ಬೆಂಗಳೂರು; ರೈತರ ಆತ್ಮಹತ್ಯೆ ವಿಚಾರವಾಗಿ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು ಮಾಜಿ ಸಿಎಂ, ಕೇಂದ್ರ ಮಂತ್ರಿಗಳು ಬಾಂಬ್ ಹಾಕೊದ್ರಲ್ಲಿ ನಿಸ್ಸೀಮರು. ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಮಾತನಾಡಿದ್ದಾರೆ. ಆತ್ಮಹತ್ಯೆ ಆದವರ ಎಫ್ ಐಆರ್ ಆಗಿರುತ್ತೆ. ಎಲ್ಲಾ ಆತ್ಮಹತ್ಯೆಗಳನ್ನು ರೈತರ ಆತ್ಮಹತ್ಯೆ ಎಂದು ಹೇಳ್ತಿದ್ದಾರೆ. ಅವರು ಸಿಎಂ ಆಗಿದ್ದಾಗಲೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಯಿ ಚಪಲಕ್ಕೆ ಮಾತನಾಡಬಾರದು. ಆತ್ಮಹತ್ಯೆ ಪ್ರಕರಣಗಳು ಆಗದಂತೆ ನೋಡಿಕೊಳ್ಳಬೇಕು. ಆತ್ಮಹತ್ಯೆ ಪ್ರಕರಣಗಳು ಆದಾಗ ಸಿಎಂ5 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಕುಮಾರಸ್ವಾಮಿಯವ್ರು ಗೌರವಯುತವಾಗಿ ನಡೆದುಕೊಳ್ಳಬೇಕು ಎಂದಿದ್ದಾರೆ.
ರಸಗೊಬ್ಬರ ನಾವು ಪರ್ಚೇಸ್ ಮಾಡಲು ಆಗಲ್ಲ. ಕೇಂದ್ರ ಸರ್ಕಾರ ರಸಗೊಬ್ಬರ ಸಪ್ಲೈ ಮಾಡಬೇಕು. ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಮೋದಿ ಅವರೇ ಈ ಬಗ್ಗೆ ಹೇಳಿದ್ದಾರೆ. ಕಡಿಮೆ ಬಳಕೆ ಮಾಡಲು ಹೇಳಿದ್ದಾರೆ. ಕೊರತೆಯಿದೆ ಎಚ್ಚರಿಕೆಯಿಂದ ನಿಭಾಯಿಸಿ ಅಂದಿದ್ದಾರೆ. ಕೇಂದ್ರದ ಮೇಲೆ ನಾವು ದೂರು ಹೇಳಲ್ಲ. ಕಳೆದ ಬಾರಿ ರಸಗೊಬ್ಬರ ಕಡಿಮೆಯಾಗಿತ್ತು. ಆಗ ಬಿಜೆಪಿಯವರು ವಿರೋಧ ಮಾಡಿದ್ರು. ಸತ್ಯ ಗೊತ್ತಾಗಿ ಸುಮ್ಮಾನಾದ್ರು. ಈ ಬಾರಿ ರಸಗೊಬ್ಬರ ಕಡಿಮೆ ಇದೆ. ಎಫ್ಐಡಿ ಮಾಡಿ ರಸಗೊಬ್ಬರ ಹಂಚಬೇಕಿದೆ. ಯಾರು ಕೂಡ ಸ್ಟಾಕ್ ಮಾಡಬಾರದು. ಕಾಳಸಂತೆಯಲ್ಲಿ ಮಾಡದಂತೆ ಎಚ್ಚರಿಕೆವಹಿಸಿದ್ದೇವೆ. ರೈತರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಮುಂಗಾರಿಗೆ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.











