ಮನೆ Latest News ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಜಾಸ್ತಿ ಮಾಡೋದು, ನಾವು ಕಡಿಮೆ‌ ಮಾಡೋದು; ...

ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಜಾಸ್ತಿ ಮಾಡೋದು, ನಾವು ಕಡಿಮೆ‌ ಮಾಡೋದು; ಡಾ.ಜಿ ಪರಮೇಶ್ವರ್ ಹೇಳಿಕೆ

0

ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್  ಬೆಲೆ ಜಾಸ್ತಿ ಮಾಡೋದು, ನಾವು ಕಡಿಮೆ‌ ಮಾಡೋದು ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಪೆಟ್ರೋಲ್, ಡಿಸೇಲ್ KST ಕಡಿಮೆ ಮಾಡಬೇಕೆಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಜಾಸ್ತಿ ಮಾಡೋದು, ನಾವು ಕಡಿಮೆ‌ ಮಾಡೋದು. ನಾವು ಸಬ್ಸಿಡಿ ಮಾಡೋದು ಎಲ್ಲಿಂದ ಸಾಧ್ಯಯಿದೆ. ಕೇಂದ್ರ ಸರ್ಕಾರಕ್ಕೆ ಜ‌ನಪರ ಚಿಂತನೆ ಇಲ್ಲ, ಜವಬ್ದಾರಿ ಇಲ್ವಾ?. ಇದೆಲ್ಲವೂ ಕೇಂದ್ರ ಸರ್ಕಾರ ಗ‌ಮನಿಸಿಕೊಳ್ಳಬೇಕು. ಈಗಾಗಲೇ ಅ‌ನೇಕ ಯೋಜನೆಗಳಲ್ಲಿ ಮನರೇಗಾ ಇರಬಹುದು, ನಮಗೆ ಬರಬೇಕಾದ ತೆರಿಗೆ ಹಣ ಬಂದಿಲ್ಲ. ಇದೆಲ್ಲವೂ ನಮ್ಮ ಮೇಲೆ ಹೊರೆಯಿದೆ. ಮತ್ತೆ ಪೆಟ್ರೋಲ್, ಡಿಸೇಲ್ ದರ ಕಡಿಮೆ ಮಾಡಿ ಎಂದು ಹೇಳೋಕೆ ಆಗುತ್ತಾ?. ಅವರು ಜವಬ್ದಾರಿಯುತವಾಗಿ ಸರ್ಕಾರ ನಡೆಸುವವರು ಮುಂಚೇ ಯೋಜನೆ ಮಾಡಬೇಕಿತ್ತು. ಮನಮೋಹನ್ ಸಿಂಗ್ ಇದ್ದಾಗ ಎಷ್ಟಿತ್ತು, ಈಗ ಎಷ್ಟಿದೆ? ಎಂದಿದ್ದಾರೆ.

ನಮಗೆ ಗೊತ್ತು ಹೇಗೆ ನಮ್ಮ ಹಣಕಾಸು ನಿರ್ವಹಣೆ ಮಾಡಬೇಕು ಅಂತಾ. ಮನರೇಗಾ ಯೋಜನೆಯಲ್ಲಿ ಹಣ ಕೊಡೋದಿಲ್ಲ ಎಂದಾಗ 10% ಮಾಡಬೇಕು ಎಂದಾಗ ನಾವೇ ಮಾಡ್ತೇವೆ. ಅದರ ಹೊರೆ ಯಾರು ಕಡಿಮೆ ಮಾಡೋದು ಎಂದ ಅವರು  ಶೀಘ್ರದಲ್ಲಿಯೇ ರಾಜ್ಯದಲ್ಲಿ SIR ಪ್ರಾರಂಭ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮ ಶಾಸಕರ ಕ್ಷೇತ್ರಗಳಲ್ಲಿ ಮಾನಿಟರ್ ಮಾಡಬೇಕು. ಸರಿಯಾದ ರೀತಿಯಲ್ಲಿ SIR ಮಾಡುವುದರಲ್ಲಿ ನೀವು ಭಾಗಿಯಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಗಮನಿಸಬೇಕು ಎಂದು ಹೇಳಿದ್ದಾರೆ ಎಂದಿದ್ದಾರೆ.

52 ಪ್ರಕರಣಗಳು ವಾಪಸ್ ಪಡೆದ ವಿಚಾರದ ಬಗ್ಗೆ ಮಾತನಾಡಿದ ಅವರು ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳ ಮೇಲೆ ಇದ್ದ ಕೇಸ್ ಗಳ ಬಗ್ಗೆ ಸರ್ಕಾರ ಶಿಫಾರಸು ಮಾಡಿತ್ತು. ಕ್ಯಾಬಿನೆಟ್ ಸಬ್ ಕಮಿಟಿಗೆ ಸರ್ಕಾರ ಶಿಫಾರಸು ಮಾಡಿತ್ತು.  ಸಬ್ ಕಮಿಟಿ  ಪ್ರತಿಯೊಂದು ಕೇಸ್ ಚರ್ಚೆ ಮಾಡಿ. ಕಾನೂನಾತ್ಮಕವಾಗಿ ವಾಪಸ್ ತೆಗೆದುಕೊಳ್ಳಲು ಅವಕಾಶ ಇದೆ ಎಂದು ತೀರ್ಮಾನ ‌ಮಾಡಿತ್ತು. ರಾಜ್ಯದಲ್ಲಿ 52 ಕೇಸ್ ವಾಪಸ್ ತೆಗೆದುಕೊಳ್ಳಬಹುದು ಎಂದು ಕ್ಯಾಬಿನೆಟ್ ತೀರ್ಮಾನ ಮಾಡಿದೆ ಎಂದು ತಿಳಿಸಿದ್ದಾರೆ. ಲಾಡ್ಲೆ ಮಷಾಕ ದರ್ಗಾ ಪ್ರಕರಣ ವಾಪಸ್ ಪಡೆದ ವಿಚಾರದ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ಡಿಟೈಲ್ಸ್ ಹೇಳಲು ಹೋಗಲ್ಲ. ಯಾಕೆ ಕ್ಯಾಬಿನೆಟ್ ನಿರ್ಧಾರ ಆಗಿದೆ. ಎಲ್ಲವೂ ಪರಿಗಣಿಸಿಯೇ ಚರ್ಚೆ ಮಾಡಿಯೇ ತೀರ್ಮಾನ ಮಾಡಲಾಗಿದೆ. ಏಕಾಏಕಿ ತೀರ್ಮಾನ ‌ಮಾಡಿಲ್ಲ. ಚರ್ಚೆ ಮಾಡಿಯೇ ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.