ಚಾಮರಾಜನಗರ; ಚಾಮರಾಜನಗರ ಜಿಲ್ಲೆಗೆ ಭೇಟಿ ಅಧಿಕಾರ ಕಳೆದು ಕೊಳ್ತಾರೆ ಅನ್ನೋ ಮೂಢನಂಬಿಕೆನ್ನು ಸಿಎಂ ಸಿದ್ದರಾಮಯ್ಯ ಹುಸಿ ಮಾಡಿದ್ದಾರೆ. ಗುಂಡ್ಲುಪೇಟೆಯಲ್ಲಿ ಮಾತನಾಡಿದ ಅವರು ಬಿಜೆಪಿಯವರೇ ಮಹಿಳಾ ವಿರೋಧಿಗಳು ನಾವಲ್ಲ. 73 ಅಮೆಂಡ್ ಮೆಂಟ್ ತಂದಿದ್ದು ಯಾರು..?? ನಾವೇ ತಾನೆ? ರಾಜೀವ್ ಗಾಂಧಿ ಯಾರು..? ಕಾಂಗ್ರೆಸ್ ನವರಲ್ವ. ಆಗ ರಾಜ್ಯ ಸಭೆಯಲ್ಲಿ ವಿರೋಧ ಮಾಡಿದ್ದು ಎನ್ ಡಿ ಎ ಮೈತ್ರಿಕೂಟ ಎಂದಿದ್ದಾರೆ.
ಸಿಎಂ ಕ್ಷೇತ್ರದಲ್ಲಿ ಸಾವನ್ನಪ್ಪಿರುವವರಿಗೆ ಪರಿಹಾರ ಕೊಟ್ಟಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಪರಿಹಾರ ಬೇಕಾದ್ರೆ ಕೇಳಿ ಕೊಡೋಣ ಅದರಲ್ಲೇನಿದೆ ಎಂದಿದ್ದಾರೆ. ಅಲ್ಪ ಸಂಖ್ಯಾತ ನಾಯಕರು ಹೈ ಕಮಾಂಡ್ ಗೆ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿ ನಾವು ಎಲ್ಲ ಅಲ್ಪ ಸಂಖ್ಯಾತ ನಾಯಕರನ್ನ ಸೇರಿಸಿಕೊಂಡು ಸಭೆ ಮಾಡಿಯೇ ಟಿಕೆಟ್ ಕೊಟ್ಟಿದ್ದು. ಆಗ ಎಲ್ಲ ಒಪ್ಪಿದ್ರು ಈಗ ಕೆಲವರು ವಿರೋಧ ಮಾಡ್ತಾಯಿದ್ದಾರಷ್ಟೇ ಎಂದಿದ್ದಾರೆ.
ನಲಪಾಡ್ ನಿವಾಸದ ಮೇಲೆ ಇಡಿ ದಾಳಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಬರಿ ಕಾಂಗ್ರೆಸ್ ನವರ ಮೇಲೆಯೆ ಇಡಿ ಐಟಿ ದಾಳಿ ಆಗುತ್ತೆ ಬಿಜೆಪಿಯವರ ಮೇಲೆ ಆಗಲ್ಲ. ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೆ ಗೆಲ್ಲುತ್ತೆ. ಎಂದಿದ್ದಾರೆ.











