ಬೆಂಗಳೂರು; ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಕೂಡ ಈ ರೀತಿಯಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಬಗ್ಗೆ ಕೇಂದ್ರ ವಿರುದ್ಧ ಹರಿಹಾಯ್ದ ಅವರು ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಮಾಡಿದೆ. ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಕೂಡ ಈ ರೀತಿಯಾಗಿ ಪೆಟ್ರೋಲ್ ಡೀಸೆಲ್ ಏರಿಕೆಯಾಗಿರಲಿಲ್ಲ. ಸಾಮಾನ್ಯ ಜನರ ಜೀವನ ದುಬಾರಿಯಾಗಿದೆ. ಮಧ್ಯಮ ವರ್ಗದ ಜನರ ಜೀವನ ದುಬಾರಿಯಾಗಿದೆ. ಎಲ್ಲಾ ವಸ್ತುಗಳ ಮೇಲಿನ ಬೆಲೆ ಏರಿಕೆ ಆಗಿದೆ. ಮೋದಿ ಬಿಜೆಪಿ ಸರ್ಕಾರ ಬಂದರೆ ಅಚ್ಚೇ ದಿನ್ ಎಂದಿದ್ದರು. ಗುಜರಾತ್ ಮಾದರಿ ಎಂಬ ಭರವಸೆ ಕೊಡಲಾಗಿತ್ತು. ಆದರೆ ಜನರಿಗೆ ಟೋಪಿ ಹಾಕಿದ್ದಾರೆ. ಯುಪಿಎ ಅವಧಿಯಲ್ಲಿ ಪೆಟ್ರೋಲ್ ದರ ಏರಿಕೆ ಆದಾಗ ಮೋದಿ ಏನು ಮಾತನಾಡಿದ್ದರು?. 11 ದಿನಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 110 ರೂ 93 ಪೈಸೆ ಆಗಿದೆ. ಡೀಸೆಲ್ ದರ 98.89 ರೂಪಾಯಿ ಆಗಿದೆ. ಶೀಘ್ರದಲ್ಲೇ 100 ದಾಟುತ್ತೆ ಎಂದಿದ್ದಾರೆ.
ಸಿಎಂ ದೆಹಲಿ ಪ್ರಯಾಣ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ದೆಹಲಿಗೆ ಬರುವಂತೆ ನನಗೆ ಆಹ್ವಾನ ಬಂದಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಸಭೆ ಇದೆ. ಆದ್ರೆ ಸಭೆಯ ವಿಷ್ಯ ನನಗೆ ಗೊತ್ತಿಲ್ಲ, ಆದ್ರೆ ಆಹ್ವಾನ ಬಂದಿದೆ. ವೇಣುಗೋಪಾಲ ನನಗೆ ಕರೆ ಮಾಡಿದರು, ಸಭೆಗೆ ಬರುವಂತೆ ಸೂಚಿಸಿದ್ದಾರೆ. ಊಹಾಪೋಹಗಳು ಯಾವಾಗಲೂ ಇದ್ದಿದ್ದೇ ಎಂದಿದ್ದಾರೆ.











