ಗದಗ: ಇಸ್ರೇಲ್, ಅಮೇರಿಕಾ, ಇರಾನ್ ಯುದ್ದ ಮುಗಿಯದ ಕಾರಣ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡಿಸೆಲ್ ಮಿತವ್ಯಯದ ಸಂದೇಶ ಕೊಟ್ಟಿದ್ದಾರೆ. ಕಾಂಗ್ರೆಸ್ ನವರಿಗೆ ತ್ಯಾಗ, ದೇಶ ಭಕ್ತಿ ಅನ್ನುವುದೇ ಗೊತ್ತಿಲ್ಲ. ಕಾಂಗ್ರೆಸ್ ನವರಿಗೆ ಜನ ಮಾನಸದಲ್ಲಿ ದೇಶ ಭಕ್ತಿ ಆಳವಾಗಿ ಊರಿದೆ ಎಂಬುದು ಗೊತ್ತಿಲ್ಲ ವಿರೋಧ ಮಾಡುವುದರ ಸಲುವಾಗಿ ವಿರೋಧ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಂತರಾಷ್ಟ್ರೀಯ ಮಟ್ಟದಲ್ಲಿ ಇರಾನ್ ಇಸ್ರೇಲ್, ಅಮೇರಿಕಾ ಯುದ್ದ ನಡೆಯುತ್ತಿದೆ. ಗಲ್ಫ್ ರಾಷ್ಟ್ರದ ಯುದ್ದ ಮುಗಿಯುವಂತೆ ಕಾಣುತ್ತಿಲ್ಲ. ಉಕ್ರೇನ್ ರಷ್ಯಾ ಯುದ್ದ ಆದಾಗ ಬಹಳಷ್ಟು ಸಮಸ್ಯೆ ಆಗಿತ್ತು. ರಸಗೊಬ್ಬರ ಕಚ್ಚಾವಸ್ತುಗಳ ಸಮಸ್ಯೆ ಆಗಿತ್ತು. ಈಗ ಪೆಟ್ರೋಲ್, ಡಿಸೇಲ್, ಆಯಿಲ್ ಸಮಸ್ಯೆ ಆಗುತ್ತಿದೆ. ಇರಾನ್ ದೇಶದ ಮೇಲೆ ಅವಲಂಬಿತವಾಗಿದೇವೆ. ಇಷ್ಟು ದಿನ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ಉಪಯೋಗಿಸಿ ಕಳೆದ ಎರಡು ತಿಂಗಳು ಪೆಟ್ರೋಲ್ ಡಿಸೇಲ್, ಗ್ಯಾಸ್ ಸಮಸ್ಯೆ ಆಗದಂತೆ ನೋಡಿದ್ದರು. ಆಯಿಲ್ ಕಂಪನಿಗಳು ನಷ್ಟದಲ್ಲಿ ವಿತರಣೆ ಮಾಡಿದ್ದಾರೆ ಯುದ್ದ ಮುಗಿಯುತ್ತೇ ಎಂಬ ನಂಬಿಕೆ ಇತ್ತು. ಆದರೆ, ಯುದ್ದ ಮುಗಿದ್ದಿಲ್ಲ. ಬರುವ ದಿನಗಳಲ್ಲಿ ಪೆಟ್ರೋಲ್ ಡಿಸೇಲ್ ಗ್ಯಾಸ್ ಸಂಕಷ್ಟ ಬರಹಬಹುದು. ಅಂತರಾಷ್ಟ್ರೀಯ ಮಟ್ಟದಲ್ಲಿ ದರಗಳು ಹತ್ತು ಪಟ್ಟು ಹೆಚ್ಚಿಗೆ ಆಗಿವೆ. ಅಮೇರಿಕಾ, ಶ್ರೀಲಂಕಾ, ಮಲೇಷಿಯಾ,, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರದಲ್ಲಿ ದರ ಏರಿಕೆ ಆಗಿದೆ. ಭಾರತ ದರ ಹೆಚ್ಚಿಗೆ ಆಗದೆ ಇರುವ ದೇಶವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ ಕೊಟ್ಟಿದ್ದಾರೆ ಜನರು ನಮ್ಮ ಮಿತವ್ಯಯದಲ್ಲಿ ಬಳಕೆ ಮಾಡಬೇಕು. ನಮ್ಮ ಮೇಲೆ ಬರುವ ದೊಡ್ಡ ಬಾರ ,ಹಣ ದುಬ್ಬರವನ್ನ ನಿಲ್ಲಿಸಬಹುದಾಗಿದೆ. ಸುಲಭವಾಗಿ ಮಾಡಬಹುದಾಗಿದೆ. ಬಂಗಾರ ಖರೀದಿ ಮಾಡುವದ್ರಿಂದ ವಿದೇಶಿ ತೆರಿಗೆ ಹೊಡೆತ ಬೀಳುತ್ತಿದೆ. ಹೀಗಾಗಿ ಒಂದು ವರ್ಷ ಬಂಗಾರ ಖರೀದಿ ನಿಲ್ಲಿಸಿದದಿದ್ದರೆ ಏನೂ ಆಗುವುದಿಲ್ಲ. ಇನ್ನು ಪೆಟ್ರೋಲ್ ಡಿಸೇಲ್ ಮಿತವ್ಯಯವಾಗಿ ಬಳಕೆ ಮಾಡಬೇಕು. ರಸಗೊಬ್ಬರ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಕೆ ಮಾಡಿ ಎಂದಿದ್ದಾರೆ. ಇನ್ನು ವಿದೇಶ ಪ್ರಯಾಣ ಸಹ ಕಡಿಮೆ ಮಾಡಬೇಕು ಎಂದಿದ್ದಾರೆ ದೇಶಕ್ಕಾಗಿ ಇಷ್ಟಾದರೂ ನಾವು ಮಾಡಬೇಕಿದೆ ಎಂದು ಹೇಳಿದರು.
ಈ ಹಿಂದೆ ಭಾರತ ಪಾಕಿಸ್ತಾನ ಯುದ್ದ ಆದಾಗ ಆಹಾರ ಕೊರತೆ ಆಗಿತ್ತು. ಆಗಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಒಂದು ದಿನ ಉಪವಾಸ ಮಾಡಿ ಎಂದಿದ್ದರು. ಒಬ್ಬ ನಾಯಕನ ನೈತಿಕ ಬಲವಿದ್ದಾಗ ಮಾತ್ರ ಹೇಳಲು ಆಗುತ್ತದೆ. ಇದು ಕಾಂಗ್ರೆಸ್ ನವರಿಗೆ ಅರ್ಥ ಆಗುದಿಲ್ಲ. ಕಾಂಗ್ರೆಸ್ ನವರಿಗೆ ತ್ಯಾಗ, ದೇಶ ಭಕ್ತಿ ಅನ್ನೋದೆ ಗೊತ್ತಿಲ್ಲ ಕಾಂಗ್ರೆಸ್ ನವರಿಗೆ ಜನ ಮಾನಸದಲ್ಲಿ ದೇಶ ಭಕ್ತಿ ಆಳವಾಗಿ ಉರಿದೆ ಎಂಬುದು ಅವರಿಗೆ ಗೊತ್ತಿಲ್ಲ. ವಿರೋಧ ಮಾಡುವುದರ ಸಲುವಾಗಿ ವಿರೋಧ ಮಾಡುತ್ತಾರೆ. ಹಿಂದೇ ಇರಾಕ್ ವಾರ್ ಆಗಿತ್ತು.. ಆವಾಗ ಮೂರೆದಿನದಲ್ಲಿ ಪೆಟ್ರೋಲ್ ಡಿಸೇಲ್ ಖಾಲಿ ಆಗಿತ್ತು.
ಗದಗ ದಿಂದ ದಿಲ್ಲಿವರೆಗೂ ಪೆಟ್ರೋಲ್ ಬಂಕ್ ಮುಂದೆ ಕಿಲೋಮೀಟರ್ ಗಟ್ಟಲೇ ವಾಹನಗಳು ನಿಂತಿದ್ದವು.ಕಾಂಗ್ರೆಸ್ ಸರ್ಕಾರ ನಿರ್ವಹಣೆ ಮಾಡಿತ್ತು. ಇಂತಹ ವಿಚಾರ ಗೊತ್ತಾಗಲ್ಲ. ಪ್ರಧಾನಿ ನರೇಂದ್ರ ಕರೆಕೊಟ್ಟಿದು ಎಲ್ಲರೂ ಮಾಡಬೇಕಿದೆ. ಈ ಹಿಂದೆ ಕೋವಿಡ್ ನಲ್ಲಿ ಜನರು ಸ್ಪಂದಿಸಿದ್ದಾರೆ. ಅದೇ ರೀತಿ ಇವಾಗ ಸ್ಪಂದನೆ ಸಿಗುವ ಭರವಸೆ ಇದೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.ಈ ಹಿಂದೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಸರ್ಕಾರ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ವಿರುದ್ದ ಜನರು ಆಕ್ರೋಶ ಗೊಂಡಿದ್ದಾರೆ. 2028 ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಜನರು ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.










