ಮನೆ Latest News ಸಂಪುಟ ಪುನಃರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸ್ತಾರೆ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ

ಸಂಪುಟ ಪುನಃರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸ್ತಾರೆ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ

0

ಬೆಂಗಳೂರು : ಸಂಪುಟ ಪುನಃರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶ ವಿಚಾರದ ಬಗ್ಗೆ ಮಾತನಾಡಿದ ಅವರು ಕಂದಾಯ ಇಲಾಖೆಯಿಂದ ಇಡೀ ರಾಜ್ಯದಲ್ಲಿ ಪೌತಿ ಖಾತೆ, ಹಕ್ಕು ಪತ್ರ, ಕಂದಾಯ ಗ್ರಾಮಗಳ ಬಗ್ಗೆ ತೀರ್ಮಾನ ಹಕ್ಕು ಪತ್ರ ನೀಡ್ತಿದ್ದೇವೆ. 1 ಲಕ್ಷದ 45 ಸಾವಿರ ಜನರಿಗೆ ಹಕ್ಕು ಪತ್ರ ನೀಡ್ತೀವಿ. ಮೂರು ವರ್ಷ ಪೂರೈಕೆ ಆಗ್ತಿದೆ ಅನ್ನೋ ಕಲ್ಪನೆಯೇ ಇರಲಿಲ್ಲ. ಮೇ 20ಕ್ಕೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು. ಸಿಎಂ ಸಮಯ ಕೊಟ್ಟಿದ್ದರು ಆಗ ಸಿಂಕ್ ಆಯ್ತು ಎಂದ ಅವರು ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆ ಈಡೇರಿದ್ಯಾ ಎಂಬ ಪ್ರಶ್ನೆಗೆ. ಉತ್ತರಿಸಿ ಭರವಸೆ ಶೇ.50% ಈಡೇರಿಕೆ ಆಗಿದೆ.
ಮತ್ತೆ ಪರಿಶೀಲನೆ ಮಾಡಲಾಗುತ್ತದೆ ಎಂದಿದ್ದಾರೆ.

ಚೆನ್ನೈ ಶಾಸಕರ ಶಿಫ್ಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ನನಗೆ‌ ಏನೂ ಗೊತ್ತಿಲ್ಲ.
ನಮಗೆ ಯಾವ ಕುದುರೆ ವ್ಯಾಪಾರವೂ ಗೊತ್ತಿಲ್ಲ ಎಂದಿದ್ದಾರೆ. ಪಶ್ಚಿಮ ಬಂಗಾಳದ ಗೆಲುವಿಗೆ ಎಸ್ ಐಆರ್ ಕಾರಣ ಎಂಬ ವಿಚಾರದ ಬಗ್ಗೆ ಮಾತನಾಡಿ ಕಾರಣಾಂತರದಿಂದ ನಾನು ನಿನ್ನೆ ಸಭೆಗೆ ಹೋಗಿಲ್ಲ.ಬಿಜೆಪಿ ಐದು ಸಾವಿರ ಮತಗಳ ಅಂತರದಲ್ಲೇ ಗೆದ್ದಿದ್ದಾರೆ. ವಿಶ್ಲೇಷಣೆ ಮಾಡುವವರು ಎಸ್ ಐಆರ್ ನಿಂದ ಚರ್ಚೆ ಮಾಡುತ್ತಿದ್ದಾರೆ. ನಿನ್ನೆ ಈ ಬಗ್ಗೆ ಸಿಎಂ ಕರೆದಿದ್ದರು.ಈಗಾಗಲೇ ಮ್ಯಾಪಿಂಗ್ ಆಗಿದೆ. ಪೂರ್ಣಗೊಂಡ ನಂತರ ಒಂದು‌ ಚಿತ್ರಣ ಸಿಗುತ್ತೆ ಎಂದಿದ್ದಾರೆ.

ಕ್ಯಾಬಿನೆಟ್ ಪುನರ್ ರಚನೆ ಗೊಂದಲ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲಿ ಹೋದ್ರೂ ಇದೇ ವಿಚಾರಕ್ಕೆ ಬರ್ತೀರಲ್ಲಾ? ಎಲ್ಲದಕ್ಕೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಉತ್ತರಿಸಿದ್ದಾರೆ