ಮನೆ Latest News ಐಪಿಎಲ್ ಫಿನಾಲೆ ಶಿಫ್ಟ್ ಆಗಿದ್ದಕ್ಕೂ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ; ಗೃಹ ಸಚಿವ ಡಾ.ಜಿ...

ಐಪಿಎಲ್ ಫಿನಾಲೆ ಶಿಫ್ಟ್ ಆಗಿದ್ದಕ್ಕೂ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ; ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಐಪಿಎಲ್ ಫಿನಾಲೆ ಶಿಫ್ಟ್ ಆಗಿದ್ದಕ್ಕೂ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಒಪ್ಪಂದ ನಮಗೇನೂ ಗೊತ್ತಿಲ್ಲ. ಅದು ಬಿಸಿಸಿಐ, ಆರ್ ಸಿಬಿಗೆ ಬಿಟ್ಟ ವಿಚಾರ. ಟಿಕೆಟ್ ಕಾರಣಕ್ಕಾಗಿ ಶಿಫ್ಟ್ ಮಾಡಿದ್ದಾರೆ ಅಂತ ಅನ್ನಿಸ್ತಿದೆ. ಕಮರ್ಷಿಯಲ್ ಪರ್ಪೋಸ್ ನಲ್ಲಿ ಅವರು ನೋಡ್ತಿದ್ದಾರೆ.ಭದ್ರೆತೆ ಅಥವಾ ಬೇರೆ ವಿಚಾರದ ಕೊರತೆ ಅಂತಿಲ್ಲ. ಕಳೆದ ವರ್ಷದಂತಹ ಘಟನೆ ನಡೆಯದಂತೆ ನಾವು ಕ್ರಮ ತೆಗೆದುಕೊಂಡಿದ್ದೇವೆ. ಕುನ್ಹಾ ವರದಿ ಪ್ರಕಾರ ಅನೇಕ ಬದಲಾವಣೆ ಮಾಡಿದ್ದೇವೆ.ಕಡಿಮೆ‌ ಸಮಯದಲ್ಲಿ ಬೇಕಾದ ಭದ್ರತೆಯನ್ನ ಮಾಡಿದ್ದೇವೆ. ಹೆಚ್ಚು ಸೀಟ್ ಸಿಗುತ್ತೆ ಅಂತ ಹೀಗೆ ಮಾಡಿರಬಹುದು. ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ.600 ಸೀಟ್ ಎಂಎಲ್ ಎಗಳಿಗೆ ಕೊಡೋದಕ್ಕೋಸ್ಕರ ಶಿಫ್ಟ್ ಮಾಡಿಬಿಟ್ತಾರಾ?.ಹಾಗೇನಾದ್ರೂ ಇದ್ರೆ ಹೇಳಲಿ. ಯಾರ್ಯಾರು ಎಷ್ಟು ಟಿಕೆಟ್ ತೆಗೆದುಕೊಂಡಿದ್ದಾರೆ ಹೇಳಿ ನೋಡೋಣ ಎಂದಿದ್ದಾರೆ.

ಆರ್ಸಿಬಿ ಅಭಿಮಾನಿಗಳಿಗೆ ಮೋಸ ಎಂಬ ವಿಪಕ್ಷಗಳ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿ, ಜೆಡಿಎಸ್ ಕ್ರೀಡೆಗೆ ಏನು ಸಹಕಾರ ಕೊಟ್ಟಕದ್ದಾರೆಂದು ಗೊತ್ತಿದೆ. ಯಾರು ಯಾರು ಏನು ಮಾಡಿದ್ದಾರೆ ಅಂತ ಗೊತ್ತಿದೆ ಎಂದಿದ್ದಾರೆ. ತಮಿಳುನಾಡಿನಲ್ಲಿ‌ ಸರ್ಕಾರ ರಚನೆಗೆ ರಾಜ್ಯಪಾಲರು ಬೆಂಬಲ ಪತ್ರ ಕೇಳಿರುವ ವಿಚಾರದ ಬಗ್ಗೆ ಮಾತನಾಡಿದ ಅವರು

ಸಂವಿಧಾನದಲ್ಲಿ ಕೆಲವು ಅಂಶಗಳಿವೆ. ಅದನ್ನ ನೋಡಿ ರಾಜ್ಯಪಾಲರು ಮಾಡುತ್ತಾರೆ. ಕಾನೂನಿನಲ್ಲಿ, ಸಂವಿಧಾನದ ಅಡಿಯಲ್ಲಿ ಏನು ಬರೆದಿದ್ದಾರೆ ಅಂತ ನೋಡಿ ಕ್ರಮ ವಹಿಸುತ್ತಾರೆ. ಅವರು ಕೋರ್ಟ್ ಹೋಗ್ತಾರೆ ಅನ್ನಿಸುತ್ತೆ, ಬಹುಶಃ ಕೋರ್ಟ್ ಗೆ ಹೋಗಬಹುದು ಎಂದು ತಿಳಿಸಿದ್ದಾರೆ.