ಮನೆ Latest News ನನಗೆ ಮುಖ್ಯಮಂತ್ರಿ ಸ್ಥಾನಕ್ಕಿಂತ ರಾಜ್ಯಕ್ಕೆ ಒಳ್ಳೆದಾಗಬೇಕು; ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ

ನನಗೆ ಮುಖ್ಯಮಂತ್ರಿ ಸ್ಥಾನಕ್ಕಿಂತ ರಾಜ್ಯಕ್ಕೆ ಒಳ್ಳೆದಾಗಬೇಕು; ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ

0

ಕೋಲಾರ; ನನಗೆ ಮುಖ್ಯಮಂತ್ರಿ ಸ್ಥಾನಕ್ಕಿಂತ ರಾಜ್ಯಕ್ಕೆ ಒಳ್ಳೆದಾಗಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.

ಕೋಲಾರದ ಮಾಲೂರಿನಲ್ಲಿ ಜೆಡಿಎಸ್ ಮುಖಂಡ ರಾಮೇಗೌಡ ಮನೆ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಮುಖ್ಯಮಂತ್ರಿ ಸ್ಥಾನಕ್ಕಿಂತ ರಾಜ್ಯಕ್ಕೆ ಒಳ್ಳೆದಾಗಬೇಕು ರಾಜ್ಯದಲ್ಲಿರುವ ಕೆಟ್ಟ ವಾತಾವರಣ ಸರಿಹೋಗಬೇಕು. ರಾಜ್ಯ ಸರ್ಕಾರ ಗ್ಯಾರಂಟಿ ಅಥವಾ ನಾವು ನುಡಿದಂತೆ ನಡೆದಿದ್ದೇವೆ . ಏನೇ ಹೇಳಿದ್ರು ಜನರಿಗೆ ಈ ಸರ್ಕಾರದ ಮೇಲೆ ಅಸಮಧಾನವೂ ಇದೆ ಆಕ್ರೋಶವು ಇದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಅನ್ನೋದಕ್ಕೆ ಚುನಾವಣಾ ಆಯೋಗದ ಆಯುಕ್ತರು ಚುನಾವಣೆ ನಡೆಸಲು ನಮ್ಮಲ್ಲಿ ಹಣ ಇಲ್ಲ ಅನ್ನೋದನ್ನ ಅಫಿಡಮಿಟ್ ಹಾಕ್ತಾರೆ ಅಂದರೆ ಸರ್ಕಾರದ ಪರಿಸ್ಥಿತಿ ಎಲ್ಲಿಗೆ ಬಂದಿದೆ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲಿಗೆ ಬಂದಿದೆ ಅದರ ಬಗ್ಗೆ ಬಗೆಹರಿಸಿಲ್ಲ ಈಗ 40 ಕೋಟಿ ಹಣ ಕೊಡ್ತೀವಿ ಎನ್ನುತ್ತಿದ್ದಾರೆ, ಅದು ಕುಡಿಯುವ ನೀರಿಗೆ ಕೊಡ್ತಾರಾ ಇಲ್ಲಾ ಯಾವುದಾದ್ರು ಚುನಾವಣೆಗೆ ಕೊಡ್ತಾರೋ ನೋಡಬೇಕು ಎಂದು ಹೇಳಿದ್ದಾರೆ.

ಮಾಜಿ ಸಚಿವ ಸುಧಾಕರ್ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ, ಮಾಧ್ಯಮದವರು ಕೇಳಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ. ಹಿರಿಯೂರಿಗೆ ಸಂಬಂಧಿಸಿದಂತೆ ಏನು ಮಾಡ್ತೀರಿ ಎಂದಿದ್ದಕ್ಕೆ ಹೇಳಿದ್ದಾನೆ. ಆಗ ಅವರ ಆರೋಗ್ಯ ಸರಿಇಲ್ಲದ ಸಂದರ್ಭದಲ್ಲಿ ಮಾತನಾಡುವುದು ಅನಾವಶ್ಯಕ. ಕೆಲವು ದುರ್ಬುದ್ದಿ ಜನ ಇರ್ತಾರೆ ಅಂತ ಜನರ ಹೆಬ್ಬೆಟ್ಟಿನ ಘಟನೆ ನಡೆಯುತ್ತದೆ.ಅದರ ಬಗ್ಗೆ ಎಚ್ಚರವಿರಲಿ ಅನ್ನೋದನ್ನ ಹೇಳಿದ್ದಾನೆ, ಮಾರ್ಮಿಕವಾಗಿ ಏನು ಹೇಳಿಲ್ಲ ಸಮಾಜದಲ್ಲಿ ನಡೆಯೋದನ್ನ ಹೇಳಿದ್ದಾನೆ ಇಂಥ ಸಂದರ್ಭವನ್ನು ಕೆಲವರು ದರ್ಬಳಕೆ ಮಾಡಿಕೊಳ್ಳೊದನ್ನ ಹೇಳಿದ್ದಾನೆ ಎಂದಿದ್ದಾರೆ.

ಕಾಂಗ್ರೆಸ್ ನಲ್ಲಿ ಕೆಲವು ಶಾಸಕರು ಸೋಲುವ ಕುರಿತು ರಿಪೋರ್ಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ರಿಪೋರ್ಟ್ ಬಗ್ಗೆ ಗೊತ್ತಿಲ್ಲ. ರಾಜ್ಯ ಕಾಂಗ್ರೇಸ್​ ನಲ್ಲಿ ಸದ್ಯಕ್ಕೆ ಮುಖ್ಯಮಂತ್ರಿಯ ಪೈಪೋಟಿ ನಡೆಯುತ್ತಿದೆ ಹಲವು ವರ್ಷಗಳಿಂದ ಸಂಕ್ರಾಂತಿ, ಯುಗಾದಿ, ದೀಪಾವಳಿ ಅಂತ ಕೇಳಿದ್ದೇನೆ, ಈಗ ಪಂಚರಾಜ್ಯದ ಚುನಾವಣೆ ಫಲಿತಾಂಶದ ಬಳಿಕ ಎನ್ನಲಾಗುತ್ತಿದೆ. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಒಳಮೀಸಲಾತಿ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಇಷ್ಟಪಡುವುದಿಲ್ಲ,  ಸಮಾಜದಲ್ಲಿ ಸ್ವತಂತ್ರ್ಯ ಬಂದು 78 ವರ್ಷದಲ್ಲಿ ಮೀಸಲಾತಿ ಬಗ್ಗೆ ಬಾಬಾ ಸಾಹೇಬ್​ ಅಂಬೇಡ್ಕರ್ ಕೊಟ್ಟಿರುವ ಮೀಸಲಾತಿ ಶಕ್ತಿ ಆ ಕುಟುಂಬಗಳಿಗೆ  ಪ್ರಾಮಾಣಿಕರವಾಗಿ ಸಿಗಬೇಕು ಅನ್ನೋದು ನನ್ನ ಉದ್ದೇಶ. ಅದರಲ್ಲಿ ರಾಜಕೀಯ ಬೆರೆಸಲ್ಲ, ಎಲ್ಲಾ ಸಂತೃಪ್ತಿಯಾಗಿರಬೇಕು ನಾನು ಅದನ್ನು ಎತ್ತಿಕಟ್ಟಲು ಸಿದ್ದನಿಲ್ಲ ಎಂದ ಅವರು ಬಿಜೆಪಿಯಲ್ಲಿ‌ ನಾಯಕರ ಕೊರತೆ‌ ವಿಚಾರದ ಬಗ್ಗೆ ಮಾತನಾಡಿ  ಬಿಜೆಪಿಯಲ್ಲಿ ಸಮರ್ಥವಾಗಿ ನಾಯಕತ್ವ ನಿರ್ವಹಣೆ ಮಾಡುವಂತಹವರು ಸಾಕಷ್ಟು ಜನ ಇದ್ದಾರೆ, ಹಲವಾರು ಪ್ರಮುಖರಿದ್ದಾರೆ ಅವರಿಗೆ ಆಡಳಿತ ನಡೆಸಿದ ಅನುಭವ ಪಕ್ಷ ಕಟ್ಟಿದ ಅನುಭವಿದೆ, ಆದರೆ ಕೂತು ಚರ್ಚೆ ಮಾಡಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಅನ್ನೋದರ ಕುರಿತು ಚರ್ಚೆ ಮಾಡಿ ಹೋರಾಟ ಮಾಡಬೇಕು, ಎಲ್ಲಾ ಪಕ್ಷದಲ್ಲೂ ಗೊಂದಲ ಇದ್ದೇ ಇದೆ, ಬಿಜೆಪಿ ಹೈಕಮಾಂಡ್​ ನಲ್ಲಿ ನಾಯತ್ವದ ಗೊಂದಲ ಬಗೆಹರಿಸುವ ಸಾಮಥ್​ಯ ಇದೆ ಅವರು ಸಮಯ ಬಂದಾಗ ಸರಿ ಮಾಡುತ್ತಾರೆ ಎಂದಿದ್ದಾರೆ.

ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ವಿಚಾರದ ಬಗ್ಗೆ ಮಾತನಾಡಿ ನನಗೆ ಮುಖ್ಯಮಂತ್ರಿ ಸ್ಥಾನಕ್ಕಿಂತ ರಾಜ್ಯಕ್ಕೆ ಒಳ್ಳೆದಾಗಬೇಕು ರಾಜ್ಯದಲ್ಲಿರುವ ಕೆಟ್ಟ ವಾತಾವರಣ ಸರಿಹೋಗಬೇಕು, ರಾಜ್ಯ ಸರ್ಕಾರ ಗ್ಯಾರಂಟಿ ಅಥವಾ ನಾವು ನುಡಿದಂತೆ ನಡೆದಿದ್ದೇವೆ ಏನೇ ಹೇಳಿದ್ರು ಜನರಿಗೆ ಈ ಸರ್ಕಾರದ ಮೇಲೆ ಅಸಮಧಾನವೂ ಇದೆ ಆಕ್ರೋಶವು ಇದೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಅನ್ನೋದಕ್ಕೆ ಚುನಾವಣಾ ಆಯೋಗದ ಆಯುಕ್ತರು ಚುನಾವಣೆ ನಡೆಸಲು ನಮ್ಮಲ್ಲಿ ಹಣ ಇಲ್ಲ ಅನ್ನೋದನ್ನ ಅಫಿಡಮಿಟ್ ಹಾಕ್ತಾರೆ ಅಂದರೆ ಸರ್ಕಾರದ ಪರಿಸ್ಥಿತಿ ಎಲ್ಲಿಗೆ ಬಂದಿದೆ.ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲಿಗೆ ಬಂದಿದೆ ಅದರ ಬಗ್ಗೆ ಬಗೆಹರಿಸಿಲ್ಲ ಈಗ 40 ಕೋಟಿ ಹಣ ಕೊಡ್ತೀವಿ ಎನ್ನುತ್ತಿದ್ದಾರೆ, ಅದು ಕುಡಿಯುವ ನೀರಿಗೆ ಕೊಡ್ತಾರಾ ಇಲ್ಲಾ ಯಾವುದಾದ್ರು ಚುನಾವಣೆಗೆ ಕೊಡ್ತಾರೋ ನೋಡಬೇಕು ಎಂದು ತಿಳಿಸಿದ್ದಾರೆ.