ಮನೆ Latest News ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ವಿಚಾರ; ಇದೊಂದು ದುರದೃಷ್ಟಕರ ಘಟನೆ ಎಂದ ಉನ್ನತ ಶಿಕ್ಷಣದ...

ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ವಿಚಾರ; ಇದೊಂದು ದುರದೃಷ್ಟಕರ ಘಟನೆ ಎಂದ ಉನ್ನತ ಶಿಕ್ಷಣದ ಶಿಕ್ಷಣ ಸಚಿವ ಎಂ.ಸಿ ಸುಧಾಕರ್

0

ಬೆಂಗಳೂರು: ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಉನ್ನತ ಶಿಕ್ಷಣದ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಪ್ರತಿಕ್ರಿಯಿಸಿದ್ದು ಇದೊಂದು ದುರದೃಷ್ಟಕರ ಘಟನೆ  ಎಂದಿದ್ದಾರೆ.

ಘಟನೆ ಬಗ್ಗೆ  ಬೆಳಗ್ಗೆ ಮಾಹಿತಿ ಸಿಕ್ಕಿದೆ. ಇದೊಂದು ದುರದೃಷ್ಟಕರ ಘಟನೆ. ಸರಕಾರ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದೆ. ಪರೀಕ್ಷಾರ್ಥಿಗೆ ಮಾನದಂಡಗಳನ್ನು ಮಾಡಿದ್ದೇವೆ. ಸಿಬ್ಬಂದಿಗೆ  ತರಬೇತಿ ಕೊಡಬೇಕು ಎಂದು ಸೂಚಿಸಿದ್ದೇವೆ. ಜನಿವಾರ ತೆಗೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ರೀತಿ ಆಗಬಾರದು ಎಂದು ಡಿಸಿ,ಸಿಇಒ ಗಳಿಗೆ ಸ್ಪಷ್ಟ ಸೂಚನೆ ಕೊಟ್ಟಿದ್ದೇವೆ. ಶಿಕ್ಷಣ ಸಂಸ್ಥೆ ಮೇಲೆ ದೂರು ದಾಖಲಿಸುವಂತೆ ಸೂಚನೆ  ಕೊಟ್ಟಿದ್ದೇವೆ. ಜನಿವಾರ ತೆಗೆಸಿದವರ ಸಿಬ್ಬಂದಿಗಳ ಕ್ರಮ ತೆಗೆದುಕೊಂಡಿದ್ದೇವೆ ಎಂದಿದ್ದಾರೆ ಎಂದು ತಿಳಿಸಿದ್ದಾರೆ.

ವಿಕೃತ ಮನಸ್ಥಿತಿಯವರು ಈ ರೀತಿ ಮಾಡಿದ್ದಾರೆ ಎನ್ನಿಸುತ್ತದೆ. ಯಾರಾದ್ರೂ ಹಿಂದೆ ಇದ್ದು ಸರಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂದು ಮಾಡಿದ್ದಾರೋ ಏನೋ.. ಕಳೆದ ವರ್ಷವೂ ಆಗಿತ್ತು, ಇದರಿಂದ ನನಗೆ ತುಂಬಾ ನೋವಾಗಿದೆ. ಕಾನೂನಿನಡಿಯಡಿಯಲ್ಲಿ ಕಠಿಣ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇವೆ. ಪೋಷಕರ ಜೊತೆ ಇನ್ನು ಮಾತನಾಡಿಲ್ಲ. ಪೊಷಕರಿಗೆ ಸಿಬ್ಬಂದಿ  ಕ್ಷಮಾಪಣೆ ಕೇಳಿದ್ದಾರೆ ಎಂದಿದ್ದಾರೆ.