ಮನೆ ಪ್ರಸ್ತುತ ವಿದ್ಯಮಾನ ಖರ್ಗೆ ಅವರ ಅನುಭವದ ಮುಂದೆ ನಾನು ಮಾತಾಡೋಕೆ ಆಗಲ್ಲ; ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್...

ಖರ್ಗೆ ಅವರ ಅನುಭವದ ಮುಂದೆ ನಾನು ಮಾತಾಡೋಕೆ ಆಗಲ್ಲ; ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಖರ್ಗೆ ಅವರ ಅನುಭವದ ಮುಂದೆ ನಾನು ಮಾತಾಡೋಕೆ ಆಗಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

 

ಸದ್ಯಕ್ಕೆ ಬದಲಾವಣೆ ಇಲ್ಲ ಎಂಬ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಖರ್ಗೆಯವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಅಪಾರವಾದ ಅನುಭವ ಇರುವವರು. ರಾಜ್ಯಕ್ಕೆ ಬದಲಾವಣೆ ಆಗೋದಾದ್ರೆ

ಅವರು ಬಂದರೆ ಅವರ ಅನುಭವದ ಮುಂದೆ ಮಾತಾಡೋಕೆ ಆಗಲ್ಲ. ಎಲ್ಲಾ ಒಪ್ಪಿಕೊಳ್ತಾರೆ ಎಂದು ಎಲ್ಲ ಹೇಳಿದ್ರು, ನಾನು ಹೇಳಿದ್ದೆ. ಅದಕ್ಕೆ ಉತ್ತರ ಕೊಡಬೇಕಾದ್ರೆ ಅವರು ಹೇಳಿದ್ದು. ಸದ್ಯಕ್ಕೆ ಸಿಎಂ ಇದ್ದಾರೆ, ಮತ್ತೆ ಬದಲಾವಣೆ ಮಾಡುವ ಪ್ರಶ್ನೆ ಈಗಂತೂ ಸದ್ಯಕ್ಕೆ ಇಲ್ಲ ಎಂದಿದ್ದಾರೆ. ಇದನ್ನ ನಾನು ಸ್ವಾಗತ ಮಾಡುತ್ತೇನೆ. ಅವರು ಹೇಳಿದ ಮೇಲೆ ರಾಹುಲ್ ಗಾಂಧಿ, ಸೋನಿಯಾಗಾಂಧಿ, ವೇಣುಗೋಪಾಲ್, ಸುರ್ಜೆವಾಲಾ ಎಲ್ಲಾ ಕುಳಿತು ಮಾತನಾಡಿ ಅಭಿಪ್ರಾಯ ಬಂದಿರುತ್ತೆ ಎಂದು ನನ್ನ ಭಾವನೆ. ಅವರ ಮಾತಿಗೆ ಬಹಳ ಪ್ರಾಮುಖ್ಯತೆ ಇರುತ್ತೆ ಎಲ್ಲವೂ ಸದ್ಯಕ್ಕೆ ಅಲ್ಲಿಗೆ ಮುಗಿಯುತ್ತೆ ಎಂದಿದ್ದಾರೆ.

ಖರ್ಗೆ ಹೇಳಿಕೆಯ ನಡುವೆಯೂ ಗೊಂದಲ ವಿಚಾರದ ಬಗ್ಗೆ ಮಾತನಾಡಿದ ಅವರು ಬೇರೆ ಬೇರೆಯವರು ಹೇಳುತ್ತಾರೆ.ನಮ್ಮ ಅಭಿಪ್ರಾಯದಲ್ಲಿ ಖರ್ಗೆ ಸುಪ್ರೀಂ ಅಥಾರಿಟಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೈಕಮಾಂಡ್.ಅವರ ಬಾಯಿಂದ ಮಾತು ಬರುತ್ತೆ ಎಂದರೆ ಅದನ್ನ ಒಪ್ಪಿಕೊಳ್ಳಬೇಕು. ಅಲ್ಲಿಗೆ ಅಧ್ಯಾಯ ಮುಗಿಯಿತು. ಹೆಚ್ಚು ವ್ಯಾಖ್ಯಾನ ಮಾಡೋದ್ರಲ್ಲಿ ಅರ್ಥ ಇಲ್ಲ. ಅವರು ಬದಲಾವಣೆ ಇಲ್ಲ ಎಂದಿರೋವಾಗ ಎಲ್ಲಾ ಫುಲ್ ಸ್ಟಾಪ್ ಅಂತ ಅರ್ಥ ಎಂದು ತಿಳಿಸಿದ್ದಾರೆ.

ಪಂಚ ರಾಜ್ಯದ ಸಮೀಕ್ಷೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಮೀಕ್ಷೆ ಒಂದೊಂದು ಬಾರಿ ಹೇಗಾಗುತ್ತೆ ಅಂತ ನೋಡಿದ್ದೇವೆ. ಗ್ರೌಂಡ್ ರಿಯಾಲಿಟಿಯನ್ನು ನೋಡಿದ್ದೇವೆ. ನಮಗೆ ಕೇರಳದಲ್ಲಿ ಸರ್ಕಾರ ಬರುತ್ತೆ ಅಂತ ಆಶಾವಾದಿಗಳಾಗಿದ್ದೇವೆ. ರಾಜ್ಯದ ಹಲವರು ಅಲ್ಲಿನ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ನಾವು ಬರುತ್ತೇವೆ ಎಂದು ವರದಿ ಇದೆ. ಬಂಗಾಳದಲ್ಲಿ ನಡೆದಿರೋ ಘಟನೆ ನೋಡಿದ್ರೆ ಬಿಜೆಪಿ ಚುನಾವಣಾ ಆಯೋಗ ಯಾವ ರೀತಿ ಕೆಲಸ ಮಾಡಿ ಎಂದು ನೋಡಿದ್ದೇವೆ. ಅಲ್ಲಿ ಹೋಗಿ ಬಂದ ಅಬ್ಸರ್ವರ್ ಗಳನ್ನು ಮಾತಾಡಿಸಿದೆ. ಮೇಡಂ ಅವರಿಗೆ ಬರುವ ಅವಕಾಶ ಇದೆ ಎಂದಿದ್ದಾರೆ. ಕೆಲವು ಮಿಶ್ರ ಪ್ರತಿಕ್ರಿಯೆ ಇದೆ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಬರುತ್ತೆ ಎಂದಿದ್ದಾರೆ ಅಸ್ಸಾಂನಲ್ಲಿ ಸಮೀಕ್ಷೆ ಬಿಜೆಪಿ ಬರುತ್ತೆ ಎಂದಿದೆ. ಕಾದು ನೋಡೋಣ ಏನಾಗುತ್ತೆ ಎಂದು ಅವರು ಹೇಳಿದ್ದಾರೆ.