ಮನೆ Latest News ಹಾಗಾದ್ರೆ ದರ್ಶನ್ ಜೈಲಿನಲ್ಲಿ ಯಾರ ಜೊತೆನೂ ಮಾತಾಡ್ಲೇ ಬಾರ್ದಾ ? ಪರೋಕ್ಷವಾಗಿ ಡಿ ಬಾಸ್ ಪರ...

ಹಾಗಾದ್ರೆ ದರ್ಶನ್ ಜೈಲಿನಲ್ಲಿ ಯಾರ ಜೊತೆನೂ ಮಾತಾಡ್ಲೇ ಬಾರ್ದಾ ? ಪರೋಕ್ಷವಾಗಿ ಡಿ ಬಾಸ್ ಪರ ಬ್ಯಾಟ್ ಬೀಸಿದ ಮಾಜಿ ಸಂಸದೆ ಸುಮಲತಾ ಅಂಬರೀಶ್

0

ಬೆಂಗಳೂರು;  ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜ ಮರ್ಯಾದೆ ನೀಡುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಂಸದೆ, ದರ್ಶನ್ ಆಪ್ತೆ ಸುಮಲತಾ ಅಂಬರೀಶ್ ನಾನು ಈ ವಿಚಾರವಾಗಿ ಮಾತನಾಡಿದ್ರೆ, ಕಾಂಟ್ರವರ್ಸಿ ಆಗಬಹುದು.ದರ್ಶನ್ ನನಗೆ ಆಪ್ತರು.. ಹತ್ತಿರದವರು. ಆದರೆ ಜೈಲಲ್ಲಿ ಹೀಗೆ ನಡೆಯುತ್ತಿರೋದು ಇದೇ ಮೊದಲ ಅನ್ನೋದನ್ನ ನಾವು ಫಸ್ಟ್  ನೋಡಬೇಕು. ಜೈಲಲ್ಲಿ ಹಣ ಕೊಟ್ರೆ ಏನು ಸೌಲಭ್ಯ ಬೇಕಾದ್ರೂ ಸಿಗುತ್ತೆ.ಐಪಿಎಸ್ ಅಧಿಕಾರಿ ಡಿ.ರೂಪಾ ಈ ಹಿಂದೆನೂ ತಿಳಿಸಿಕೊಟ್ಟಿದ್ರು.ಇದು ಪರಪ್ಪನ ಅಗ್ರಹಾರದಲ್ಲಿ ಅಷ್ಟೇ ಆಗಿಲ್ಲ.ಪ್ರಪಂಚದಾದ್ಯಂತ ಇಂಥ ಜೈಲು ಭ್ರಷ್ಟಾಚಾರ ನಡೀತಿದೆ.ಅಮೇರಿಕಾದ ಜೈಲಲ್ಲೂ ಡ್ರಗ್ಸ್, ಸಿಗರೇಟ್ ಎಲ್ಲಾ ಸಿಗುತ್ತೆ.ಇದು ಭ್ರಷ್ಟಾಚಾರ.. ಇದು ಸರಿ ಅಂತಾ ನಾನು ಹೇಳಲ್ಲ.ಇದು ಸಿಸ್ಟಂನಲ್ಲಿ ಇರೋ ಸಮಸ್ಯೆ ಎಂದಿದ್ದಾರೆ.

ಅಲ್ಲದೇ ಈ ಬಗ್ಗೆ ನೀವು ಅಲ್ಲಿರುವ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕು ಹೊರತಾಗಿ, ನನ್ನ ಬಳಿ ಅಲ್ಲ. ಇದು ವ್ಯವಸ್ಥೆಯಿಂದ ಆಗಿರುವ ತಪ್ಪು ಎಂದಿದ್ದಾರೆ. ಇನ್ನು ವಿಲ್ಸನ್ ಗಾರ್ಡನ್ ನಾಗನ ಜೊತೆ ಇರೋದ್ರ ಬಗ್ಗೆಯೂ ಸುಮಲತಾ ಮಾತನಾಡಿದ್ದಾರೆ.ಜೈಲಲ್ಲಿ ಒಳ್ಳೆಯವ್ರು ಯಾರಾದ್ರೂ ಇರ್ತಾರಾ.. ಅಲ್ಲಿ ಇರೋದೆ ರೌಡಿಗಳು.. ಅಲ್ಲಿ ಒಳ್ಳೆಯವ್ರು ಎಲ್ಲಿ ಇರ್ತಾರೆ ಹಾಗಾಗಿ ದರ್ಶನ್ ಅವರ ಜೊತೆ ಮಾತನಾಡಿರೋದರಲ್ಲಿ ತಪ್ಪು ಏನಿದೆ . ಸುಮ್ಮನೆ ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಅರ್ಥದಲ್ಲಿ ಸುಮಲತಾ ಅಂಬರೀಶ್ ಮಾತನಾಡಿದ್ದಾರೆ.

ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯದಿಂದ ಅನುಮತಿ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡುತ್ತಿರುವ ಫೋಟೋ , ವೀಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ದರ್ಶನ್ ಅವರಿಗೆ ರಾಜ ಮರ್ಯಾದೆ ನೀಡಲು ಸಹಕರಿಸಿದ 7 ಮಂದಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಗೃಹ ಸಚಿವ ಡಾ  ಜಿ ಪರಮೇಶ್ವರ್ ಅವರು ಆದೇಶವನ್ನು ನೀಡಿದ್ದರು.

ಇದರ ಬೆನ್ನಲ್ಲೇ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ವರದಿ ನೀಡುವಂತೆ ಕಾರಾಗೃಹ ಇಲಾಖೆ ಡಿಜಿ ಮಾಲಿನಿ ಕೃಷ್ಣ ಮೂರ್ತಿ ಅವರಿಗೆ ಗೃಹ ಸಚಿವ ಜಿ ಪರಮೇಶ್ವರ್ ಆದೇಶಿಸಿದ್ದರು. ಇದೇ ವೇಳೆ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ರೆ ತೊಂದ್ರೆ ತಪ್ಪಿದ್ದಲ್ಲ ಎಂದು ಅಲರ್ಟ್ ಆದ ಅಧಿಕಾರಿಗಳು  ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಚಿಂತಿಸಿ, ಅದರಂತೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಇದೀಗ ಬೆಂಗಳೂರಿನ 24ನೇ ಎಸಿಎಂಎಂ ದರ್ಶನ್ ಅವರನ್ನು ಶಿಫ್ಟ್ ಮಾಡಲು ಒಪ್ಪಿಗೆ ನೀಡಿದೆ.

ದರ್ಶನ್ ಮಾತ್ರವಲ್ಲದೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇತರೆ ಆರೋಪಿಗಳನ್ನು ಕೂಡ  ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಅನುಮತಿ ಕೊಟ್ಟಿದೆ. ಅದರಂತೆ ಪವನ್ , ರಾಘವೇಂದ್ರ , ನಂದೀಶ್ ಹಾಗೂ  ಜಗದೀಶ್ ಮೈಸೂರು ಜೈಲಿಗೆ, ಲಕ್ಷ್ಮಣ, ಧನರಾಜ ಶಿವಮೊಗ್ಗ ಜೈಲಿಗೆ,ವಿನಯ್ ವಿಜಯಪುರದ ಜೈಲಿಗೆ, ನಾಗರಾಜ್ ಕಲಬುರ್ಗಿ ಜೈಲಿಗೆ, ಪ್ರದೂಶ್ ಬೆಳಗಾವಿ ಜಿಲ್ಲೆಗೆ ಜೈಲಿಗೆ ಶಿಫ್ಟ್ ಆಗಲಿದ್ದಾರೆ.ಇನ್ನು ನಟ ದರ್ಶನ್ ಅವರನ್ನು ನಾಳೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಈಗಾಗಲೇ ಬಳ್ಳಾರಿ ಜೈಲಿನಲ್ಲಿ ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.