ಮನೆ Latest News ನನ್ನನ್ನು ಯಾರೂ ಟಾರ್ಗೆಟ್ ಮಾಡಿಲ್ಲ, ನಾನೊಬ್ಬನೇನಾ ಮುಸ್ಲೀಂ ನಾಯಕ ಇರೋದು?; ಸತೀಶ್ ಜಾರಕಿಹೊಳಿ ಭೇಟಿ...

ನನ್ನನ್ನು ಯಾರೂ ಟಾರ್ಗೆಟ್ ಮಾಡಿಲ್ಲ, ನಾನೊಬ್ಬನೇನಾ ಮುಸ್ಲೀಂ ನಾಯಕ ಇರೋದು?; ಸತೀಶ್ ಜಾರಕಿಹೊಳಿ ಭೇಟಿ ಬಳಿಕ ಝಮೀರ್ ಅಹಮದ್ ಖಾನ್ ಹೇಳಿಕೆ

0

ಬೆಂಗಳೂರು; ನನ್ನನ್ನು ಯಾರೂ ಟಾರ್ಗೆಟ್ ಮಾಡಿಲ್ಲ, ನಾನೊಬ್ಬನೇನಾ ಮುಸ್ಲೀಂ ನಾಯಕ ಇರೋದು? ಎಂದು ಸತೀಶ್  ಜಾರಕಿಹೊಳಿ ಭೇಟಿ ಬಳಿಕ ಸಚಿವ ಝಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು ನಾನು ಸತೀಶ್ ಸಾವ್ಕಾರ್ ಜೊತೆಗೆ ವಾರಕ್ಕೆ ಎರಡು ಬಾರಿ ಭೇಟಿ ಆಗುತ್ತೇನೆ. ನಿನ್ನೆ ಮೊನ್ನೆ ಕೂಡ ಭೇಟಿ ಮಾಡಿದ್ದೆ, ಇದು ಹೊಸದೇನಲ್ಲ. ನನ್ನನ್ನು ಯಾರೂ ಟಾರ್ಗೆಟ್ ಮಾಡಿಲ್ಲ. ನಾನೊಬ್ಬನೇನಾ ಮುಸ್ಲೀಂ ನಾಯಕ ಇರೋದಾ?.ನಾನು ನಾಯಕನೇ ಅಲ್ಲ, ನಾನೊಬ್ಬ ಜನ ಸೇವಕ.ಪಕ್ಷದಲ್ಲಿ ಆರೋಪ ಮಾಡಿದವರು ಯಾರೂ ನನ್ನ ಹೆಸರು ಹೇಳಿಲ್ಲ. ಧರ್ಮಗುರುಗಳು ಹೇಳಿದ್ದನ್ನು ನೀವು ಅವರ ಬಳಿಯೇ ಕೇಳಬೇಕು. ಯಾರೂ ನನ್ನ ಹೆಸರನ್ನು ಹೇಳಿಲ್ಲ ಎಂದಿದ್ದಾರೆ.

ಧರ್ಮಗುರುಗಳ ಜೊತೆಗೆ ನಾನು ಮಾತಾಡಿ ಬಗೆಹರಿಸುತ್ತೇನೆ. ಶುಕ್ರವಾರ ನಮಾಜ್ ಬಳಿಕ ಕುಳಿತು ಧರ್ಮಗುರುಗಳ ಜೊತೆಗೆ ಚರ್ಚೆ ಮಾಡ್ತೇನೆ. ರಿಜ್ವಾನ್ ಅರ್ಷದ್, ಎನ್ ಎ ಹ್ಯಾರಿಸ್, ಸಲೀಂ ಅಹಮದ್ ಕೂಡ ನಿನ್ನೆ ಫೋನ್ ಮಾಡಿ ಮಾತಾಡಿದ್ದಾರೆ. ಧರ್ಮಗುರುಗಳಿಗೆ ಬೇಸರ ಅಸಮಾಧಾನ ಆಗಿರುವುದು ನಿಜ. ದಾವಣೆಗೆರೆ ಟಿಕೇಟ್ ಕೊಟ್ಟಿಲ್ಲ ಅಂತ ಸಮುದಾಯಕ್ಕೆ ಬೇಸರ ಆಗಿದೆ. ಜನರಲ್ ಇಲೆಕ್ಷನ್ ‌ನಲ್ಲಿ ನೊಡೋಣ, ಟಿಕೇಟ್ ಕೊಡೋಣ ಎಂದು ಹೈಕಮಾಂಡ್ ಹೇಳಿದೆ. ಆ್ಯಂಟಿ ಪಾರ್ಟಿ ಕೆಲಸ ಮಾಡಿದ್ರೆ ಅದಕ್ಕೊಂದು ಪ್ರೊಸಿಜರ್ ಇದೆ. ಮೊದಲು ನೊಟೀಸ್ ನೀಡಬೇಕು ಆಮೇಲೆ ಕ್ರಮ ಆಗಬೇಕು. ಪಾರ್ಟಿಗಿಂತ ದೊಡ್ಡವರು ಯಾರೂ ಇಲ್ಲ, ಝಮೀರ್ ಖಾನ್ ಕೂಡ ಪಾರ್ಟಿಗಿಂತ ದೊಡ್ಡವನಲ್ಲ. ನಾಳೆ ನಾನೂ ಆ್ಯಂಟಿ ಪಾರ್ಟಿ ಕೆಲಸ ಮಾಡಿದರೆ ನನಗೂ ಶಿಸ್ತು ಕ್ರಮ ಆಗಬೇಕು. ಆದರೆ ಅದಕ್ಕೊಂದು ಪ್ರೊಸಿಜರ್ ಇದೆಯಲ್ಲವಾ? ಎಂದು ಪ್ರಶ್ನಿಸಿದ್ದಾರೆ.