ಮನೆ Latest News ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ಸಮಸ್ಯೆ ಕುರಿತಂತೆ ಬೇಡಿಕೆ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ಸಮಸ್ಯೆ ಕುರಿತಂತೆ ಬೇಡಿಕೆ ಪತ್ರ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ಸಮಸ್ಯೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಬೇಡಿಕೆ ಪತ್ರ ಸಲ್ಲಿಸಿದ್ದಾರೆ.ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ 18 ಬೇಡಿಕೆಯುಳ್ಳ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ. ಅನುದಾನ, ಕೇಂದ್ರ ಘೋಷಿಸಿದ ಯೋಜನೆಗಳು ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಅನುದಾನ ಬಗ್ಗೆ ಮನವಿ ಮಾಡಿದ್ದಾರೆ.

 

ಆ 18 ಬೇಡಿಕೆಗಳು ಈ ಕೆಳಗಿನಂತಿವೆ

 

* ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆಗೆ ಮನವಿ

 

*ರಾಜ್ಯ ಸರ್ಕಾರವು 1,123 ಎಕರೆ ಭೂಮಿಯನ್ನು ನೀಡಿದ್ದರೂ ಈ ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ.

ಇದನ್ನು ಪುನರುಜ್ಜೀವನಗೊಳಿಸಲು ಮನವಿ.

 

* ಮೈಸೂರಿಗೆ ಹೈ-ಸ್ಪೀಡ್ ರೈಲು ವಿಸ್ತರಣೆ ಮನವಿ.

 

ಪ್ರಸ್ತಾವಿತ ಹೈ-ಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಬೆಂಗಳೂರು-ಮೈಸೂರು ವಿಭಾಗವನ್ನು ಸೇರಿಸಲು ಕೋರಿಕೆ.

 

* ಬೆಂಗಳೂರು ಉಪನಗರ ರೈಲು ಮತ್ತು ಮುಂಬೈ ಹೈ-ಸ್ಪೀಡ್ ಕಾರಿಡಾರ್ ಕುರಿತು ಮನವಿ.

 

ಬೆಂಗಳೂರು ಉಪನಗರ ರೈಲು ಯೋಜನೆಗೆ ಹಣ ಬಿಡುಗಡೆ ಮಾಡಲು ಮತ್ತು ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕವನ್ನು ಸಂಪರ್ಕಿಸುವ ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ ಆರಂಭಿಸಲು ವಿನಂತಿ.

 

* ಜಲ ಜೀವನ್ ಮಿಷನ್ (JJM) ಕೇಂದ್ರ ಸರ್ಕಾರದಿಂದ ಬರಬೇಕಾದ ₹17,554 ಕೋಟಿ ಬಾಕಿ ಹಣವನ್ನು ಬಿಡುಗಡೆ ಮಾಡಲು ಮನವಿ.

 

* ಗ್ರಾಮ ಪಂಚಾಯತ್‌ಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಗೆ ಮನವಿ.

 

*2025-26ನೇ ಸಾಲಿಗೆ ಬರಬೇಕಾದ ₹2,860 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಮನವಿ.

 

* ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ವಿಚಾರ ಮನವಿ.

 

*ಕಳೆದ 12 ವರ್ಷಗಳಿಂದ ಯಾವುದೇ ಪ್ರಮುಖ ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮಂಜೂರಾಗಿಲ್ಲ.

 

*ಬಾಕಿ ಇರುವ ಯೋಜನೆಗಳ ಮಂಜೂರಾತಿಗೆ ಕೋರಿಕೆ.

 

* ಕಂದಾಯ ಕೊರತೆ ಅನುದಾನ ಬಿಡುಗಡೆಗೆ ಮನವಿ

 

15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ₹5,495 ಕೋಟಿ ಬಾಕಿ ಅನುದಾನದ ಬಿಡುಗಡೆಗೆ ವಿನಂತಿ.

 

* ಬೆಂಗಳೂರಿಗೆ ವಿಶೇಷ ಅನುದಾನಕ್ಕೆ ಮನವಿ.

 

ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ ₹26,000 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕೋರಿಕೆ.

 

* ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಮನವಿ.

 

ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡಲು ಕೇಂದ್ರಕ್ಕೆ ಒತ್ತಾಯ.

 

* ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಲು ಮನವಿ.

 

ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿದ್ದ ₹5,300 ಕೋಟಿ ಸಹಾಯಧನ ಬಿಡುಗಡೆ ಮಾಡಲು ಮನವಿ

 

ಇದಕ್ಕೆ ರಾಷ್ಟ್ರೀಯ ಯೋಜನೆ ಎಂಬ ಸ್ಥಾನಮಾನ ನೀಡಲು ಕೋರಿಕೆ.

 

* ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ-2 (KWDT-II) ಅಧಿಸೂಚನೆಗೆ ಮನವಿ.

 

ಈ ನ್ಯಾಯಾಧೀಕರಣದ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಮತ್ತು

 

ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡಲು ಮನವಿ.

 

* ಕಳಸಾ ನಾಲಾ ಯೋಜನೆ (ಮಹದಾಯಿ) ಬಗ್ಗೆ ಮನವಿ.

 

ಕುಡಿಯುವ ನೀರಿನ ಉದ್ದೇಶದ ಈ ಯೋಜನೆಗೆ ವನ್ಯಜೀವಿ ವಿಭಾಗದಿಂದ ಶೀಘ್ರವಾಗಿ ಅನುಮತಿ ಕೊಡಿಸಲು ಮನವಿ.

 

* ನದಿಗಳ ಜೋಡಣೆ ಯೋಜನೆಯಲ್ಲಿ ಪಾಲು ಬಗ್ಗೆ ಮನವಿ.

 

ಗೋದಾವರಿ-ಕಾವೇರಿ ಮತ್ತು ಬೆಡ್ತಿ-ವರದಾ ನದಿ ಜೋಡಣೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ಕನಿಷ್ಠ 40-45 TMC ನೀರನ್ನು ಹಂಚಿಕೆ ಮಾಡಲು ಒತ್ತಾಯ.

 

* 9ನೇ ವೇಳಾಪಟ್ಟಿಗೆ ಮೀಸಲಾತಿ ಪಾಲಿಸಿ ಸೇರ್ಪಡೆ ಮನವಿ.

 

ರಾಜ್ಯದ 56% ಮೀಸಲಾತಿ ನೀತಿಯನ್ನು ಸಂವಿಧಾನದ ಒಂಬತ್ತನೇ ವೇಳಾಪಟ್ಟಿಗೆ ಸೇರಿಸಲು ಮನವಿ.

 

* ಪರಿಶಿಷ್ಟ ಪಂಗಡದ (ST) ಪಟ್ಟಿಗೆ ಸೇರ್ಪಡೆಗೆ ಮನವಿ.

 

ರಾಜ್ಯ ಶಿಫಾರಸು ಮಾಡಿರುವ ಕೆಲವು ಹಿಂದುಳಿದ ಜಾತಿಗಳನ್ನು ಕೇಂದ್ರದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ವಿನಂತಿ.

 

* ಕಲ್ಯಾಣ ಕರ್ನಾಟಕಕ್ಕೆ ಆರ್ಥಿಕ ಬೆಂಬಲ ನೀಡಲು ಮನವಿ.

 

ಆರ್ಟಿಕಲ್ 371(J) ಅನ್ವಯ ಈ ಪ್ರದೇಶದ ಅಭಿವೃದ್ಧಿಗೆ ವಾರ್ಷಿಕ ₹5,000 ಕೋಟಿ ನೀಡಲು ಮತ್ತು

 

ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಸಾರ್ವಜನಿಕ ವಲಯದ ಉದ್ಯಮ (PSU) ಸ್ಥಾಪಿಸಲು ಕೋರಿಕೆ.

 

* ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಮನವಿ ಸಲ್ಲಿಕೆ.

 

2,000 ಮೆಗಾವ್ಯಾಟ್ ಸಾಮರ್ಥ್ಯದ ಈ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳನ್ನು ಶೀಘ್ರವಾಗಿ ನೀಡಲು ವಿನಂತಿ.

 

* ರಾಯಚೂರಿನಲ್ಲಿ ಏಮ್ಸ್ (AIIMS) ಸ್ಥಾಪನೆಗೆ ಮನವಿ.

 

ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸುಧಾರಣೆಗಾಗಿ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆಯನ್ನು ಸ್ಥಾಪಿಸಲು ಮಂಜೂರಾತಿ ನೀಡಲು ಮನವಿ ಸಲ್ಲಿಕೆ  ಮಾಡಿದ್ದಾರೆ.