ಬೆಂಗಳೂರು; ಸಿಎಂ ಸಿದ್ದರಾಮಯ್ಯ ಪೆಟ್ರೋಲ್ ದರ ಏರಿಕೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಪೆಟ್ರೋಲ್ ದರ ಏರಿಕೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ವಿಶ್ವದ 60 ರಾಷ್ಟ್ರಗಳಲ್ಲಿ ಪೆಟ್ರೋಲ್ ಸಂಕಷ್ಟ ಎದುರಾಗಿದೆ. ಸಿಎಂ ಸಿದ್ದರಾಮಯ್ಯರಿಗೆ ನಾಚಿಕೆ ಇಲ್ವಾ..?. ಕರ್ನಾಟಕದಲ್ಲಿ 107.70 ರೂ ಇದೆ. ದೆಹಲಿಯಲ್ಲಿ 99.50 ಪೈಸೆ ಇದೆ .ದೆಹಲಿಗಿಂತ ಕರ್ನಾಟಕದಲ್ಲಿ ಪೆಟ್ರೊಲ್ ದರ ಹೆಚ್ಚಿದೆ. ಸಿದ್ದರಾಮಯ್ಯಗೆ ಜ್ಞಾನ ಇದ್ದಿದ್ರೆ ತೆರಿಗೆ ಕಡಿಮೆ ಮಾಡ್ತಿದ್ರು. ವ್ಯಾಟ್ ಕಡಿಮೆ ಮಾಡಿದ್ರೆ ದೆಹಲಿಯಲ್ಲಿ ಎಷ್ಟಿದೆಯೇ ಅಷ್ಟು ಆಗುತ್ತೆ. ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತಿದೆ. ಪೆಟ್ರೋಲ್ ಮಾರಾಟದಿಂದ ಕೇಂದ್ರಕ್ಕೆ ಆದಾಯ ಬರುವುದಿಲ್ಲ. ರಾಜ್ಯಕ್ಕೆ ಆದಾಯ ಬರುತ್ತದೆ. ಕುತಂತ್ರ ಮಾಡಿ ಗ್ಯಾರಂಟಿಗೆ ಹಣ ಕೊಡುತ್ತಿದ್ದಾರೆ. ಪೆಟ್ರೋಲ್ ದರ ಏರಿಕೆಯಿಂದ ಕೇಂದ್ರಕ್ಕೆ ನಯಾಪೈಸೆ ಆದಾಯವಿಲ್ಲ. ಸವಾಲು ಹಾಕ್ತಿನಿ, ಪೆಟ್ರೋಲ್ ದರ ಏರಿಕೆ ಯಿಂದ ಎಷ್ಟು ಹಣ ಬರುತ್ತೆ ಹೇಳಿ. ಹೋರಾಟ ಮಾಡ್ತಿನಿ ಅಂತಾರೆ ಅದು ಬೋಗಸ್ ಹೋರಾಟ. ಜನರಿಗೆ ವಂಚನೆ, ಟೋಪಿ ಹಾಕ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭಟ್ಕಳದಲ್ಲಿ ಗಲಭೆ ಶುರುವಾಗಿದೆ. ಕಲಬುರ್ಗಿ ಕೇಸ್ ವಾಪಾಸ್ ತೆಗೆದುಕೊಂಡ್ರು. ಭಟ್ಕಳದಲ್ಲಿ ಹಿಂದೂ ದೇವರ ಕಟ್ಟೆ ಮೇಲೆ ದಾಳಿ ಮಾಡಿದ್ದಾರೆ. ಮುಸ್ಲಿಮ್ ಬ್ರದರ್ಸ್ ದೇವರ ಕಟ್ಟೆ ಒಡೆದು ಹಾಕಿದ್ದಾರೆ. ಟೋಪಿರಾಮಯ್ಯ ಇರೋವರೆಗೂ ಕೇಸ್ ವಾಪಾಸ್ ತೆಗೆಯುತ್ತಾರೆ ಎಂದೇ ದಾಳಿ ಮಾಡಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ, ಅದರೂ ಕ್ರಮ ತೆಗೆದುಕೊಂಡಿಲ್ಲ. ಕಾಂಗ್ರೆಸ್ ತುಷ್ಟಿಕರಣದ ರಾಜಕಾರಣ ಮಾಡುತ್ತಿದೆ. ತಕ್ಷಣ ತನಿಖೆ ಮಾಡಬೇಕು, ಮತಾಂದರನ್ನು ತಕ್ಷಣವೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಾರ್ಟಿ ಜಿರಲೆ ಪಾರ್ಟಿ, ಕಾಕ್ರೋಚ್ ಪಾರ್ಟಿ ಇದ್ದ ಹಾಗೆ. ಸಿಜೆಐ ಹೇಳಿಕೆಯನ್ನು ಇಟ್ಟುಕೊಂಡು ಹೊರದೇಶದಿಂದ ಷಡ್ಯಂತ್ರ ರೂಪಿಸಲಾಗುತ್ತಿದೆ. ರಾಹುಲ್ ಗಾಂಧಿ, ಕೇಜ್ರೀವಾಲ್ ಇದರ ಹಿಂದೆ ಇದ್ದಾರೆ. ಪಾಕಿಸ್ತಾನ ಇದಕ್ಕೆ ಬೆಂಬಲಿಸುತ್ತಿದೆ, ಪಾಕಿಸ್ತಾನದ ಕೈವಾಡ ಇದೆ.ಇದೊಂತರ ದೇಶದ್ರೋಹದ ಟೂಲ್ ಕಿಟ್. ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ಇದರ ಹಿಂದೆ ಇದ್ದಾರೆ.ಇದರಲ್ಲಿ ಭಾಗಿಯಾಗದಂತೆ ಯುವಕರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.
ಸಿಎಂ ಯಾರಾಗ್ತಾರೆ ಅನ್ನೋದೆ ಗೊತ್ತಾಗ್ತಾಯಿಲ್ಲ . ಸಿದ್ದರಾಮಯ್ಯ ಕಂಟಿನ್ಯೂ ಎಂದರೆ 60 ಸಾವಿರ ಕೋಟಿ ಹೊಸ ತೆರಿಗೆ ವಿಧಿಸಲಿದ್ದಾರೆ. ಎಣ್ಣೆಗೆ ಎಷ್ಟು ಕಿಕ್ ಬರುತ್ತೋ ಅಷ್ಟು ತೆರಿಗೆ ಹಾಕ್ತಾರೆ. ಇದು ಸಿದ್ದರಾಮಯ್ಯನವರ ಟ್ಯಾಕ್ಸ್ ಅವತಾರ. ಸಿದ್ದರಾಮಯ್ಯ ಒಬ್ಬರನ್ನೇ ಹೈಕಮಾಂಡ್ ಕರೆದಿದ್ದಾರೆ. ಆದರೆ ತಂತ್ರಗಾರ ಸಿದ್ದರಾಮಯ್ಯ ಪಟಾಲಂ ಕರೆದುಕೊಂಡು ಹೋಗುತ್ತಿದ್ದಾರೆ. ಮಹದೇವಪ್ಪ, ಪರಮೇಶ್ವರ್, ಜಾರ್ಜ್ ಜೊತೆಗೆ ಪರ್ಮನೆಂಟ್ ಗಿರಾಕಿ ಬೈರತಿ ಸುರೇಶ್ ರನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆವರು ಸುರಿಸಿದ್ದಕ್ಕೆ ಡಿಕೆಶಿಗೆ ಚಿಪ್ಪು ಕೊಟ್ಟಿದ್ದಾರೆ. ಡಿಕೆಶಿಗೆ ಸ್ವಂತ ಭವಿಷ್ಯ ಗೊತ್ತಿಲ್ಲ, ರಾಜ್ಯದ ಭವಿಷ್ಯ ಏನ್ ಗೊತ್ತು . ಫ್ಲೆಕ್ಸ್ ಮಾಡಿ ಅಂತಾರೆ, ಅಜ್ಜಯ್ಯ ಇನ್ನು ವರ ಕೊಟ್ಟಿಲ್ಲ, ತಿರುಪತಿ ತಿಮ್ಮಪ್ಪ ವರ ಕೊಟ್ಟಿಲ್ಲ . ಕಳೆದ ಚುನಾವಣೆಯಲ್ಲಿ ಎನೋ 136ರ ಭವಿಷ್ಯ ಹೇಳಿದ್ರು . ನಿಮ್ಮ ಭವಿಷ್ಯನೇ ಗೊತ್ತಿಲ್ಲ,ಬೇರೆ ಭವಿಷ್ಯ ಏನ್ ಗೊತ್ತು . 2028 ಕ್ಕೆ ತಾವೇ ಇರೋದಾಗಿ ಡಿಕೆಶಿ ಭವಿಷ್ಯ ಹೇಳಿದ್ದಾರೆ. ಸ್ವತ: ತನ್ನ ಭವಿಷ್ಯವನ್ನೇ ಹೇಳಕ್ಕಾಗಿಲ್ಲ ಅವರಿಗೆ. ಆಗ ಕಾಂಗ್ರೆಸ್ ನಲ್ಲೇ ಇರ್ತಾರೋ ಬೇರೆ ಪಕ್ಷಕ್ಕೆ ಹೋಗ್ತಾರೋ ಯಾರಿಗೆ ಗೊತ್ತು?. ಸಿದ್ದರಾಮಯ್ಯ ಸಿಎಂ ಸ್ಥಾನ ಖಾಲಿ ಮಾಡುವಂತೆ ಕಾಣ್ತಿಲ್ಲ. ಡಿಕೆಶಿಗೆ ಖಾಲಿ ತಟ್ಟೆ ಕೊಡೋ ಥರ ಕಾಣ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಗೃಹಲಕ್ಷ್ಮಿ, ಗೃಹ ಜ್ಯೋತಿ ಗ್ಯಾರಂಟಿಗಳ ಪರಿಷ್ಕರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಅವರ ನಾಟಕ, ಕಳ್ಳ ನಾಟಕ. ನಾಟಕ ಬೇರೆ, ಕಳ್ಳ ನಾಟಕ ಬೇರೆ, ಇವರು ಕಳ್ಳ ನಾಟಕ ಆಡ್ತಿದ್ದಾರೆ. ಸತ್ತವರನ್ನು ಪಟ್ಟಿಯಿಂದ ತೆಗೆಯೋದು ನಿರಂತರ ಪ್ರಕ್ರಿಯೆ. ಅದಕ್ಕೆ ಯಾಕೆ ಅಭಿಯಾನ ಮಾಡೋದು ಇವರು?. ಸರ್ಕಾರ ಪಾಪರ್ ಆಗಿದೆ, ಗ್ಯಾರಂಟಿ ಕೊಡಲು ಹಣ ಇಲ್ಲ. ಹಾಗಾಗಿ ಗ್ಯಾರಂಟಿ ಸ್ಕೀಮ್ ಕಮ್ಮಿ ಮಾಡ್ತಿದ್ದಾರೆ. ಅದಕ್ಕೆ ಈ ಸಬೂಬು ಹೇಳ್ತಿದ್ದಾರೆ. ಅಧಿಕಾರಿಗಳಿಗೂ ಗ್ಯಾರಂಟಿ ಸ್ಕೀಮ್ ಕಮ್ಮಿ ಮಾಡಲು ಹೇಳ್ತಿದ್ದಾರೆ ಎಂದಿದ್ದಾರೆ.











