ರಾಯಚೂರು: ಹೈಕಮಾಂಡ್ ಏನು ಸೂಚನೆ ಕೊಡ್ತಾರೆ, ಅವರ ಪ್ರಕಾರ ಮುಖ್ಯಮಂತ್ರಿಗಳು ನಡೆದುಕೊಳ್ತಾರೆ ಎಂದು ರಾಯಚೂರಿನಲ್ಲಿ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ
ನಿನ್ನೆ ರಾಯಚೂರು ಜಿಲ್ಲೆ ಸಿಂಧನೂರು ನಗರಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಸಚಿವ ಚಾರ್ಜ್ ಮನೆಯಲ್ಲಿ ಮೀಟಿಂಗ್ ವಿಚಾರದ ಬಗ್ಗೆ ಮಾತನಾಡಿ ಈ ಬಗ್ಗೆ ವರಿಷ್ಠರು ಈ ಬಗ್ಗೆ ಹೇಳಿದ್ದಾರೆ. ಆ ಬಗ್ಗೆ ನಾನು ಮತ್ತಿನ್ನೇನು ಹೇಳಲ್ಲ. ಆ ಬಗ್ಗೆ ಮಾಹಿತಿ ಇಲ್ಲ. ಔಪಚಾರಿಕವಾಗಿ ಮೀಟಿಂಗ್ ಮಾಡಿರಬಹುದು. ಸಾಧನಾ ಸಮಾವೇಶ ಆದ ಮೇಲೆ ಅವರ ಮನೆಗೆ ಹೋಗಿ ಊಟ ಮಾಡಿರಬಹುದು ಎಂದಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಹಾಗೂ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಚಿವ ಸಂಪಟ ವಿಸ್ತರಣೆ ಆಗ್ಬೇಕು ಅಂತ ಎಂಎಲ್ ಎ ಗಳ ಬೇಡಿಕೆ ಇದೆ. ಸರ್ಕಾರ ಮೂರು ವರ್ಷ ಪೂರೈಸಿದೆ. ವಿಸ್ತರಣೆ ಆಗಬೇಕಿದೆ. ಹೈಕಮಾಂಡ್ ಏನು ಸೂಚನೆ ಕೊಡ್ತಾರೆ, ಅವರ ಪ್ರಕಾರ ಮುಖ್ಯಮಂತ್ರಿಗಳು ನಡೆದುಕೊಳ್ತಾರೆ ಎಂದಿದ್ದಾರೆ.
ರಾಜ್ಯದಲ್ಲಿ SIR(ಮತದಾರರ ಪಟ್ಟಿ ಪರೀಕ್ಷಕರಣೆ)ವಿಚಾರದ ಬಗ್ಗೆ ಮಾತನಾಡಿದ ಅವರು ಎಲಿಜಿಬಲ್ ಓಟರ್ಸ್ ಕೈ ಬಿಡಬಾರ್ದು ಅಂತ ಮಾಡಿದ್ದಾರೆ. 70% ಓಟರ್ಸ್ ಮ್ಯಾಪಿಂಗ್ ಮಾಡಿದ್ದಾರೆ. ಇನ್ನೂ 26 ಲಕ್ಷ ಮತದಾರರ ಮ್ಯಾಪಿಂಗ್ ಆಗಿಲ್ಲ ಅನ್ನೋ ಮಾಹಿತಿ ಇದೆ. ಜೂನ್ 19 ವರೆಗೆ ಸಮಯ ಇದೆ. ಮ್ಯಾಪಿಂಗ್ ನಲ್ಲಿ ಕೈಬಿಟ್ಟಿರೋರನ್ನ ಸೇರಿಸಲಾಗತ್ತೆ ಅಂತ ಬಿಎಲ್ ಓಗಳು ಹೇಳಿದ್ದಾರೆ. ನಮ್ಮ ಪಕ್ಷದಿಂದಲೂ ಜಾಗೃತರಾಗಿದ್ದೇವೆ. ಓಬ್ಬ ಎಲಿಜಿಬಲ್ ಓಟರ್ ಕೈಬಿಡಬಾರ್ದು ಅಂತ ಪ್ರಯತ್ನ ಮಾಡ್ತಿದ್ದೇವೆ ಎಂದ ಅವರು ಯಾರನ್ನ ಕೈಬಿಡಲಾಗಿದೆ ಅವರನ್ನು ಖುದ್ದು ಭೇಟಿ ಮಾಡಿ, ಮಾಹಿತಿ ಪಡೆದು ಮ್ಯಾಪಿಂಗ್ ಮಾಡಿಸಿ ಅಂತ ಬಿಎಲ್ ಓಗಳಿಗೂ ಹೇಳಿದ್ದೇವೆ. ಮತದಾರರ ಪಟ್ಟಿಯಿಂದ ಕೈಬಿಡದಂತೆ ನೋಡಿಕೊಳ್ಳಬೇಕು ಅಂತ ಹೇಳಿದ್ದೇವೆ. ಪಕ್ಷದ ವತಿಯಿಂದಲೂ ಸೂಚನೆ ಬಂದಿದೆ. ಎಲ್ಲಾ ಜಿಲ್ಲೆಯಲ್ಲೂ ಈ ಬಗ್ಗೆ ವರ್ಕ್ ಶಾಪ್ ನಡೆಸ್ತಿದ್ದೇವೆ. ಮೈಸೂರಿನಲ್ಲಿ 25 ನೇ ತಾರಿಕೂ ಕೆಪಿಸಿಸಿಯಿಂದ ವರ್ಕ್ ಶಾಪ್ ಇದೆ ಎಂದು ತಿಳಿಸಿದ್ದಾರೆ.











