ಮನೆ Latest News ಪರಭಾವಗೊಂಡ ಅಭ್ಯರ್ಥಿ ರಾಜೇಗೌಡ ಹೈಕೋರ್ಟ್ ಮೆಟ್ಟಿಲಿಗೆ ಹೋಗಲಿಗೆ ಕಾಲಾವಕಾಶ ಕೊಡಬೇಕು ಎಂಬ ಕುತಂತ್ರ ನಡೆಸುತ್ತಿದ್ದಾರೆ; ಬಿಜೆಪಿ...

ಪರಭಾವಗೊಂಡ ಅಭ್ಯರ್ಥಿ ರಾಜೇಗೌಡ ಹೈಕೋರ್ಟ್ ಮೆಟ್ಟಿಲಿಗೆ ಹೋಗಲಿಗೆ ಕಾಲಾವಕಾಶ ಕೊಡಬೇಕು ಎಂಬ ಕುತಂತ್ರ ನಡೆಸುತ್ತಿದ್ದಾರೆ; ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ..

0

ತುಮಕೂರು: ಪರಭಾವಗೊಂಡ ಅಭ್ಯರ್ಥಿ ರಾಜೇಗೌಡ ಹೈಕೋರ್ಟ್ ಮೆಟ್ಟಿಲಿಗೆ ಹೋಗಲಿಗೆ ಕಾಲಾವಕಾಶ ಕೊಡಬೇಕು ಎಂಬ ಕುತಂತ್ರ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಜೀವರಾಜ್ ಅವ್ರು ಪರಭಾವಗೊಂಡ ತಕ್ಷಣವೇ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈ ಕೋರ್ಟ್ ಅದೇಶದಂತೆ ಮತ ಎಣಿಕೆ ಆಗಿದೆ. ನಮ್ಮ ಜೀವರಾಜ್ ಅಣ್ಣನವರು 56 ಮತಗಳಿಂದ ಗೆದ್ದಿದ್ದಾರೆ ಅಂತ ಮಾಹಿತಿ ಬಂತು.ಶುಭ ಸುದ್ದಿ ನೀಡಿದ್ದಾರೆ. ನಮಗೆ ಬಂದ ಮಾಹಿತಿ ಪ್ರಕಾರ ಕಾಂಗ್ರೆಸ್ ನವರು ಅಧಿಕಾರಿಗಳ ಮೇಲೆ ಒತ್ತಡ ಹಾಕುವಂತಹ ಕೆಲಸ ಮಾಡ್ತಿದ್ದಾರೆ. ಚುನಾವಣಾ ಫಲಿತಾಂಶ ಘೋಷಣೆ ಮಾಡಬಾರದು ಅನ್ನುವ ತನಕ ಒತ್ತಡ ಹಾಕುತ್ತಿದ್ದಾರೆ. ಪರಭಾವಗೊಂಡ ಅಭ್ಯರ್ಥಿ ರಾಜೇಗೌಡ ಹೈಕೋರ್ಟ್ ಮೆಟ್ಟಿಲಿಗೆ ಹೋಗಲಿಗೆ ಕಾಲಾವಕಾಶ ಕೊಡಬೇಕು ಎಂಬ ಕುತಂತ್ರ ನಡೆಯುತ್ತಿದೆ ಎಂದಿದ್ದಾರೆ.

ನಾನು ಎಲ್ಲರಲ್ಲೂ ವಿನಂತಿ ಮಾಡ್ತಿನಿ. ಜನರಿಂದ ಜನರ ಆಶೀರ್ವಾದದಿಂದ ಗೆದ್ದಿರುವ ಜೀವರಾಜ್ ಅವರಿಗೆ ಅನ್ಯಾಯ ಆಗಿದೆ. ಕಳೆದ ಮೂರು ವರ್ಷದಿಂದ ಶಾಸಕ ಸ್ಥಾನದಿಂದ ಅನ್ಯಾಯ ಆಗಿದೆ. ಇನ್ನು ಅನ್ಯಾಯ ಆಗದೇ ಗೌರವಯುತವಾಗಿ ಜನರ ಆದೇಶವನ್ನ ಒಪ್ಪಿಕೊಳ್ಳಬೇಕು. ಮುಂದಿನ ಎರಡು ವರ್ಷಗಳ ಕಾಲ ಶಾಸಕರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಅಂತ ನಾನು ವಿನಂತಿ ಮಾಡ್ತಿನಿ ಎಂದು ತಿಳಿಸಿದ್ದಾರೆ.