ಬೆಂಗಳೂರು: ದಿನಾ ಇಷ್ಟು ವಸೂಲಿ ಆಗಬೇಕೆಂದು ಫಿಕ್ಸ್ ಮಾಡಿಕೊಂಡ್ ಜೀವನ ಮಾಡೋರು ಅವರು, ಹೀಗಾಗಿ ಅವರು ಒಂದೊಂದು ಸೆಕೆಂಡ್ ಬ್ಯುಸಿ ಇರ್ತಾರೆ ಎಂದು ಡಿಕೆಶಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿಡದಿ ಟೌನ್ ಶಿಪ್ ಚರ್ಚೆಗೆ ಆಹ್ವಾನ ಕೊಟ್ಟಿದ್ದು ಅವರು ಬ್ಯುಸಿ ಇರೋದು ಅವರು.ದಿನಾ ಇಷ್ಟು ವಸೂಲಿ ಆಗಲೇಬೆಕೆಂದು, ಮೀಟರ್ ಲೆಕ್ಕ ಹಾಕೋದು, ರೇಟ್ ಫಿಕ್ಸ್ ಮಾಡೋದು. ಆ ಬ್ಯುಸಿಯಲ್ಲಿ ನಾನಿಲ್ಲ. ದಿನಾ ಅರ್ಧ ರಾತ್ರಿಯಲ್ಲಿ ಏನ್ ಮಾಡ್ತರೆ ಅಂತಾ ಗೊತ್ತಿಲ್ವಾ?. ದಿನಾ ಇಷ್ಟು ವಸೂಲಿ ಆಗಬೇಕೆಂದು ಫಿಕ್ಸ್ ಮಾಡಿಕೊಂಡ್ ಜೀವನ ಮಾಡೋರು ಅವರು. ಹೀಗಾಗಿ ಅವರು ಒಂದೊಂದು ಸೆಕೆಂಡ್ ಬ್ಯುಸಿ ಇರ್ತಾರೆ. ಜನಗಳ ಮುಂದೆ ಚರ್ಚೆ ಮಾಡೋಕೆ ನನ್ನದು ಯಾವುದೇ ಅಭ್ಯಂತರ ಇಲ್ಲ. ನಮ್ಮ ಇಲಾಖೆ ಸಣ್ಣದು. ನಾನೇನು ಅಲ್ಲಿ ಕ್ರಾಂತಿ ಮಾಡೋದು ಬೇಕಿಲ್ಲ. ಕ್ರಾಂತಿ ಮಾಡೋರು ಬ್ಯುಸಿ ಇದಾರೆ..ಅವರು ಬಂದ್ರೆ ಹೋಗೋಣ ಎಂದ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ದೇವೇಗೌಡರು ಮತ್ತೆ ರಾಜ್ಯಸಭೆಗೆ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಯಾರನ್ನೂ ಮರು ಆಯ್ಕೆ ಬಗ್ಗೆ ಕೇಳಿಲ್ಲ. ಅವರದ್ದು 63 ಸ್ಥಾನ ಇದೆ. ಹೀಗಾಗಿ ಬಿಜೆಪಿ ಅವರೇ ನಿರ್ಧರಿಸುತ್ತಾರೆ. ನಾನಾಗಲಿ, ದೇವೇಗೌಡರಾಗಲಿ ಪ್ರಸ್ತಾಪ ಮಾಡಿಲ್ಲ. ಚರ್ಚೆ ಮಾಡೋಕೂ ಹೋಗಲ್ಲ. ದೇವೇಗೌಡರ ಅವಶ್ಯಕತೆ ಬಗ್ಗೆ ದೆಹಲಿ ಮಟ್ಟದಲ್ಲಿ ತೀರ್ಮಾನ ಮಾಡಲಿ. ನಾವು ಇನ್ನೊಬ್ಬರಿಗೆ ತಪ್ಪಿಸಿ ನಮಗೆ ಕೊಡಿ ಅಂತಾ ನಾವು ಕೇಳಲ್ಲ ಎಂದಿದ್ದಾರೆ.
ಕಾಂಗ್ರೇಸ್ ಎಸ್ ಐ ಆರ್ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಸ್ವಲ್ಪ ದಿನ ಮನರೇಗಾ ಬಗ್ಗೆ ಮಾತಾಡಿದ್ರು.ಈಗ ಎಸ್ ಐ ಆರ್ ಅಂತಾ ಹೊರಟ್ರು. ಇವರಿಗೆ ಜನ ಮಾಡಲು ಕೆಲಸ ಕೊಟ್ರು. ಆದರೆ ಜನರ ಕೆಲಸ ಮಾಡೋ ಮನೋಭಾವ ಇವರಿಗಿಲ್ಲ. ಯಾವುದೋ ವಿಚಾರ ತಗೊಂಡ್ ಡೈವರ್ಟ್ ಮಾಡೋಕೆ ಹೊರಟಿದ್ದಾರೆ. ಕೇಂದ್ರ ಸರ್ಕಾರ ಅಡ್ವಾನ್ಸ್ ಆಗಿ ಎರಡು ತಿಂಗಳ ಅಕ್ಕಿ ತಗೋಳಿ ಅಂದಿದೆ ಅಂತಾ ನೀವೆ ಹೇಳಿದೀರಾ. ಬಡವರ ಹಸಿವು ನೀಗಿಸೋದು ನಾವು ಅಂತಾ ಜಾಹೀರಾತು ಕೊಡ್ತಾರೆ. ಈಗ ಕೇಂದ್ರ ಸರ್ಕಾರದವರು ಅಕ್ಕಿ ಕೊಡ್ತಿದಾರೆ. ಈ ಕೇಂದ್ರ ಸರ್ಕಾರ ಕೊಡ್ತಿರೋ ಅಕ್ಕಿಯನ್ನ ಇವರು ಹಂಚುತ್ತಿದ್ದಾರೆ. ತುಮಕೂರಿನಲ್ಲಿ ಮೊನ್ನೆ ಸಭೆ ಮಾಡಿದ್ರು. ಆ ಸಭೆಯಲ್ಲಿ ನನ್ನ ಹೆಸರನ್ನು ಯಾಕೆ ಹಾಕಿದ್ರು?. ಕೇಂದ್ರ ಸರ್ಕಾರದಿಂದ ಕೊಡುವಂತಹ ಹಲವಾರು ಯೋಜನೆಗಳ ಕಾರ್ಯ ಕ್ರಮ ಅದು. ಅದಕ್ಕೆ ನನ್ನ ಹೆಸರನ್ನ ಹಾಕೊಂಡವ್ರೆ. ಇವತ್ತು ರಾಜ್ಯದ ಹಲವಾರು ದೇಶದಲ್ಲಿ ಬಿರುಗಾಳಿಯಿಂದ ಬಾಳೆ, ತೆಂಗು ನಾಶ ಆಗಿದೆ. ಎಲ್ಲಾದರೂ ಒಂದ್ ಕಡೆ ಸರ್ಕಾರದವರು ಹೋಗಿದಾರಾ ಎಂದು ಪ್ರಶ್ನೆ ಮಾಡಿದ್ದಾರೆ.











