ಮನೆ Latest News ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧಿಸಲ್ಲ, ಮೊದಲು ಮನಮೋಹನ್ ಸಿಂಗ್ ಅವರು ಇದ್ದಾಗ ದೇಶದಲ್ಲಿ ತಂದಿದ್ದೇ...

ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧಿಸಲ್ಲ, ಮೊದಲು ಮನಮೋಹನ್ ಸಿಂಗ್ ಅವರು ಇದ್ದಾಗ ದೇಶದಲ್ಲಿ ತಂದಿದ್ದೇ ನಾವು; ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಬಿಲ್‌ಗೆ ಹಿನ್ನಡೆಯಾದ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧಿಸಲ್ಲ. ಮೊದಲು ಮನಮೋಹನ್ ಸಿಂಗ್ ಅವರು ಇದ್ದಾಗ ದೇಶದಲ್ಲಿ ತಂದಿದ್ದೇ ನಾವು. ಹಾಗಾಗಿ ಅದನ್ನು ವಿರೋಧಿಸುವ ಪ್ರಶ್ನೆ ಇಲ್ಲ. ಆದರೆ ಯಾವ ರೂಪದಲ್ಲಿ ಮತ್ತು ಯಾವ ಸಂದರ್ಭದಲ್ಲಿ ಈ ಬಿಲ್ ಕೇಂದ್ರ ತಂದಿದೆ ಅನ್ನೋದು ಮುಖ್ಯ. ಕ್ಷೇತ್ರ ಮರು ವಿಂಗಡಣೆ ಬಿಲ್ ಜತೆಗೆ ಮಹಿಳಾ ಮೀಸಲಾತಿ ಬಿಲ್ ತಂದಿದ್ದಾರೆ.ಮರು ವಿಂಗಡಣೆ ಬಿಲ್ ಗೆ ಮಹಿಳಾ ಮೀಸಲಾತಿ ಬಿಲ್ ತಂದಿರೋದು ಸರಿಯಲ್ಲ. ಚರ್ಚೆ ಮಾಡಬೇಕಿತ್ತು ಅಲ್ವಾ?. ಹಾಗಾಗಿ‌ ಬಿಲ್ ಗೆ ಸೋಲಾಗಿದೆ. ಇನ್ನೊಮ್ಮೆ ಕೇಂದ್ರ ಸರ್ಕಾರ ವಿಪಕ್ಷಗಳ ವಿಶ್ವಾಸ ಪಡೆದುಕೊಂಡು ಮಹಿಳಾ ಮೀಸಲಾತಿ ಬಿಲ್ ಸಂಸತ್ ನಲ್ಲಿ ತರಲಿ.ಇದೊಂದನ್ನೇ ಪ್ರತ್ಯೇಕವಾಗಿ ಸಂಸತ್ ನಲ್ಲಿ ಮಂಡಿಸಲಿ, ಮರು ವಿಂಗಡಣೆ ಬಿಲ್ ಜತೆಗೆ ತರುವುದು ಬೇಡ ಎಂದಿದ್ದಾರೆ.

ಒಳಮೀಸಲಾತಿ  ವಿಚಾರದ ಬಗ್ಗೆ ಮಾತನಾಡಿದ ಅವರು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದೇವೆ. ರೋಸ್ಟರ್ ಬಗ್ಗೆ ತೀರ್ಮಾನಿಸಲು ತಾಂತ್ರಿಕ ಸಮಿತಿ ರಚಿಸಿದ್ದೇವೆ. ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಒಂದು ವಾರದೊಳಗೆ ವರದಿ ಕೊಡಲು ತಿಳಿಸಲಾಗಿದೆ. ವೈಜ್ಞಾನಿಕವಾಗಿ, ಕಾನೂನು ಪ್ರಕಾರವೇ ಒಳ ಮೀಸಲಾತಿ ಕೊಡಬೇಕು ಅನ್ನೋದಷ್ಟೇ ನಮ್ಮ ಉದ್ದೇಶ ಎಂದ ಅವರು ವಿನಯ್ ಕುಲಕರ್ಣಿ ವಿರುದ್ಧ ಷಡ್ಯಂತ್ರ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ನಾನು ಡಿಕೆಶಿ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ಅದು ಅವರ ವೈಯಕ್ತಿಕ ಹೇಳಿಕೆ, ಅವರು ಯಾವ ಉದ್ದೇಶದಿಂದ, ಯಾವ ಅರ್ಥದಿಂದ ಆ ರೀತಿ ಹೇಳಿದ್ರೋ ಗೊತ್ತಿಲ್ಲ. ಆದ್ರೆ‌ ನಾವು ಈ ದೇಶದ ನ್ಯಾಯ ವ್ಯವಸ್ಥೆಗೆ ಗೌರವ ಕೊಡಬೇಕು. ವಿನಯ್ ಕುಲಕರ್ಣಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಅದನ್ನು ಅವರು ಮಾಡ್ತಾರೆ. ಆದ್ರೆ ಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡೋದಿಕ್ಕೆ ಆಗೋದಿಲ್ಲ ಎಂದಿದ್ದಾರೆ.

ಅಬ್ದುಲ್ ಜಬ್ಬಾರ್, ನಸೀರ್ ಅಹಮದ್ ವಿರುದ್ಧ ಕ್ರಮ ಹಿನ್ನೆಲೆಯಲ್ಲಿ ಸಿಎಂ ಅಸಹಾಯಕರಾಗಿದ್ದಾರೆ, ಸೈಲೆಂಟ್ ಆಗಿದ್ದಾರೆಂಬ ಕೆ ಎನ್ ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಅವರ ವೈಯಕ್ತಿಕ ಹೇಳಿಕೆ, ಅವರ ವೈಯಕ್ತಿಕ ಅಭಿಪ್ರಾಯ. ರಾಜಣ್ಣ ಪ್ರತಿಕ್ರಿಯೆಗೆ ನಾನು ಮಾತಾಡಲ್ಲ. ಆದ್ರೆ ಅಲ್ಪಸಂಖ್ಯಾತರನ್ನು ಪಕ್ಷ ನಿರ್ಲಕ್ಷ್ಯ ಮಾಡಿಲ್ಲ. ಮುಸ್ಲಿಂ ಸಮುದಾಯ ಪಕ್ಷದ ಬೆನ್ನಿಗೆ ನಿಂತಿದೆ.ಅವರು ನಮ್ಮ ಜತೆ ನಿಂತ ಮೇಲೆ, ಅವರ ಪ್ರಗತಿಯನ್ನು ನಾವು ಮಾಡಬೇಕು. ದಾವಣಗೆರೆಯಬೊಂ್ಉ ಸೀಟ್ ನಿಂದ ಎಲ್ಲ ಬದಲಾಗಿಬಿಡುತ್ತೆ ಅಂತ ಅಂದುಕೊಳ್ಳೋದು ಬೇಡ. ನಾವೂ ಮತ್ತು ಮುಸ್ಲಿಮರು ಸಹೋದರರು, ಇವತ್ತು ಕೂಡ ಮುಂದೆಯೂ ಕೂಡ. ಒಂದು ವಿಧಾನಸಭೆ ಕ್ಷೇತ್ರದ ಟಿಕೆಟ್ ಸಿಕ್ಕಿಲ್ಲ ಅಂತ ಮುಸ್ಲಿಮರು ಬೇಸರ ಪಟ್ಟುಕೊಳ್ಳುವ ಅಗತ್ಯ ಇಲ್ಲ. ಒಂದು ವೇಳೆ ಆಥರ ಇದ್ರೆ ಸಿಎಂ, ಡಿಸಿಎಂ, ನಾವು ಎಲ್ಲರೂ ಸೇರಿ ಅದನ್ನು ಸರಿಪಡಿಸ್ತೇವೆ ಎಂದು ತಿಳಿಸಿದ್ದಾರೆ.