ಮನೆ Latest News ನನ್ನ ನಿಲುವು ಏನು ಎಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ, ಪದೇ ಪದೇ ಹೇಳಬೇಕಾಗಿಲ್ಲ: ಡಿ ಕೆ...

ನನ್ನ ನಿಲುವು ಏನು ಎಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ, ಪದೇ ಪದೇ ಹೇಳಬೇಕಾಗಿಲ್ಲ: ಡಿ ಕೆ ಸುರೇಶ್ ಹೇಳಿಕೆ

0

ಬೆಂಗಳೂರು; ನನ್ನ ನಿಲುವು ಏನು ಎಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ, ಪದೇ ಪದೇ ಹೇಳಬೇಕಾಗಿಲ್ಲ ಎಂದು  ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.

ಶಾಸಕರ ಡಿನ್ನರ್ ಮೀಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು ಶಾಸಕರು ಏನು ಹೇಳಿದ್ದಾರೋ ಗೊತ್ತಿಲ್ಲ. ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಊರಲ್ಲಿ ಇರಲಿಲ್ಲ ಅದರ ಬಗ್ಗೆ ಮಾಹಿತಿ ಇಲ್ಲ. ಶಾಸಕರ ತೀರ್ಮಾನ ಏನು ಎಂಬುದು ನನಗೆ ಗೊತ್ತಿಲ್ಲ. ಶಾಸಕರ ತೀರ್ಮಾನ ಅವರ  ವೈಯಕ್ತಿಕ. ಪಕ್ಷ ಅದನ್ನು ಗಮನಿಸುತ್ತದೆ.ಚುನಾವಣೆಗೆ ನಿಲ್ಲುತ್ತೇನೆ ಎಂಬುವರಿಗೆ ಕಷ್ಟ ಆಗಬಹುದು. ನಾನೇನು ಚುನಾವಣೆಗೆ ನಿಲ್ಲಲ್ಲ, ಹಾಗಾಗಿ ನನಗೇನೂ ಕಷ್ಟ ಆಗಲ್ಲ. ಯಾರು ಚುನಾವಣೆಗೆ ನಿಲ್ತಾರೋ ಅವರಿಗೆ ಕಷ್ಟ ಆಗಬಹುದು. ನನ್ನ ನಿಲುವು ಏನು ಎಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ, ಪದೇ ಪದೇ ಹೇಳಬೇಕಾಗಿಲ್ಲ. ನಮ್ಮ ವಿಚಾರ ಸ್ಪಷ್ಟಪಡಿಸಿದ್ದೇನೆ. ಎಲ್ಲರಿಗೂ ಸಿಎಂ ಆಗುವ ಆಕಾಂಕ್ಷೆ ಇರುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

ಡಿಕೆಶಿ ಬೆಂಬಲಕ್ಕೆ ಶಾಸಕರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಗೊತ್ತಿಲ್ಲ. ಬಮುಲ್ ವಿಚಾರ ಇದ್ರೆ ಕೇಳಿ. ಕೆ ಎಂ ಎಫ್ ಚುನಾವಣೆಯನ್ನು ಅಧಿಕಾರಿಗಳು ನಿರ್ಧಾರ ಮಾಡ್ತಾರೆ. ಪಕ್ಷ ಯಾರಿಗೆ ಹೇಳುತ್ತದೆ ಅವರು ನಿಲ್ಲುತ್ತಾರೆ.ನಾನು ರಾಜಕೀಯ ಪಂಡಿತನೂ ಅಲ್ಲ, ಯಾವುದೇ ಸ್ಥಾನ ಮಾನದ ಆಕಾಂಕ್ಷಿಯೂ ಅಲ್ಲ. ಡಿಕೆಶಿವಕುಮಾರ್ ಏನು ಹೇಳಿದ್ದಾರೆ ಎಂಬುದು ಅವರನ್ನೇ ಕೇಳಿ, ಡಿಕೆಶಿ ಭೇಟಿ ಮಾಡಿಲ್ಲ ನಾನು. ಎಂಎಲ್ಎಗಳ ವಿಚಾರಧಾರೆ ಏನಿದೆ ಶಾಸಕರಿಗೆ ಸಂಬಂಧಿಸಿದ್ದು. ಪಕ್ಷ, ಹೈಕಮಾಂಡ್, ರಾಜ್ಯನಾಯಕರು ಅದನ್ನು ಗಮನಿಸುತ್ತಾರೆ. ಎಲ್ಲದಕ್ಕೂ ತಾಳ್ಮೆ ಇರಲಿ ಎಂದು ತಿಳಿಸಿದ್ದಾರೆ.

ಶಸ್ತ್ರವೇ ಹಿಡಿದುಕೊಂಡಿಲ್ಲ, ಶಸ್ತ್ರ ತ್ಯಾಗ ಎಲ್ಲಿಂದ? ನಮ್ಮ ಅಣ್ಣನ ಹಣೆ ಬರಹ ಇದ್ರೆ ಸಿಎಂ ಆಗ್ತಾರೆ, ಹಣೆ ಬರಹದಲ್ಲಿ ಇಲ್ಲದಿದ್ದರೆ ಸಿಎಂ ಆಗಲ್ಲ. ರಾಜಕಾರಣದಲ್ಲಿ ಇವತ್ತು ಶಸ್ತ್ರ ಬೇಕಾಗಿಲ್ಲ ಅಸ್ತ್ರಬೇಕಾಗಿಲ್ಲ. ತಾಳ್ಮೆ ಇರಲಿ ಎಂದು ಈಗಾಗಲೇ ಹೇಳಿದ್ದೇನೆ.ಒಂದೇ ಪದವನ್ನು ಮತ್ತೆ ಮತ್ತೆ ಬಳಸುವುದು ಸರಿ ಇರಲ್ಲ ಎಂದ ಅವರು ಗ್ಯಾರಂಟಿಗಳು ಹೊರೆ ಎಂಬ ವಿಚಾರದ ಬಗ್ಗೆ ಮಾತನಾಡಿ ಗ್ಯಾರಂಟಿ ನಮ್ಮ ವಾಗ್ದಾನ. ಕರ್ನಾಟಕದ ಜನರಿಗೆ ಕೊಟ್ಟ ವಾಗ್ದಾನ.ಆ ವಾಗ್ದಾನದಂತೆ ನಡೆಯಬೇಕು.ಯಾರು ಚುನಾವಣೆ ಎದುರಿಸಿದರೋ ಅವರೆಲ್ಲ ಜನರಿಗೆ ನಂಬಿಕೆ ಕೊಟ್ಟಿದ್ದಾರೆ. ಬರ್ಡನ್ ಆದ್ರೂ ಆಗಲಿ ಏನಾದರೂ ಆಗ್ಲಿ ಕೊಟ್ಟ ಮಾತನ್ನು ಈಡೇರಿಸಲೇಬೇಕು. ಗ್ಯಾರಂಟಿ ಬಗ್ಗೆ ಹೇಳುವ ಮುಂಚಿತವಾಗಿ ಮಾತು ಕೊಡೋದಕ್ಕಿಂತ ಮುಂಚಿತವಾಗಿ ಚಿಂತನೆಗಳನ್ನು ಮಾಡಬೇಕಾಗಿತ್ತು. ಮಾತು ಕೊಟ್ಟಾಗಿದೆ ಮಾತಿನಂತೆ ನಡೆದುಕೊಳ್ಳಬೇಕು. ಐದು ವರ್ಷಗಳ ಕಾಲ ಏನೇ ಕಷ್ಟ ಆದ್ರೂ ಆ ಗ್ಯಾರಂಟಿ ಗಳ ನ್ನು ರಾಜ್ಯದ ಜನರಿಗೆ ನೀಡಬೇಕು. ಸಿರಿವಂತರು ಗ್ಯಾರಂಟಿ ತೆಗೆದುಕೊಳ್ತಿದ್ರೆ ಅದು ತಪ್ಪು. ಗ್ಯಾರಂಟಿ ಯೋಜನೆ ಯಾರು ಅಸಹಾಕರು, ಜೀವನ ನಡೆಸಲು ಕಷ್ಟವಿದೆ, ಯಾರು ಬದುಕಲ್ಲಿ ಹೋರಾಟ ಮಾಡ್ತಿದ್ದಾರೆ ಅಂಥವರಿಗೆ ಆ ಯೋಜನೆಗಳು ಇರುವಂಥದ್ದು. ಏನು ವಾಗ್ದಾನ ಕೊಟ್ಟಿದ್ದೇವೆ, ನಂಬಿಕೆ ಮಾತುಗಳನ್ನು ಸಾರಿ ಸಾರಿ ಹೇಳಿದ್ದೇವೆ ಅದನ್ನು ಅನುಷ್ಟಾನ ಮಾಡಲೇಬೇಕು. ಆ ಅನುಷ್ಟಾನದಲ್ಲಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅನುಷ್ಟಾನದಲ್ಲಿ ಹಿಂದೆ ಸರಿಯುವುದಾದರೆ ನಾವು ಮಾತು ತಪ್ಪಿದಂತಾಗುತ್ತದೆ. ಗ್ಯಾರಂಟಿ ಯೋಜನೆಯಿಂದ ಶಾಸಕರಿಗೆ ಸಮಸ್ಯೆ ಆಗುತ್ತಿದೆ ಎಂಬುದು ಶಾಸಕರಿಗೇ ಸಂಬಂಧಿಸಿದ್ದು. ಅವರನ್ನೇ ಕೇಳಿ ಎಂದಿದ್ದಾರೆ.

ತಾಳ್ಮೆಗೂ ಒಂದು ಮಿತಿ ಇದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಒಂದು ಸಾರಿ ಬಳಸಿದ ಮೇಲೆ ಪದೇ ಪದೇ ಬಳಸುವುದಲ್ಲ. ಬೇರೆ ಪದ ಬಳಸೋಣ ಅಂದಿದ್ದಾರೆ.