ಬೆಂಗಳೂರು: ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೆ ಅಂತ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣದ ಆವರಣದಲ್ಲಿ ರಾಜ್ಯ ಬಿಜೆಪಿ ಘಟಕ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಕರ್ನಾಟಕಕ್ಕೆ ಹಲವು ಬಾರಿ ಬಂದಿದ್ದೇನೆ. ಏರ್ ಪೋರ್ಟ್ ನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದನ್ನು ಇವತ್ತೇ ನೋಡುತ್ತಿದ್ದೇನೆ. ಬೆಂಗಳೂರಿನಲ್ಲಿ ಕೇಸರಿ ಉದಯಿಸುತ್ತಿದೆ. ಬಿಜೆಪಿ ಕಾರ್ಯಕರ್ತರು ಇಷ್ಟು ಬೇಗ ಸಂಘಟಿತರಾಗಿ ಕಾರ್ಯಕ್ರಮಕ್ಕೆ ಬರುತ್ತಾರೆ. ಪಶ್ಚಿಮ ಬಂಗಾಳ ಗೆದ್ದಿರುವುದು ನಿಮ್ಮ ಗೆಲುವು. ಇಂದು ಐತಿಹಾಸಿಕ ದಿನ ನಮಗೆ ಎಂದಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಗುಲಾಮಿತನ ಬಿಡಿಸಲಾಗಿದೆ. ಅಪರೇಷನ್ ಸಿಂಧೂರ್ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಿದ್ದೆವು. ಮಾತಾ ಅಣ್ಣಮ್ಮಗೆ ನಮನಗಳನ್ನು ಸಲ್ಲಿಸುತ್ತೇನೆ. ನಾಡಪ್ರಭು ಕೆಂಪೇಗೌಡರಿಗೆ ನನ್ನ ಪ್ರಣಾಮಗಳು. ಪುದುಚೇರಿಯಲ್ಲಿ ಎನ್ ಡಿಎ ಸರ್ಕಾರ ಬಂದಿದೆ. ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಗುಜರಾತ್ ನ ಪಂಚಾಯತ್ ಚುನಾವಣೆಯಲ್ಲಿ ದೊಡ್ಡ ಮಟ್ಟಿಗೆ ಗೆದ್ದು ದಾಖಲೆ ಮುರಿದಿದ್ದೇವೆ. ನಾವು ಹೊಸ ಇತಿಹಾಸ ಸೃಷ್ಟಿ ಮಾಡಬೇಕಿದೆ. ಭಾರತಕ್ಕೆ ವೇಗ ಬೇಕಿದೆ, ಪರಿಹಾರಗಳು ಬೇಕಾಗಿದೆ. ಭಾರತದಲ್ಲೆಲ್ಲಾ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ದೊಡ್ಡ ಶಕ್ತಿ ಆಗಬೇಕಿದೆ. ಆಂಧ್ರಪ್ರದೇಶದಲ್ಲಿ ಎನ್ ಡಿಎ ಸರ್ಕಾರ ಇದೆ. ಕರ್ನಾಟಕದಲ್ಲಿ ಬಿಜೆಪಿ ನಂಬರ್ 1 ಆಗಿದೆ. ತೆಲಂಗಾಣದಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಪುದುಚೇರಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಮೂರು ಜನ ಶಾಸಕರಿದ್ದರು. ಈಗ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದೇವೆ. ಕೇರಳದಲ್ಲಿ ನಾವು ಈಗ ಮೂರು ಸ್ಥಾನ ಗೆದ್ದಿದ್ದೇವೆ ಎಂದು ಹೇಳಿದ್ದಾರೆ.
ಅಲ್ಲಿ ಅಧಿಕಾರಕ್ಕೆ ಬರುವುದಕ್ಕೆ ತುಂಬಾ ದಿನ ಬೇಕಾಗಿಲ್ಲ. ದೇಶದಲ್ಲಿ ಬಿಜೆಪಿ, ಎನ್ ಡಿ ಎ ಸರ್ಕಾರ ಇದೆ. ಕಾಂಗ್ರೆಸ್ ನಲ್ಲಿ 40 ವರ್ಷಗಳ ಹಿಂದೆ 400 ಸ್ಥಾನ ಗೆಲ್ಲುತ್ತಿದ್ದರು .ಈಗ ಅಹಂಕಾರದಿಂದ ಪರಾಜಯಗೊಂಡಿದ್ದಾರೆ. ಮುಂಚೂಣಿಯಲ್ಲಿರುವ ರಾಜಕೀಯ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೆ ಅಂತ ಗೊತ್ತಿಲ್ಲ. ತೆಲಂಗಾಣದಲ್ಲಿ ರೈತರ ಆತ್ಮಹತ್ಯೆ ಆಗುತ್ತಿದೆ. ಖಜಾನೆ ಲೂಟಿ ಹೊಡಿಯುತ್ತಿದ್ದಾರೆ. ಕಾಂಗ್ರೆಸ್ ನಿರಾಸೆಯಲ್ಲಿ ಮುಳುಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸಿದ್ದಾಂತ ಉಳಿದಿಲ್ಲ. ಲೋಕಕಲ್ಯಾಣ ಬಿಜೆಪಿಯ ಆದ್ಯತೆ. ಒಳ್ಳೆಯ ಸರ್ಕಾರ ನಮ್ಮ ಮಾದರಿ. 50 ಕೋಟಿ ಜನ ಬಡತನದಿಂದ ಹೊರಬಂದಿರುವುದು ಇದಕ್ಕೆ ಉದಾಹರಣೆ. ಕಾಂಗ್ರೆಸ್ನ ಆಡಳಿತ ವಿರೋಧಿ ಅಲೆ ಶುರುವಾಗುತ್ತದೆ. ಕಾಂಗ್ರೆಸ್ನ ಗ್ಯಾರಂಟಿಯೂ ಸುಳ್ಳು.ನಾವು ಮೂರು ವರ್ಷದಿಂದ ಕರ್ನಾಟಕದಲ್ಲಿ ನೋಡಿದ್ದೇವೆ ಎಂದಿದ್ದಾರೆ.
ಜನರ ಸಮಸ್ಯೆ ಬಗೆಹರಿಸುವ ಬದಲು ಆಂತರಿಕ ಜಗಳದಲ್ಲಿ ಮುಳುಗಿದ್ದಾರೆ. ಇಲ್ಲಿನ ಸಿಎಂ ಎಷ್ಟುದಿನದ ಉಳಿಯುತ್ತಾರೋ, ಮತ್ತೊಬ್ಬರಿಗೆ ಅವಕಾಶ ಸಿಗುತ್ತೋ ಇಲ್ಲವೋ .ಈ ಸರ್ಕಾರದಲ್ಲಿ ಇದೇ ಆಗಿದೆ. ರಾಜಸ್ಥಾನದಲ್ಲಿ ಇದೇ ಆಗಿತ್ತು.ಈಗ ಕೇರಳದಲ್ಲಿಯೂ ಅದು ನಡೆದಿದೆ. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಕಾಂಗ್ರೆಸ್ ಇತ್ತು. ಈಗ ಘಟಬಂಧನ್ ನಿಂದ ಆಚೆ ಬಂದಿದೆ. ಈಗ ಡಿಎಂಕೆ ವಿರುದ್ಧವೇ ಕಾಂಗ್ರೆಸ್ ನಿಂತಿದೆ. ಸಂಸತ್ ನಲ್ಲಿ ಕಾಂಗ್ರೆಸ್ ನವರು ಮಹಿಳಾ ಮೀಸಲಾತಿ ಮಸೂದೆ ವಿರೋಧ ಮಾಡಿದರು . ಇದು ಜಾರಿಯಾಗಿದ್ದರೆ ಸಾಮಾನ್ಯ ವರ್ಗದ ಮಹಿಳೆಯರು ಶಾಸಕರು, ಸಂಸದರಾಗಬಹುದಿತ್ತು. ಕರ್ನಾಟಕದ ಮಹಿಳೆಯರು ಇವರನ್ನು ಕ್ಷಮಿಸಬಾರದು ಎಂದು ಹೇಳಿದ್ದಾರೆ.









