ಬೆಂಗಳೂರು: ಪಕ್ಷದಲ್ಲಿ ಶಿಸ್ತು ಬಹಳ ಇಂಪಾರ್ಟೆಂಟ್ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ವಜಾ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಬೆಳಗ್ಗೆ ನ್ಯೂಸ್ ನಲ್ಲಿ ನೋಡಿದೆ. ನಮಗೂ ಕೆಲವು ವರದಿಗಳು ಬಂದಿತ್ತು. ವರದಿಗಳನ್ನ ಕೊಟ್ಟಿದ್ರು, ಮಾಹಿತಿ ಇತ್ತು. ಪಕ್ಷದಲ್ಲಿ ಶಿಸ್ತು ಬಹಳ ಇಂಪಾರ್ಟೆಂಟ್. ಕೆಲವರಿಗೆ ಜವಬ್ದಾರಿ ಕೊಟ್ಟಿರ್ತಿವಿ. ಏನಾಗಿದೆ ಅಂತ ಒಂದು ವರದಿ ಬರಬೇಕು, ನಾವು ವೇಟ್ ಮಾಡ್ತಿದ್ದೀವಿ. ಜಮೀರ್ ವಿರುದ್ಧ ವರದಿ ಕೊಟ್ಟಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಮಾಹಿತಿ ಇಲ್ಲ. ಚೆನ್ನೈಗೆ ನಾನು ಇವತ್ತು ಸಂಜೆ ಹೋಗ್ತೇನೆ. ನಾಳೆ ಕಾರ್ಯಕ್ರಮ, ಕ್ಯಾಂಪೇನ್ ಇದೆ. ಐದಾರು ಕ್ಷ಼ೇತ್ರದಲ್ಲಿ ವರ್ಕೌಟ್ ಮಾಡಬೇಕು ಎಂದಿದ್ದಾರೆ.
ಶಾಸಕರನ್ನ ಒಬ್ಬೊಬ್ಬರನ್ನಾಗಿ ಕರೆದು ಡಿಕೆಶಿ ಮಾತಾಡ್ತಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜಕಾರಣ ಮಾಡಲು ಎಲ್ಲ ಎಂಎಲ್ ಎಗಳ ಮುಂದಿನ ಭವಿಷ್ಯ ರೂಪಿಸಲು ತೀರ್ಮಾನ ಮಾಡಬೇಕಲ್ಲ.ಯಾರ್ ಯಾರಿಗೆ ಏನು ಹೇಳಬೇಕು, ಏನ್ ಗೈಡ್ ಮಾಡಬೇಕು. ಎಲ್ಲರಿಗೂ ಕರೆದು ಮಾಡ್ತಿವಿ.ಕಾರ್ಪೋರೇಷನ್ ಚುನಾವಣೆ ಸಿದ್ದತೆಗಳು, ಸ್ಥಳೀಯ ಚುನಾವಣೆಗಳು ಇದೆಲ್ಲದರ ಬಗ್ಗೆ ಮಾತನಾಡೋದು ನಮ್ಮ ಕರ್ತವ್ಯ.ಪಾರ್ಟಿ ಅಧ್ಯಕ್ಷನಾಗಿ ನಾನು ಮಾತನಾಡದೇ ಇದ್ರೆ, ಇನ್ಯಾರು ಮಾತಾಡ್ತಾರೆ. ಬಾಗಲಕೋಟೆಗೆ ಕಳಿಸಿದ್ದೆ ಕೆಲವರನ್ನ .ಏನೆನಾಯ್ತು..? ಯಾವ ರೀತಿ ಎಲೆಕ್ಷನ್ ಆಗಿದೆ, ಜನರ ಅಭಿಪ್ರಾಯ ಏನಿದೆ. ನಮ್ ಗ್ಯಾರಂಟಿ ಹೇಗೆ ತಲುಪಿದೆ.ಈ ಬಗ್ಗೆ ಅವ್ರು ವರದಿ ಕೊಡ್ತಿದ್ದಾರೆ ಎಂದು ತಿಳಿಸಿದ್ದಾರೆ.
ಯಾವುದೇ ಪಕ್ಷ ಶಿಸ್ತಿಲ್ಲದೇ ಹೋದ್ರೆ ಕಷ್ಟ ಆಗುತ್ತದೆ. ಏನೂ ಮಾಡಲು ಆಗೋದಿಲ್ಲ. ಅಭ್ಯರ್ಥಿ ಫೈನಲ್ ಮಾಡುವಾಗ ಎಲ್ಲರನ್ನೂ ಕೇಳಿ ಮಾಡಿದ್ದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಮಾಡಿದ್ದು. ಅಷ್ಟು ಮಾತ್ರ ಗೊತ್ತು.ಬಳಿಕ ಏನು ಡೆವಲ್ಪಮೆಂಟ್ ಆಗಿದೆ ನಿಮಗೆ ಗೊತ್ತಿದೆ .ಅದರ ವರದಿ ಕೊಟ್ಟಿದ್ದಾರೆ. ಅಬ್ದುಲ್ ಜಬ್ಬಾರ್ ಅವರು ರೆಸಿಗ್ನೇಷನ್ ಕೊಟ್ಟಿದ್ದಾರೆ ಅದರಂತೆ ಅಕ್ಸೆಪ್ಟ್ ಆಗಿದೆ ಎಂದು ಹೇಳಿದ್ದಾರೆ.











