ಮನೆ Latest News ರೈತ ವಿರೋಧಿ ಕಾನೂನು ವಾಪಾಸ್ ಪಡೆಯುವವರೆಗೂ ನಡೆಸಿದ ಹೋರಾಟದಂತೆ ಈ ಹೋರಾಟ ಮಾಡ್ತೀವಿ : ವಿಧಾನಸೌಧದಲ್ಲಿ...

ರೈತ ವಿರೋಧಿ ಕಾನೂನು ವಾಪಾಸ್ ಪಡೆಯುವವರೆಗೂ ನಡೆಸಿದ ಹೋರಾಟದಂತೆ ಈ ಹೋರಾಟ ಮಾಡ್ತೀವಿ : ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು; ರೈತ ವಿರೋಧಿ ಕಾನೂನು ವಾಪಾಸ್ ಪಡೆಯುವವರೆಗೂ ನಡೆಸಿದ ಹೋರಾಟದಂತೆ ಈ ಹೋರಾಟ ಮಾಡ್ತೀವಿ ಎಂದು : ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇವತ್ತು ವಿಶೇಷ ಅಧಿವೇಶನ, ಜಂಟಿ ಅಧಿವೇಶನ. ವಿಬಿ ಜಿ ರಾಮ್‌ ಜೀ ಕಾಯ್ದೆಗೆ ನಮ್ಮ ಸರ್ಕಾರದ ತೀವ್ರ ವಿರೋಧ ಇದೆ. ಗಾಂಧೀಜಿ ಹೆಸರು ತೆಗೆದು ಹಾಕಿರೋದು. 20 ವರ್ಷಗಳ ಹಿಂದೆ ಉದ್ಯೋಗ ಖಾತ್ರಿಗಾಗಿ ಯೋಜನೆ ತಂದ ಬಗ್ಗೆ ಚರ್ಚೆಗಾಗಿ ಅಧಿವೇಶನ ಎಂದಿದ್ದಾರೆ.

365 ದಿನದಲ್ಲಿ ಯಾವಾಗ ಬೇಕಾದ್ರು ಕೆಲಸ ಕೊಡಬಹುದಿತ್ತು. ಪಂಚಾಯ್ತಿಗಳಲ್ಲೇ ಕ್ರಿಯಾ ಯೋಜನೆ ತಯಾರಿಸಬಹುದಿತ್ತು. ಆದರೆ ಇವರು ನಿಗಧಿತ ಸಮಯದಲ್ಲಿ ಉದ್ಯೋಗ ಪಡೆಯುವಂತೆ ಮಾಡಿದ್ದಾರೆ.ವಿಪಕ್ಷಗಳು ಉದ್ದೇಶಪೂರ್ವಕವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮನ್‌ರೇಗಾ ಮರುಸ್ಥಾಪನೆ‌ ಮಾಡಬೇಕು.ವಿಬಿ ಜಿ ರಾಮ್‌ಜೀ ರದ್ದು ಮಾಡುವವರೆಗೂ ನಿರಂತರ ಹೋರಾಟ ಮಾಡ್ತೀವಿ.ರೈತ ವಿರೋಧಿ ಕಾನೂನು ವಾಪಾಸ್ ಪಡೆಯುವವರೆಗೂ ನಡೆಸಿದ ಹೋರಾಟದಂತೆ ಈ ಹೋರಾಟ ಮಾಡ್ತೀವಿ. ಸಂವಿಧಾನದ ನಿಯಮಗಳನ್ನ ರಾಜ್ಯಪಾಲರು ಉಲ್ಲಂಘಿಸಿದ್ದಾರೆ. ಇದು ಸಂವಿಧಾನದ ಉಲ್ಲಂಘನೆ ಆಗಿದೆ. ಜನಪ್ರತಿನಿಧಿಗಳ ಸಭೆಗೆ ಅವಮಾನ ಆಗಿದೆ ಎಂದು ಆರೋಪಿಸಿದ್ದಾರೆ.

ಸಂವಿಧಾನ ಉಲ್ಲಂಘನೆ ವಿರುದ್ದ ನಮ್ಮ ಪಕ್ಷ, ಸರ್ಕಾರ ಪ್ರತಿಭಟಿಸುತ್ತೆ.ಇಡೀ ರಾಜ್ಯದಲ್ಲಿ ಹೋರಾಟ ಮಾಡ್ತೀನಿ.ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಬೇರೆ ಭಾಷಣ ಓದಿಸಿದ್ದಾರೆ. ನಾವು ತಯಾರಿಸಿದ ಭಾಷಣವನ್ನ ಎಲ್ಲಾ ಶಾಸಕರು ಎಂಎಲ್‌ಸಿಗಳಿಗೆ ತಲುಪಿಸಿದ್ದೇವೆ ಎಂದಿದ್ದಾರೆ.