ಮನೆ Latest News ರಾಜ್ಯದಲ್ಲಿ ಡಕಾಯಿತರು ಅಂದ್ರೆ ಕಾಂಗ್ರೆಸ್ ನವರು: ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

ರಾಜ್ಯದಲ್ಲಿ ಡಕಾಯಿತರು ಅಂದ್ರೆ ಕಾಂಗ್ರೆಸ್ ನವರು: ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

0

ಬೆಂಗಳೂರು: ರಾಜ್ಯದಲ್ಲಿ ಡಕಾಯಿತರು ಅಂದ್ರೆ ಕಾಂಗ್ರೆಸ್ ನವರು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯಪಾಲರನ್ನ ಭೇಟಿ ಮಾಡಿದ್ದೇವೆ. ಜೀವರಾಜ್ ಗೆದ್ದಿದ್ದಾರೆ ಎಂದು ಚುನಾವಣಾ ಆಯೋಗ ಸರ್ಟಿಫಿಕೇಟ್ ಕೊಟ್ಟಿದೆ. ಸಿಎಂ ಗೂ ಇದೇ ರೀತಿ ಚುನಾವಣಾ ಆಯೋಗವೇ ಕೊಟ್ಟಿರೋದು. ಸಂವಿಧಾನ ದತ್ತವಾಗಿ ಅಧಿಕೃತ ಪತ್ರ ಕೊಟ್ಟಿದ್ದಾರೆ ಎಂದಿದ್ದಾರೆ.

ಸಭಾದ್ಯಕ್ಷರಿಗೂ ಪತ್ರ ಕೊಡಲಾಗಿದೆ.ಸ್ಪೀಕರ್ ಇಂದು ನನಗೆ ಕಾನೂನು ಬೋಧನೆ ಮಾಡ್ತಿದಾರೆ. ಖಾದರ್ ಅವರಿಗೆ ಸರ್ಟಿಫಿಕೇಟ್ ಕೊಟ್ಟಾಗ ಲೀಗಲ್ ಅಡ್ವೈಸ್ ತಗೊಂಡಿದ್ದಾರೆ.ಯಾರೋ‌ ಕೋರ್ಟ್ ಹೋದ್ರೆ ಸ್ವೇರಿಂಗ್ ನಿಲ್ಲಲ್ಲ. ಹೈಕೋರ್ಟ್ ಛೀ ಮಾರಿ ಹಾಕಿದೆ. ಟ್ಯಾಂಪರಿಂಗ್ ಹೇಗೆ ಮಾಡ್ತಾರೆ ಎಂದು ಛೀಮಾರಿ ಹಾಕಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಡಕಾಯಿತರು ಅಂದ್ರೆ ಕಾಂಗ್ರೆಸ್ ನವರು. ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ಅಂದು ಅಧಿಕಾರಿಗಳು ಉಲ್ಟಾ ಹೊಡೆದಿದ್ರು. ಹಾಗಾಗಿ ಜೀವರಾಜ್ ಸೋತಿದ್ರು.ಇದೆಲ್ಲ ಸಿಬಿಐ ತನಿಖೆ ಆಗಬೇಕು, ರಿಟರ್ನಿಂಗ್ ಆಫೀಸ್ ರ ಗೆ ಯಾರ್ ಕಾಲ್ ಮಾಡಿ ಒತ್ತಡ ಹಾಕಿದ್ರು. ಅಂದು ಕಾಲ್ ಮಾಡಿದ್ದು ಡಿಕೆಶಿನಾ, ಸಿದ್ದರಾಮಯ್ಯನ? ಮರು ಎಣಿಕೆ ಮಾಡಿ ರಿಸಲ್ಟ್ ಅನೌನ್ಸ್ ಮಾಡಬೇಕು ಎಂದು ಕೋರ್ಟ್ ಹೇಳಿತ್ತು. ಆದ್ರೂ ಯಾಕೆ ತಕ್ಷಣ ಅನೌನ್ಸ್ ಮಾಡಿಲ್ಲ.ನ್ಯಾಯಾಂಗ ನಿಂದನೆ ಕೇಸ್ ಹಾಕ್ತಿದ್ದಂತೆ ಅನೌನ್ಸ್ ಮಾಡಿದ್ರು.ಸ್ಪೀಕರ್ ತಕ್ಷಣ ಜೀವರಾಜ್ ಅವರಿಗೆ ಓತ್ ನೀಡಬೇಕು ಸಂವಿಧಾನದ ಆರ್ಟಿಕಲ್ 188 ಪ್ರಕಾರ ರಾಜ್ಯಪಾಲರೇ ಓತ್ ಕೊಡೋದು. ರಾಜ್ಯಪಾಲರು, ಯಾರನ್ನಾದ್ರು ಪ್ರೋಟಂ ಸ್ಪೀಕರ್ ಮಾಡಿ ಓತ್ ಕೊಡಿಸುತ್ತಾರೆ. ಈಗ ರಾಜ್ಯಪಾಲರಿಗೆ ಓತ್ ಕೊಡಿಸುವಂತೆ ಮನವಿ ಮಾಡಿದ್ದೇವೆ. ಸ್ಪೀಕರ್ ಜೊತೆ ರಾಜ್ಯಪಾಲರು ಮಾತಾಡಿದ್ದಾರೆ. ತಕ್ಷಣ ಪ್ರಮಾಣವಚನ ಸ್ಪೀಕರ್ ಕೊಡಿಸಬೇಕು ಇಲ್ಲದಿದ್ದರೆ ಸ್ಪೀಕರ್ ವಿರುದ್ಧ ಹೋರಾಟ ಮಾಡ್ತೇವೆ ಎಂದು ಅಶೋಕ್ ಎಚ್ಚರಿಸಿದ್ದಾರೆ.