ಬೆಂಗಳೂರು; ಎಸ್ ಐಆರ್ ನಿಂದ ದೇಶದಲ್ಲಿ ಬಹಳ ಸಮಸ್ಯೆ ಆಗ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಎಸ್ ಐ ಆರ್ ಕುರಿತಂತೆ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಎಸ್ ಐಆರ್ ನಿಂದ ದೇಶದಲ್ಲಿ ಬಹಳ ಸಮಸ್ಯೆ ಆಗ್ತಿದೆ. ಸಾಮಾನ್ಯ ಜನ, ಬಡವರಿಗೆ ಇನ್ನೂ ಅದರ ಬಗ್ಗೆ ಪರಿಚಯ ಇಲ್ಲ. ೫೦, ೬೦, ೯೦ ಲಕ್ಷ ಮತದಾರರನ್ನ ತೆಗೆಯುತ್ತಿದ್ದಾರೆ. ನಮ್ಮಲ್ಲೂ ಇದು ಪ್ರಾರಂಭ ಆಗಿದೆ. ನಮ್ದು ಸರ್ಕಾರ, ಬಿಜೆಪಿ ಕಾಂಗ್ರೆಸ್ ದಳ ಅಂತಾ ಏನಿಲ್ಲ. ಆದ್ರೆ ಬಡವರಿದ್ದಾರೆ, ಅವರು ಅರ್ಜಿ ಹಾಕಬೇಕು. ಅರ್ಜಿ ಹಾಕಿಲ್ಲ ಮದ್ರೆ ಮತದಾನದ ಹಕ್ಕು ಕಳೆದುಕೊಳ್ತಾರೆ, ಆಗ ಅವರಿಗೆ ಯಾವುದೇ ಬೆನಫಿಟ್ ಸಿಗಲ್ಲ.ನಾಳೆ ಪೆನ್ಷನ್, ಸೈಟ್, ಜಮೀನು ಎಲ್ಲವೂ ಕಳೆದುಕೊಳ್ಳಬೇಕಾಗುತ್ತದೆ. ಈ ದೃಷ್ಟಿಯಿಂದ ಸರ್ಕಾರ ದಾಖಲೆ ಒದಗಿಸುತ್ತಿದೆ. ಕೇರಳ, ಬಂಗಾಳದಲ್ಲಿ ಮಾಡಿದ್ದಾರೆ, ಈಗ ಅಲ್ಲಿ ಅಪೀಲ್ ಸ್ಟೇಜ್ ಗೆ ಹೋಗಿ ಅದನ್ನು ಮಾಡಿಲ್ಲ. ಕೆಲವರು ವೋಟಿಂಗ್ ರೈಟ್ ಬಿಟ್ಟಿದ್ದಾರೆ ಎಂದಿದ್ದಾರೆ.
ಎಲ್ಲಾ ಪಾರ್ಟಿ ಅವರು ಅವರ ಬಿಎಲ್ಎಗಳನ್ನ ಮಾಡಿಕೊಳ್ಳಲಿ. ಸರ್ಕಾರದಿಂದ ತಪ್ಪು ಆಗಬಾರದು ಅಷ್ಟೇ. ಎಲೆಕ್ಷನ್ ಗೆಲ್ಲೋದು, ಸೋಲೋದು ಇದ್ದಿದ್ದೇ, ಅದು ಬೇರೆ ವಿಚಾರ. ಆದ್ರೆ ಯಾರೂ ಸಹ ಮತದಾನದ ಹಕ್ಕು ಕರೆದುಕೊಳ್ಳಬಾರದು. ಎಲ್ಲೋ ಏನೋ ಕೆಲಸ ಮಾಡ್ತಾರೆ, ಗುಳೆ ಹೋಗಿದ್ದಾರೆ. ಅವರು ಫಾರ್ಮ್ ಗೆ ಸಹಿ ಹಾಕಿಲ್ಲ ಅಂದ್ರೆ ಮತದಾರರ ಪಟ್ಟಿಯಿಂದ ತೆಗೆಯುತ್ತಾರೆ. ಅಮರ್ಥ್ಯ ಸೇನ್ ಅವರದ್ದೇ ವೋಟರ್ ಇಲ್ಲಂತೆ, ಮಹರಾಜರದ್ದೇ ವೋಟ್ ಇಲ್ಲಂತೆ. ಕೋರ್ಟ್ ನಲ್ಲಿ ಮುಂದಿನ ಎಲೆಕ್ಷನ್ ಗೆ ಮತ ಹಾಕಿ ಎಂದ್ರಂತೆ. ಆಗ ಸ್ಕಿಪ್ ಆಗುತ್ತದೆ, ಹೀಗಾಗಿ ವೋಟ್ ಉಳಿಸಿಕೊಳ್ಳಿ. ನಾವು ಗ್ಯಾರಂಟಿ ಕೊಡ್ತಿದ್ದಾರೆ, ಆದ್ರೆ ಸರ್ಕಾರ ಮತದಾರರ ಪಟ್ಟಿಯಿಂದ ತೆಗೆದರು ಅಂತಾರೆ. ಹೀಗಾಗಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.











