ಮನೆ Latest News ದಲಿತ ಸಿಎಂ ಬಗ್ಗೆ ಯತೀಂದ್ರ ಹೇಳಿಕೆ ವಿಚಾರ: ಅವರು ಹೇಳಿದ ಮೇಲೆ ಆಯ್ತಲ್ಲ, ಇನ್ನೇನಿದೆ, ನಾನು...

ದಲಿತ ಸಿಎಂ ಬಗ್ಗೆ ಯತೀಂದ್ರ ಹೇಳಿಕೆ ವಿಚಾರ: ಅವರು ಹೇಳಿದ ಮೇಲೆ ಆಯ್ತಲ್ಲ, ಇನ್ನೇನಿದೆ, ನಾನು ಮಾತಾಡೋದೇನಿದೆ ಎಂದ ಪರಮೇಶ್ವರ್

0

 

ಬೆಂಗಳೂರು: ದಲಿತ ಸಿಎಂ ಬಗ್ಗೆ ಯತೀಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಪರಮೇಶ್ವರ್,  ಅವರು ಹೇಳಿದ ಮೇಲೆ ಆಯ್ತಲ್ಲ, ಇನ್ನೇನಿದೆ, ನಾನು ಮಾತಾಡೋದೇನಿದೆ ಎಂದಿದ್ದಾರೆ.

ನಾನು ಈ ವಿಚಾರದಲ್ಲಿ ಮಾತಾಡಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ನೀವು ಎಷ್ಟೇ ಟ್ವಿಸ್ಟ್ ಮಾಡಿ ತಿರುವಿ ಕೇಳಿದ್ರೂ ನನ್ನ ಉತ್ತರ ಇದೇ. ಹೈಕಮಾಂಡ್ ತೀರ್ಮಾನ ಏನು ಮಾಡುತ್ತೋ ಅದಕ್ಕೆ ನಾವು ಬದ್ಧ. ದೆಹಲಿಗೆ ಸಂದರ್ಭ ಬಂದಾಗ ಹೋಗ್ತೇನೆ. ದೆಹಲಿಗೆ ಹೋಗೋದು ರಾಜಕಾರಣ ಮಾಡೋಕ್ಕೇನಾ? ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಸ್ವಾಗತ ಎಂಬ ತಮ್ಮ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು. ಅವರ ಸಮಕಾಲೀನರೆಲ್ಲಾ ಸಿಎಂ ಆಗಿದ್ದಾರೆ. ವೀರಪ್ಪ ಮೊಯಿಲಿ, ಗುಂಡೂರಾವ್ ಎಲ್ರೂ ಸಿಎಂ ಆದ್ರು. ಆದ್ರೆ ಖರ್ಗೆಯವರ ಐವತ್ತು ವರ್ಷದ ಸಾಧನೆಯಲ್ಲಿ ಹೈಕಮಾಂಡ್ ಅವರಿಗೆ ಸ್ಥಾನ ಕೊಟ್ರೆ ತಪ್ಪೇನಿಲ್ಲ. ಹಾಗಾಗಿಯೇ ನಾನು ಅವರು ಸಿಎಂ ಆದರೆ ಸಂತೋಷ ಅಂದಿದ್ದು ಎಂದು ಹೇಳಿದ್ದಾರೆ.

ಮಳೆ ಹಿನ್ನೆಲೆ ಅವಾಂತರ, ಸಾವಾದ ವಿಚಾರದ ಬಗ್ಗೆ ಮಾತನಾಡಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರ್ತೇನೆ. ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ಸತ್ತಿದ್ದಾರೆ. ಮಳೆ ಅವಾಂತರ ತಡೆಯಲು ತ್ವರಿತವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸಂಚಾರ ಪೊಲೀಸರಿಗೂ ಕ್ರಮ ವಹಿಸಲು ಸೂಚಿಸಲಾಗಿದೆ. ಕಾರ್ಪೊರೇಷನ್‌ನವ್ರು ಅಗತ್ಯ ಮುನ್ನೆಚ್ಚರಿಕೆ ತಗೋಬೇಕಿತ್ತು. ಒಣಗಿದ ಮರಗಳ ತೆರವು ಎಲ್ಲ ಕಾರ್ಪೊರೇಷನ್ ನವ್ರು ಮೊದಲೇ ಮಾಡಬೇಕಿತ್ತು. ಜಿಬಿಎ ಆದ ಮೇಲೆ ಐದು ಪಾಲಿಕೆ ಆಗಿವೆ.ಇನ್ನೂ ಅಧಿಕಾರಿಗಳು ಸೆಟಲ್ ಆಗಿಲ್ಲ ಅನ್ಸುತ್ತೆ. ಆದ್ರೆ ಅದೇ ಪರಿಸ್ಥಿತಿಯನ್ನು ನಿಭಾಯಿಸಿ ಗೊತ್ತಿದೆ ಅವರಿಗೆ.ಅದೇ ಅಧಿಕಾರಿಗಳು ಇದ್ದಾರೆ, ಅವರು ಎಲ್ಲ ರೀತಿಯ ಕ್ರಮ ತಗೋಬೇಕು ಎಂದಿದ್ದಾರೆ.