ಮನೆ Latest News ಸಿದ್ದರಾಮಯ್ಯ ಸರ್ಕಾರ ಹಿಂದೂಗಳ ಧಾರ್ಮಿಕ ಬಾವನೆ ಜೊತೆ ಆಟವಾಡ್ತಿದೆ; ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ.

ಸಿದ್ದರಾಮಯ್ಯ ಸರ್ಕಾರ ಹಿಂದೂಗಳ ಧಾರ್ಮಿಕ ಬಾವನೆ ಜೊತೆ ಆಟವಾಡ್ತಿದೆ; ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ.

0

ಬೆಂಗಳೂರು; ಸಿದ್ದರಾಮಯ್ಯ ಸರ್ಕಾರ ಹಿಂದೂಗಳ ಧಾರ್ಮಿಕ ಬಾವನೆ ಜೊತೆ ಆಟವಾಡ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಸಿಇಟಿ ಪರೀಕ್ಷೆಯ ವೇಳೆ ಜನಿವಾರ ತೆಗೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ವಿದ್ಯಾರ್ಥಿ ಮತ್ತು ಪೋಷಕರು ನಮ್ಮ ಕ್ಷೇತ್ರದವರು. ಸಿಇಟಿ ಪರೀಕ್ಷೆಯಲ್ಲಿ ಬೇಕಂತ ಜನಿವಾರ ತೆಗೆದಿದ್ದಾರೆ. ಜನಿವಾರ ತೆಗೆಯಲ್ಲ ಅಂತ ಹೇಳಿದ್ರೂ ಬಿಟ್ಟಲ್ಲ. ಇದು ನಮ್ಮ ಧಾರ್ಮಿಕ ಭಾವನೆ ಅಂತ‌ ಹೇಳಿದ್ರು ಬಿಡಲ್ಲ. ಸಿದ್ದರಾಮಯ್ಯ ಸರ್ಕಾರ ಹಿಂದೂಗಳ ಧಾರ್ಮಿಕ ಭಾವನೆ ಜೊತೆ ಆಟವಾಡ್ತಿದೆ. ಇಂದು ಜನಿವಾರದ ಜೊತೆ ಆಟವಾಡ್ತಿದ್ದಾರೆ, ನಾಳೆ ಲಿಂಗಾಯತರ ದಾರದ ಮೇಲೆ ಆಟವಾಡ್ತಾರೆ, ನಂತರ ಒಕ್ಕಲಿಗರ ಉಡುದಾರದ ಮೇಲೆ ಬರ್ತಾರೆ. ತಾಳಿ, ಕಾಲುಂಗುರ ಕೂಡ ಬಿಡಲ್ಲ. ಮೂಗುತಿಗೆ ಪ್ಲಾಸ್ಟರ್ ಹಾಕ್ತಾರೆ. ನಿಮಗೆ ನಾಚಿಕೆ ಆಗಲ್ವಾ.?ಎಂದು ವಾಗ್ದಾಳಿ ನಡೆಸಿದ್ದಾರೆ.

ಪೊಲೀಸರು ನೀವಾದ್ರೂ ಸೂಕ್ತ ತನಿಖೆ ನಡೆಸಿ, ಅವರನ್ನ ಬಂಧಿಸಿ. ಮಕ್ಕಳಿಗೆ ಹೀಗೆ ಮಾಡಿದ್ದಕ್ಕೆ ಪರೀಕ್ಷೆ ಬರೆಯೋದರ ಮೇಲೆ ಪರಿಣಾಮ ಬೀರಿದೆ. ಜನಿವಾರ, ಶಿವದಾರ, ಉಡುದಾರ ಹಾಕಿದವರನ್ನೇ ಯಾಕೆ ಟಾರ್ಗೆಟ್ ಮಾಡ್ತೀರಾ.?. ನಾವು ಚೆಕ್ ಮಾಡ್ತಿದ್ದೀವಿ ಅಂತ ನಿನ್ನೆಯಿಂದ ಹೇಳ್ತಿದ್ದಾರೆ. ಈಗ ಕಚೇರಿಗೆ ಬರ್ತೀನಿ ಅಂತ ಗೊತ್ತಾದ ಬಳಿಕ ತರಾತುರಿಯಲ್ಲಿ ಎದ್ದಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.