ಮನೆ Latest News ಖರ್ಗೆಯವರೇ ನೀವು ಮಾನಸಿಕ ಅಸ್ವಸ್ಥರ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದೀರಿ; ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ...

ಖರ್ಗೆಯವರೇ ನೀವು ಮಾನಸಿಕ ಅಸ್ವಸ್ಥರ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದೀರಿ; ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ

0

ಬೆಂಗಳೂರು; ಖರ್ಗೆಯವರೇ ನೀವು ಮಾನಸಿಕ ಅಸ್ವಸ್ಥರ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದೀರಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

 

ಪ್ರಧಾನಿ ಮೋದಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು

ಮಲ್ಲಿಕಾರ್ಜುನ ಖರ್ಗೆಯವರೇ ತಮ್ಮದು ಆರು ದಶಕಗಳ ಸುದೀರ್ಘ ರಾಜಕೀಯ ಜೀವನ. ಇತ್ತೀಚಿನ ದಿನಗಳಲ್ಲಿ ತಮ್ಮ ಹೇಳಿಕೆ ರಾಜಕೀಯ ಅನುಭವಕ್ಕೆ ತಕ್ಕುದಾದುದಲ್ಲ. ಮಾನಸಿಕ ಅಸ್ವಸ್ಥರ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದೀರಿ.

ನೀವು ಮಾನಸಿಕ ಆಸ್ಪತ್ರೆಯ ರೋಗಿಯ ರೀತಿಯಲ್ಲಿ ವರ್ತಿಸುತ್ತಿದ್ದೀರಿ ಎಂದು ಜನ ಭಾವಿಸಿದ್ದಾರೆ. ನಿಜವಾದ ಭಯೋತ್ಪಾದಕರನ್ನು ನಿಮ್ಮ ಪಕ್ಷದ ಮುಖಂಡರು ನಮ್ಮ ಬ್ರದರ್ಸ್ ಅಂತಾರೆ. ಮಾನಸಿಕ ದೌರ್ಬಲ್ಯಗಳ ಸುಳಿಗೆ ನೀವು ಸಿಕ್ಕಿಹಾಕಿಕೊಂಡಿದ್ದೀರಿ ಎಂದಿದ್ದಾರೆ.

ಕರ್ನಾಟಕ ಮತ್ತು ಕನ್ನಡಿಗರ ಗೌರವ ಹಾಳು ಮಾಡುವ ರೀತಿಯಲ್ಲಿ ನಿಮ್ಮ ಹೇಳಿಕೆ ಇದೆ. ರಾಷ್ಟ್ರೀಯ ಅಧ್ಯಕ್ಷರಾಗಿ ನಿಮ್ಮ ಹೇಳಿಕೆ ನಿಮ್ಮ ಪಕ್ಷದ ಗೌರವವನ್ನೂ ಹಾಳು ಮಾಡಿದೆ. ನೀವು ಇದನ್ನೇ ಮುಂದುವರಿಸಿದರೆ ಜನ ನಿಮ್ಮನ್ನು ಮಾನಸಿಕ ಆಸ್ಪತ್ರೆ ರೋಗಿ ಎಂದು ಭಾವಿಸುತ್ತಾರೆ. ನಿಮ್ಮ ಪಕ್ಷಕ್ಕೆ ಕೆಟ್ಟ ಛಾಳಿಯನ್ನು ಕಲಿಸಬೇಡಿ.ನೀವು ಮತ್ತು ನಿಮ್ಮ ನಾಯಕ ನಫ್ರತ್ ಕಾ ದುಖಾನ್ ಅನ್ನು ಬಂದ್ ಮಾಡಿ. ನಿಮ್ಮ ಹೇಳಿಕೆಗಳು ನಿಮಗೇ ತಿರುಗುಬಾಣ ಆಗುತ್ತವೆ.ಜನ ಪ್ರೀತಿ ಇರುವವರೆಗೆ ನಿಮ್ಮಂತಹ ದ್ವೇಷ ಕಾರುವ ಜನ ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.