ಮನೆ ಪ್ರಸ್ತುತ ವಿದ್ಯಮಾನ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟು ಕೊಡಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ; ಮಾಜಿ ಸಚಿವ...

ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟು ಕೊಡಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ; ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿಕೆ

0

ಬೆಂಗಳೂರು; ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟು ಕೊಡಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ

ಇವರನ್ನು ಸಮಾಧಾನ ಮಾಡಬೇಕು, ಜೊತೆಯಲ್ಲಿ ಇರಬೇಕು ಅಂತ ಪರಮೇಶ್ವರ್ ಅವರಿಗೆ ತಲೆಗೆ ಹುಳ ಬಿಟ್ಟಿದ್ದಾರೆ. ಪರಮೇಶ್ವರ್ ತುಟಿಗೆ ಬೆಣ್ಣೆ ಹೆಚ್ಚಿದ್ದಾರೆ. ಡಿ.ಕೆ. ಶಿವಕುಮಾರ್ ಸುಮ್ಮನೆ ಕೂರುತ್ತಿಲ್ಲ. ದೆಹಲಿಗೆ ಹೋಗುತ್ತಾರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗುತ್ತಾರೆ, ಬರುತ್ತಾರೆ. ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಆಗಲ್ಲ ಅಂತ ವದಂತಿ ಇತ್ತು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಮಲ್ಲಿಕಾರ್ಜುನ ಖರ್ಗೆ ಕೂಡಾ ಸಿಎಂ ಆಗಬೇಕು ಅಂತಿದ್ದಾರೆ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅಂತ ಎಲ್ಲರಿಗೂ ಅನ್ನಿಸುತ್ತಿದೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತಾಗಿದೆ. ಕಾಂಗ್ರೆಸ್ ಹೈಕಮಾಂಡ್ ಹಣದ ತುಲಾಭಾರ ಹಾಕಲು ಮುಂದಾಗಿದೆ. ಯಾರು ಜಾಸ್ತಿ ಕೊಡುತ್ತಾರೆ, ಎಷ್ಟು ಬಾರಿ ದೆಹಲಿಗೆ ಬರುತ್ತಾರೆ ಅವರಿಗೆ ಸಿಎಂ ಸ್ಥಾನ ಕೊಡಲು ಪ್ರಯತ್ನ ನಡೆಯುತ್ತಿದೆ. ಸಿದ್ದರಾಮಯ್ಯ ದಲಿತರನ್ನು ಸಿಎಂ ಮಾಡಬೇಕು ಅಂತ ಪರಮೇಶ್ವರ್ ಹೆಸರೇಳಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗಬಾರದು ಅಂತ ಪ್ರಯತ್ನ ನಡೆಯುತ್ತಿದೆ. ದೆಹಲಿಯಿಂದ ಬಂದ ಬಳಿಕ ಡಿನ್ನರ್ ಪಾರ್ಟಿ ಮಾಡುವುದು, ಮೀಟಿಂಗ್ ಮಾಡುವುದು ಇಷ್ಟೇ ಆಗಿದೆ. ರಾಜ್ಯದಲ್ಲಿ ಜನ ಸತ್ತಿದ್ದಾರಾ ಬದುಕಿದ್ದಾರಾ ಅಂತಾ ನೋಡುತ್ತಿಲ್ಲ. ಬರಗಾಲ ಬಂದಿದೆ ಜನ, ಜಾನುವಾರುಗಳಿಗೆ ನೀರು, ಮೇವಿನ ಬಗ್ಗೆ ಆಲೋಚನೆಯೇ ಇಲ್ಲ‌ ಎಂದಿದ್ದಾರೆ.

ಮೇ 9 ರಂದು ಚಿತ್ರದುರ್ಗದಲ್ಲಿ  ಯಡಿಯೂರಪ್ಪ ಅಭಿಮಾನೋತ್ಸವ ವಿಚಾರದ ಬಗ್ಗೆ ಮಾತನಾಡಿದ ಅವರು ಯಡಿಯೂರಪ್ಪ ಅಭಿಮಾನೋತ್ಸವಕ್ಕೆ 10 ಲಕ್ಷ ಜನ ಸೇರುತ್ತಾರೆ. ನಾಯಕನಿಗೆ ಸನ್ಮಾನ ಮಾಡುವ ತೀರ್ಮಾನವನ್ನು ನಾವೆಲ್ಲಾ ತೆಗೆದುಕೊಂಡಿದ್ದೇವೆ. ಯಡಿಯೂರಪ್ಪ ಅವರನ್ನು ಬಲವಂತವಾಗಿ ಒಪ್ಪಿಸಿದ್ದೇವೆ. ಬಿಎಸ್ವೈ ದಣಿವರಿಯದ ದೊಡ್ಡ ನಾಯಕ. ಅವರು ನಾಲ್ಕು ಬಾರಿ ಸಿಎಂ ಆದಾಗಲೂ ನಾನು 4 ಬಾರಿ ಮಂತ್ರಿಯಾಗಿದ್ದೆ. ಎಲ್ಲವನ್ನೂ ಮಾಡಿದಂತಹ ಧೀಮಂತ ನಾಯಕ ಯಡಿಯೂರಪ್ಪ. ಪಕ್ಷದ ವಿಚಾರ ಬಂದಾಗ ಯಡಿಯೂರಪ್ಪ ಅವರ ಜೊತೆ ಅನಂತ್ ಕುಮಾರ್, ವಿ.ಎಸ್, ಆಚಾರ್ಯ, ಶಂಕರಮೂರ್ತಿ ಮತ್ತು ಬಿ.ಬಿ. ಶಿವಪ್ಪ ಅವರನ್ನೂ ನೆನಪು ಮಾಡಿಕೊಳ್ಳಬೇಕು. ಇವರೆಲ್ಲಾ ಸೇರಿ ಬಿಜೆಪಿ ಈ ಮಟ್ಟಕ್ಕೆ ಬರಲು ಕಾರಣಕರ್ತರು. ನನಗೆ ಈ ಕಾರ್ಯಕ್ರಮ ಮಾಡುವುದು ವೈಯಕ್ತಿಕವಾಗಿ ಬಹಳ ಸಂತೋಷವಾಗಿದೆ.ರಾಷ್ಟ್ರೀಯ ನಾಯಕರಾದ ಅಮಿತ್ ಶಾ ಕೂಡಾ ಬರುತ್ತಿದ್ದಾರೆ.ಎಲ್ಲರೂ ಸೇರಿ ಯಡಿಯೂರಪ್ಪ ಅವರನ್ನು ಸನ್ಮಾನಿಸುವ ಕೆಲಸ ಆಗುತ್ತದೆ ಎಂದು ತಿಳಿಸಿದ್ದಾರೆ.

ಒಳ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಸರ್ಕಾರ ಬಹಳ ದೊಡ್ಡ ಮೋಸ ಮಾಡಿದೆ. ನಮ್ಮ ಸರ್ಕಾರದಲ್ಲಿ ಸಮಿತಿ ವರದಿ ಪಡೆದು ಎಸ್ ಟಿ ಜನಾಂಗಕ್ಕೆ ಎಷ್ಟು ಮೀಸಲಾತಿ ನೀಡಬೇಕು ಅಂತ ಆಗಿತ್ತು.ಆಗ ನಾನೇ ಮಂತ್ರಿ ಇದ್ದೆ, ಮಾಧುಸ್ವಾಮಿ ಸಂಪುಟ ಉಪಸಮಿತಿ ಅಧ್ಯಕ್ಷರಾಗಿದ್ದರು. ಎಸ್ ಸಿ ಸಮುದಾಯಕ್ಕೆ 15 ರಿಂದ 17% ಗೆ ಹಾಗೂ ಎಸ್ ಟಿ ಸಮುದಾಯಕ್ಕೆ 4ರಿಂದ 7% ಗೆ ಮೀಸಲಾತಿ ಹೆಚ್ಚಳ ಮಾಡಿದ್ದೆವು. ನಿಮಗೇನು ದಾಡಿ? ಮೀಸಲಾತಿ ಯಾಕೆ ಕಡಿಮೆ ಮಾಡಿದ್ರಿ?. ಯಡಿಯೂರಪ್ಪ, ಬೊಮ್ಮಾಯಿ, ಶ್ರೀರಾಮುಲು ಮಾಡಿದರು ಅಂತ ಕಡಿಮೆ ಮಾಡಿದ್ರಿ. ಕೋರ್ಟ್ ಗೆ ಹೋದಾಗ ಸರಿಯಾಗಿ ವಾದ ಮಾಡಲಿಲ್ಲ. ನೀಟ್ ಪರೀಕ್ಷೆಯಲ್ಲಿ ಮೀಸಲಾತಿ ಅನ್ಯಾಯ ಆಗಲಿದೆ. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಅನ್ಯಾಯ ಆಗಲಿದೆ. ಮಕ್ಕಳ ಭವಿಷ್ಯ ಏನಾಗಬೇಕು?. ವಕೀಲರು ಕೋರ್ಟಿಗೆ ಹೋಗದೇ ಐದನೇ ಬಾರಿ ಹೋಗಿ ಯಥಾಸ್ಥಿತಿ ಕೊಡಿ ಅಂತ ಕೇಳುತ್ತಾರೆ. ಈಗ 15%, 4% ಮೀಸಲಾತಿಗೆ ಬಂದಿದೆ. 50% ಮೀಸಲಾತಿಗೆ ಸರಿ ಮಾಡಿದ್ದೇವೆ ಅಂತಿದ್ದಾರೆ.ಯಾವ ರೀತಿ ಹೇಳುತ್ತಿದ್ದೀರಿ ನೀವು?. ಉಗ್ರಪ್ಪ ನಾವು ಮಾಡಿದ್ದು ಸರಿ, ಬಿಜೆಪಿ ರಾಜಕೀಯ ಮಾಡಿತು ಅಂತಾರೆ. ಕಾಂಗ್ರೆಸ್ ಮಾಡಿದ್ದು ತಪ್ಪು ಅಂತ ಸರ್ಕಾರ ಒಪ್ಪಿಕೊಳ್ಳಬೇಕು. ಮೀಸಲಾತಿ ಪ್ರಮಾಣ ಹೆಚ್ಚಳ‌ ಮಾಡಬೇಕು. ಎಸ್ ಸಿ, ಎಸ್ ಟಿ ಸಮುದಾಯ ನಿಮ್ಮನ್ನು ಯಾವತ್ತೂ ಕ್ಷಮಿಸಲ್ಲ ಎಂದು ತಿಳಿಸಿದ್ದಾರೆ.