ಹಾವೇರಿ; ಮೊದಲು ಮಹಿಳಾ ಮೀಸಲಾತಿ ತಂದದ್ದು ಕಾಂಗ್ರೆಸ್ ಸರ್ಕಾರವಲ್ಲ ಎಂದು ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮಹಿಳಾ ಮೀಸಲಾತಿ ಕೊಟ್ಟ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದ ಅವರು ಮೊದಲು ಮಹಿಳಾ ಮೀಸಲಾತಿ ತಂದದ್ದು ಕಾಂಗ್ರೆಸ್ ಸರ್ಕಾರವಲ್ಲ. ಸಿಎಂ ಕಾಂಗ್ರೆಸ್ ಕ್ರೆಡಿಟ್ ತೆಗೆದುಕೊಳ್ಳಲು ಮಾತಿನ ವರಸೆ ಬದಲಿಸಿದ್ದಾರೆ. ಕಾಂಗ್ರೆಸ್ಗೆ ಲಾಯಲ್ಟಿ ತೋರಿಸಲು ಸತ್ಯ ತಿರುವು ಮಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳು ಮೊದಲಿನಿಂದಲೂ ಮೀಸಲಾತಿಗೆ ವಿರೋಧಿಸಿವೆ. ರಾಜೀವ್ ಗಾಂಧಿ ಕಾಲದಲ್ಲೇ 2/3 ಬಹುಮತ ಇತ್ತು ಆಗಲೇ ಮಾಡಬಹುದಿತ್ತು. ಆಗ ಮಾಡಿದ್ದರೆ 35 ವರ್ಷಗಳ ಹಿಂದೆಯೇ ಜಾರಿಗೆ ಬಂದಿರುತ್ತಿತ್ತು. ನಂತರ ಬಂದ ಸರ್ಕಾರಗಳು ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ. 2023ರಲ್ಲಿ ಸಮಸ್ಯೆ ಪರಿಹರಿಸಲು ತಿದ್ದುಪಡಿ (ಅಮೆಂಡ್ಮೆಂಟ್) ತರಲಾಗಿದೆ. ಜನಗಣತಿ ವಿಳಂಬಕ್ಕೆ ಕೋವಿಡ್ ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.
ಇಂದಿನ ಸೀಟ್ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ. ಕಾಂಗ್ರೆಸ್ ಇತಿಹಾಸದಿಂದಲೇ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಿದೆ. ಹೊಸ ಜನಸಂಖ್ಯೆ ಆಧಾರದಲ್ಲಿ ಹಂಚಿಕೆ ಆದರೆ ಇನ್ನೂ ದೊಡ್ಡ ಅನ್ಯಾಯ ಸಾಧ್ಯ. ಈ ಅಪಾಯದ ಅರಿವು ಇದೆ ಅಥವಾ ಇಲ್ಲ ಗೊತ್ತಿಲ್ಲ. ಕಾಂಗ್ರೆಸ್ ನವರು ರಾಜಕೀಯ ಲಾಭಕ್ಕಾಗಿ ಮಾತ್ರ ವಾದ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತಕ್ಕೆ ದೊಡ್ಡ ಅನ್ಯಾಯವಾಗಲಿದೆ. DMK ಪಕ್ಷ ಚುನಾವಣಾ ಲಾಭಕ್ಕಾಗಿ ವಿರೋಧಿಸುತ್ತಿದೆ. ಉತ್ತರ-ದಕ್ಷಿಣ ವಿಭಜನೆ ರಾಜಕೀಯ ನಡೆಸುವ ಹುನ್ನಾರ ನಡೆಸಿದೆ. ನಮ್ಮ ರಾಜ್ಯದ ಸಿಎಂ ಈ ರಾಜಕೀಯಕ್ಕೆ ಬಲಿಯಾಗಿದ್ದಾರೆ.DMK ಮೊದಲಿನಿಂದ ಪ್ರಾದೇಶಿಕ ಭಾವನೆಗಳನ್ನು ಕೆದಕುತ್ತಿದೆ. “ದೇಶ ಒಂದೇ – ನಾವು ಒಂದೇ ಅನ್ನೋ ಭಾವನೆ ಇರಬೇಕು. DMKಗೆ ಮೊದಲು ಬೆಂಬಲ ಇರಲಿಲ್ಲ, ಈಗ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ತಿಳಿಸಿದ್ದಾರೆ.











