ಬೆಂಗಳೂರು; ಸಿಎಂ ಬದಲಾವಣೆ ಇಲ್ಲವೆಂದು ಖರ್ಗೆ ಮತ್ತೆ ಹೇಳಿಕೆ ವಿಚಾರದ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಅದು ಬಿಡಿ ಅದರ ಬಗ್ಗೆ ಚರ್ಚೆ ಯಾಕೆ ಮಾಡ್ತೀರಾ, ಬೇರೆ ಏನಾದ್ರು ಇದರೆ ಕೇಳಿ ಎಂದಿದ್ದಾರೆ.
ಸಿಎಂ ಸ್ಥಾನಕ್ಕೆ ಪರಮೇಶ್ವರ್ ಹೆಸರು ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಮುಖ್ಯಮಂತ್ರಿಗಳ ವಿಚಾರದಲ್ಲಿ ಚರ್ಚೆ ಮಾಡುವ ಅಗತ್ಯತೆ ಇಲ್ಲ. ಇಲ್ಲಿ ನಾನು ಸೇರಿದಂತೆ ಯಾರು ಏನೇ ಪ್ರತಿಕ್ರಿಯೆ ಕೊಟ್ಟರು ಬಹಳ ಮುಖ್ಯವಾಗಿ ಇರುವಂತದ್ದು ಹೈಕಮಾಂಡ್. ಹೈಕಮಾಂಡ್ ತೀರ್ಮಾನ ಮಾಡುವರೆಗೂ ನಾವು ಸುಮ್ಮನೆ ಹಾದಿ ಬೀದಿಯಲ್ಲಿ ಮಾತಾಡಿದ್ರೆ ಏನು ಪ್ರಯೋಜನ? ಎಂದಿದ್ದಾರೆ.
ಅಹಿಂದ ಸಮಾವೇಶದ ವಿಚಾರವಾಗಿ ಚರ್ಚೆ ಮಾಡಿಲ್ಲ.ಮುಖ್ಯಮಂತ್ರಿಗಳ ವಿಚಾರವನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ.ಇಲ್ಲಿ ಯಾರೇ ಏನೇ ಹೇಳಿಕೆ ನೀಡಿದರು ಕೂಡ ಹೈಕಮಾಂಡ್ ಏನು ಮಾಡುತ್ತೆ ಅನ್ನೋದು ಪ್ರಮುಖ ಆಗುತ್ತೆ .ಹೈಕಮಾಂಡ್ ಏನು ಮಾಡುತ್ತೆ ಅಂತ ಪ್ರತಿ ಬಾರಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ವಾಣಿಜ್ಯ ಬಳಕೆ ಸಿಲಿಂಡರ್ ದರ ಹೆಚ್ಚಳ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಳ್ಳೆಯ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕಿತ್ತು.ಈಗಾಗಲೇ ಬೆಲೆ ಏರಿಕೆ ತೀವ್ರವಾಗಿದೆ.ಇದ್ದ ಆರಂಭವಾಗಿರುವುದರಿಂದ ಬೆಳೆ ಏರಿಕೆ ಅನಿವಾರ್ಯ ಅಂತ ಅವರು ಹೇಳಿಕೊಳ್ಳಬಹುದು .ಆದರೆ ಅವರು ಅದನ್ನ ಅಬ್ಸರ್ಬ್ ಮಾಡುವಂತ ಶಕ್ತಿ ಅವರಿಗೆ ಇದೆ .ಈ ಸಂದರ್ಭದಲ್ಲಿ ದರ ಏರಿಕೆ ಮಾಡುವುದು ಬೇಡವಾಗಿದ್ದು.ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ ಅಂತ ವಿತ ಸಚಿವರು ಅನೇಕ ಸಚಿವರು ಹೇಳುತ್ತಲೇ ಇರುತ್ತಾರೆ .ಮತ್ತೆ ಈ ಸಂದರ್ಭದಲ್ಲಿ ಮಾಡುವ ಅನಿವಾರ್ಯತೆ ಏನಿತ್ತು?.ಜನ ಸಮುದಾಯದ ಮೇಲೆ ಹೊರಗೆ ಏರಿಸುವುದು ಸರಿಯಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.
ರಾಜ್ಯ ರಾಜಕಾರಣದ ಡೈನಮಿಕ್ಸ್ ಬದಲಾಗುವ ಸನ್ನಿವೇಶ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದನ್ನ ಚರ್ಚೆ ಮಾಡುವುದಕ್ಕೆ ಸಮಯ ಬೇಕು .ನಾನು ಸುಮ್ನೆ ಒಂದು ಹೇಳಿಕೆ ನೀಡುವುದರಿಂದ ಏನು ಬದಲಾಗುವುದಿಲ್ಲ.ನಾವು ಕಳೆದ 25 ವರ್ಷದಿಂದ ಒಂದು ಸಿದ್ಧಾಂತಕ್ಕೆ ಅಂಟಿಕೊಂಡಿದ್ದೇವೆ. ಮೇಜರ್, ಮೈನರ್, ಅಹಿಂದ ಎಸ್ ಸಿ, ಎಸ್ ಟಿ ಎಲ್ಲರೂ ಒಂದಾಗಿದ್ದೆವು. ದಿನಗಳು ಬದಲಾದಂತೆ ಅಹಿಂದ ಅನ್ನೋದು ಪ್ರಾರಂಭ ಆಯಿತು .ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಮತ್ತು ಇತರರು ಅಂತ ಪ್ರಾರಂಭ ಆಗಿದೆ. ಆವಾಗ ಡೈನಮಿಕ್ಸ್ ಬದಲಾಗಿದೆ . ಈಗ ಮತ್ತೆ ಅದೇ ರೀತಿ ಆಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಎಸ್ಸಿಯಲ್ಲಿ ಎಸ್ಟಿಯಲ್ಲಿ ರಿಸರ್ವೇಶನ್ ಪ್ರಮಾಣದಲ್ಲಿ ಬದಲಾವಣೆಯಾಗಿದೆ.ಇದೆಲ್ಲಾ ಆದಮೇಲೆ ನೋಡೋಣ ಎಂದಿದ್ದಾರೆ.










