ಮನೆ Latest News ನಿನ್ನೆ ಪ್ರಧಾನಿ ಮೋದಿಯವ್ರು ಭಾಷಣ ಕೇಳಿದೆ, ಮಹಿಳೆಯರ ಪರವಾಗಿ ಅವರು ಏನೂ ಹೇಳಿಲ್ಲ:ಸಚಿವ ಪ್ರಿಯಾಂಕಾ ಖರ್ಗೆ...

ನಿನ್ನೆ ಪ್ರಧಾನಿ ಮೋದಿಯವ್ರು ಭಾಷಣ ಕೇಳಿದೆ, ಮಹಿಳೆಯರ ಪರವಾಗಿ ಅವರು ಏನೂ ಹೇಳಿಲ್ಲ:ಸಚಿವ ಪ್ರಿಯಾಂಕಾ ಖರ್ಗೆ ಹೇಳಿಕೆ

0

ಬೆಂಗಳೂರು; ನಿನ್ನೆ ಪ್ರಧಾನಿ ಮೋದಿಯವ್ರು ಭಾಷಣ ಕೇಳಿದೆ, ಮಹಿಳೆಯರ ಪರವಾಗಿ ಅವರು ಏನೂ ಹೇಳಿಲ್ಲ ಎಂದು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ನಿನ್ನೆ ಪ್ರಧಾನಿ ಮೋದಿಯವ್ರು ಭಾಷಣ ಕೇಳಿದೆ.59 ಬಾರಿ ಕಾಂಗ್ರೆಸ್ ಕಾಂಗ್ರೆಸ್ ಅಂತಾ ಹೇಳಿದ್ದಾರೆ.ಮಹಿಳೆಯರ ಪರವಾಗಿ ಅವರು ಏನೂ ಹೇಳಿಲ್ಲ. ಈಗ ಮೂರು ಬಿಲ್ ಗಳನ್ನು ಲೋಸಭೆಯಲ್ಲಿ ಮಂಡಿಸಿದ್ರು. ಮಹಿಳಾ ಮೀಸಲಾತಿ ಮಸೂದೆ 2023ರಲ್ಲಿ ಪಾಸ್ ಆಗಿದೆ. ಅಂದು ಮೋದಿಯವ್ರು ಸೇರಿದಂತೆ ಮಹಿಳಾ ಸಂಸದರು ಸಂಭ್ರಮಿಸಿದ್ರು. 2026ಕ್ಕೆ ಕಾಯ್ದೆಯನ್ನು ನೋಟಿಫೈ ಮಾಡಿದ್ರು. ಕಾಯ್ದೆ ಜಾರಿಗೆ ಬಂದ ಮೇಲೆ ಡೀಲಿಮಿಟೇಷನ್ ಗೆ ಲಿಂಕ್ ಮಾಡ್ತಿದ್ದಾರೆ. ಕ್ಷೇತ್ರ ಮರುವಿಂಗಡನೆ ಸಮಿತಿ‌ ರಚನೆ‌ ಮಾಡುತ್ತಾರೆ. ತಮಗೆ ಬೇಕಾದ ಹಾಗೆ ಕ್ಷೇತ್ರ ಮರುವಿಂಗಡಣೆ ಮಾಡುತ್ತಾರೆ. ಇಲ್ಲಿಯ ತನಕ ಕತ್ತೆ ಕಾಯುತ್ತಿದ್ದಾರಾ..? ಎಂದು ಪ್ರಶ್ನಿಸಿದ್ದಾರೆ.

ಇಲ್ಲಿಯ ತನಕ ಮಂಡಕ್ಕಿ ತಿಂತಿದಿರಾ..? ಈಗಲೇ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಮಾಡಿ. ಈಗಾಗಲೇ ಕಾಯ್ದೆ ಜಾರಿಯಲ್ಲಿದೆ, ನುಡಿದಂತೆ ನಡೆದು ತೋರಿಸಿ. ಸದ್ಯದ 543ಕ್ಷೇತ್ರಗಳಲ್ಲೇ ಮಹಿಳಾ ಮೀಸಲಾತಿ ನೀಡಿ. ಮಹಿಳೆಯರ‌ಮೀಸಲಾತಿ ಪರವಾಗಿದ್ದರೆ ನಿಮ್ಮ ಕ್ಯಾಬಿನೆಟ್ ನಲ್ಲೇ ಮಹಿಳಾ ಮೀಸಲಾತಿ ನೀಡಿ. 17 ಮಹಿಳೆಯರಿಗೆ ಕ್ಯಾಬಿನೆಟ್ ನಲ್ಲಿ ಮೀಸಲಾತಿ ಕೊಡಿ. ಲೋಕಸಭೆಯ ಟಿಕೆಟ್ ನೀಡುವಾಗಲು ಯಾಕೆ ಮಹಿಳೆಯರಿಗೆ ಕೊಟ್ಟಿಲ್ಲ. ಮದುವೆ ಆಗಿಲ್ಲ ಅಂತಾ ಅಫಿಡವಿಟ್ ಹಾಕಿದವ್ರು ಮಹಿಳಾ ಮೀಸಲಾತಿ ಬಿಲ್‌ ಬಗ್ಗೆ ಮಾತಾಡ್ತಿದ್ದಾರೆ. ಹೆಂಡತಿ ಎಲ್ಲಿದ್ದಾರೆ ಅಂತಾನೇ ಗೊತ್ತಿಲ್ಲ ಅವ್ರು ಮಹಿಳಾ ಮೀಸಲಾತಿ ಬಿಲ್. ಇಡೀ ಜಿಲ್ಲೆಯಲ್ಲಿ ಮಹಿಳೆಯರನ್ನು ಬಳಸಿಕೊಂಡ ಕುಟುಂಬದವ್ರು ಮಹಿಳೆಯರ ಬಗ್ಗೆ ಮಾತಾಡ್ತಿದ್ದಾರೆ. ಆರ್ ಎಸ್ ಎಸ್ ನಲ್ಲಿ‌ ಮಹಿಳೆಯರಿದ್ದಾರಾ..?. ಮಹಿಳಾ ಮೀಸಲಾತಿ ಕೊಡೊದಕ್ಕೆ ನಿಮಗೆ ಅಡ್ಡಿ ಯಾರು‌.? ಮೀಸಲಾತಿ ಬಿಲ್ ಅನ್ನೂ ಕೂಡಲೆ ಜಾರಿ ಮಾಡಿ. ರಾತ್ರಿ 8-30ಕ್ಕೆ‌ ಬಂದಲಾಗೆಲ್ಲ ಅಪಶಕುನ ತರ್ತಾರೆ. ಧೈರ್ಯ ಇದ್ರೆ ಪ್ರಧಾನಿ ಒಂದು ಪ್ರೆಸ್ ಮೀಟ್ ಮಾಡಲಿ. ಜನಗಣತಿ ಆಗದೇ ಹೇಗೆ ಬಿಲ್  ಮಂಡಿಸಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.

ಅಲ್ಪಸಂಖ್ಯಾತ ನಾಯಕರ ಮೇಲೆ ಕ್ರಮ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರೆಲ್ಲ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ.ಅವರ ಮೇಲೆ ಕ್ರಮ ಮಾಡಿದ್ದಾರೆ. ಕಾಂಗ್ರೆಸ್ ಬುದ್ಧ ಬಸವ ಅಂಬೇಡ್ಕರ್ ತತ್ವ ಇಟ್ಟುಕೊಂಡಿದೆ. ಅದಕ್ಕೆ ವಿರೋಧವಾಗಿ ನಡೆದುಕೊಂಡವರ ಮೇಲೆ ಕ್ರಮ ಆಗುತ್ತದೆ. ವೈಯಕ್ತಿಕವಾಗಿ ಯಾರ ಮೇಲೂ ಕ್ರಮ ಕೈಗೊಳ್ಳಲ್ಲ. ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಮಾಹಿತಿ ಇಟ್ಟುಕೊಂಡು ಕ್ರಮ ಮಾಡಿದ್ದಾರೆ. ನಾನು ಕೇಳಿದ್ದೇನೆ ಡಿಕೆ ಶಿವಕುಮಾರ್ ಅವರಿಗೆ ಸದ್ಗುರು ಕಾರ್ಯಕ್ರಮದ ಆಹ್ವಾನ ಇತ್ತು . ಅದಕ್ಕಾಗಿ ಅವರು ಆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಅದರ ಬಗ್ಗೆ ವಿವರಣೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಳಿದ್ರು. ಆಹ್ವಾನ ಇರೋದಕ್ಕೆ ಹೋಗಿದ್ದಾಗಿ ಡಿಕೆಶಿ ಅವರು ವಿವರಣೆ ನೀಡಿದ್ದಾರೆ ಎಂದಿದ್ದಾರೆ.