡಿ ನೋಡುತ್ತಿದ್ದೇವೆ ಎಂದಿದ್ದಾರೆ.
ಸದ್ಯದಲ್ಲೇ ಸೂಕ್ತವಾದಂತಹ ಸೂಕ್ತ ಸಮಯದಲ್ಲಿ ನಿರ್ಧಾರವಾಗುತ್ತದೆ ಎಂದು ಭಾವಿಸುತ್ತೇವೆ. ಶೀಘ್ರದಲ್ಲಿ ಆಗುತ್ತಾ ಎಂದಿದ್ದಕ್ಕೆ ಆಫ್ ಕೋರ್ಸ್ ಎಂದಿದ್ದಾರೆ ಶಾಸಕ ರಂಗನಾಥ್. ಇನ್ನು ನೀವು ದೆಹಲಿಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅವಶ್ಯಕತೆ ಬಂದಂತಹ ಸಂದರ್ಭದಲ್ಲಿ ನಾವು ಎಲ್ಲಾ ಹೋಗುತ್ತೇವೆ ಎಂದ ಅವರು ಡಿಕೆ ಶಿವಕುಮಾರ್ ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಆಗ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ನನ್ನ ವೈಯಕ್ತಿಕ ಆಲೋಚನೆ ನಿಮಗೆಲ್ಲಾ ಗೊತ್ತಿದೆ ಅದನ್ನೆಲ್ಲಾ ಬಾಯಿ ಬಿಟ್ಟು ಹೇಳುವ ಅವಶ್ಯಕತೆ ಇಲ್ಲ.ಮುಖ್ಯಮಂತ್ರಿ ವಿಚಾರವಾಗಿ ಮಾತನಾಡಬಾರದು ಎಂದು ನೋಟಿಸ್ ಕೊಟ್ಟಿದ್ದಾರೆ.. ಹಾಗಾಗಿ ನಾನು ಜಾಸ್ತಿ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.











