ಬೆಂಗಳೂರು; ಅಲ್ಪ ಸಂಖ್ಯಾತ ನಾಯಕರ ಮೇಲೆ ಕ್ರಮ ವಿಚಾರ, ನನ್ನ ವೈಯಕ್ತಿಕ ವಿಚಾರ ಯಾವುದೂ ಇಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನನ್ನ ವೈಯಕ್ತಿಕ ವಿಚಾರ ಯಾವುದೂ ಇಲ್ಲ. ಎಲ್ಲವೂ ಪಾರ್ಟಿ ನಿರ್ಧಾರ, ಪಾರ್ಟಿಗೆ ತನ್ನದ ಆದ ವರದಿ ಇದೆ. ದೆಹಲಿ ಅವರ ಸೂಚನೆ, ಸಲಹೆ ಮೇರೆ ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನಾವು ಮಾರ್ಗದರ್ಶನ ಮಾಡಬೇಕಾಗುತ್ತದೆ. ಎಲ್ಲರೂ ನನ್ನ ಮೇಲೆಯೇ ಹೇಳಬಹುದು, ಆದ್ರೆ ಹೇಳಿದರೂ ಚಿಂತೆ ಇಲ್ಲ ನನಗೆ.ಪಕ್ಷದ ಶಿಸ್ತಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ . ನಮ್ಮ ಪಕ್ಷ ಇರೋದೇ ಪರಿಶಿಷ್ಟ ಜಾತಿ , ಪಂಗಡ, ಅಲ್ಪಸಂಖ್ಯಾತ,ಅಹಿಂದ ಸಮುದಾಯದ ಪರ. ಎಲ್ಲಾ ವರ್ಗಕ್ಕೆ ನ್ಯಾಯ ಕೋಡೋಕೆ ಇರೋದೇ ಕಾಂಗ್ರೆಸ್ ಪಕ್ಷ ಎಂದಿದ್ದಾರೆ.
ಸಿಎಂ, ಡಿಸಿಎಂ ಒಂದೇ ವಿಮಾನದಲ್ಲಿ ಹೋಗ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ದಿನವೂ ಕುಳಿತುಕೊಳ್ಳುತ್ತೇವೆ, ದಿನಾ ಕೂಡ ಮಾತಾಡುತ್ತೇವೆ. ನೀವೇ ಸುಮ್ನೆ ಭಾಗ ಮಾಡುತ್ತಿದ್ದೀರಿ. ನನ್ನ ಗುಂಪು ನನ್ನ ಗುಂಪು ಅಂತೀರಾ. ಎಲ್ಲಿದೆ ನಮ್ಮ ಗುಂಪು?. ದೆಹಲಿಯಲ್ಲಿ ಸಿದ್ದರಾಮಯ್ಯ ಅವರ ಗುಂಪು ಅಂತೀರಾ?. ಎಲ್ಲಿ ಅವರೇನು ಸಿದ್ದರಾಮಯ್ಯ ಅವರ ಗುಂಪು ಅಂತ ಬೋರ್ಡ್ ಹಾಕಿಕೊಂಡಿದ್ದಾರಾ?. ನನ್ನ ಗುಂಪು ಅಂತ ನಾನು ಬೋರ್ಡ್ ಹಾಕಿಕೊಂಡಿದ್ದೀನಾ?. ೧೪೦ ಶಾಸಕರು ಕೂಡ ನನ್ನ ಮತ್ತು ಸಿಎಂ ಅವರ ಗುಂಪೇ. ಯಾವ ಗುಂಪು, ಬೋರ್ಡ್ ಇಲ್ಲ.
ಸುಮ್ನೆ ಸಿದ್ದರಾಮಯ್ಯ ಗುಂಪು, ಡಿಕೆ ಗುಂಪು ಅಂತ ಹೇಳ್ತೀರಾ. ನಿಮಗೆ ಗುತ್ತಿದ್ಯಾ? ಸುಮ್ನೆ ನಿಮ್ಮ ಚಟಕ್ಕೆ ಗುಂಪು ಅಂತೀರಾ. ಯಾವ ಗುಂಪು ಕೂಡ ಇಲ್ಲ.ಯಾವ ಸ್ಟೇಟ್ಮೆಂಟ್ ಇಲ್ಲ, ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು ಎಂದು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ರೋಡ್ ಬಗ್ಗೆ ಮಾತಾಡಿದ್ದೇವೆ.ನೆಲ ಮಂಗಲದಲ್ಲಿ ಸಮಸ್ಯೆ ಆಗ್ತಿದೆ ಅಂದಿದ್ದಾರೆ. ಅರ್ಧ ಮುಕ್ಕಾಲು ಗಂಟೆ ಟ್ರಾಫಿಕ್ ಆಗುತ್ತೆ. ಬೆಂಗಳೂರು ಸಿಟಿಗೆ ವಹಿಲಲ್ ಅವೈಡ್ ಮಾಡಬೇಕು.ಏನು ಮಾಡೋಕೆ ಸಾಧ್ಯ ಅಂತ ನೋಡಬೇಕು. ಈಗಾಗಲೇ ನಾವು ಬ್ಯುಸಿನೆಸ್ ಕಾರಿಡಾರ್ ಮಾಡಿದ್ದೇವೆ.ನಾವು ಈ ಎಲ್ಲಾ ವಿಚಾರದ ಬಗ್ಗೆ ಮಾತಾಡಿದ್ದೇವೆ. ಎರಡನೇದಾಗಿ ರಾಜಕಾರಣ ದ ಬಗ್ಗೆ ಮಾತಾಡಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷದ ಅಭಿವೃದ್ಧಿ ಗೆ ಏನು ಬೇಕು ಅದನ್ನ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.











