ಮನೆ ಪ್ರಸ್ತುತ ವಿದ್ಯಮಾನ ಕರಾಳ ರೀತಿಯಲ್ಲಿ ಈ ಅಧಿವೇಶನವನ್ನ ಕಾಂಗ್ರೆಸ್ ನಡೆಸಿದೆ: ವಿಧಾನಸೌಧದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ

ಕರಾಳ ರೀತಿಯಲ್ಲಿ ಈ ಅಧಿವೇಶನವನ್ನ ಕಾಂಗ್ರೆಸ್ ನಡೆಸಿದೆ: ವಿಧಾನಸೌಧದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ

0

ಬೆಂಗಳೂರು; ಕರಾಳ ರೀತಿಯಲ್ಲಿ ಈ ಅಧಿವೇಶನವನ್ನ ಕಾಂಗ್ರೆಸ್ ನಡೆಸಿದೆ ಎಂದು ವಿಧಾನಸೌಧದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಕರಾಳ ರೀತಿಯಲ್ಲಿ ಈ ಅಧಿವೇಶನವನ್ನ ಕಾಂಗ್ರೆಸ್ ನಡೆಸಿದೆ. ರಾಜ್ಯಪಾಲರು ಸಂವಿಧಾನದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಧನ್ಯವಾದ ಹೇಳಿ ಹೊರಟಿದ್ದಾರೆ. ಹಂಸರಾಜ್ ಭಾರಧ್ವಾಜ್ ಇದ್ದಾಗಲೂ ಘೋಷಣೆ ಮಾಡಿ ಹೊರಟು ಹೋದ್ರು. ಇದರಲ್ಲಿ ತಪ್ಪೇನಾಗಿದೆ? ಆ ಚೇರಲ್ಲಿ ಕುಳಿತು ಭಾಷಣ ಪ್ಲೇ ಮಾಡಿ ಹೋಗುವ  ಅಧಿಕಾರ ಇದೆ. ಕಾಂಗ್ರೆಸ್ ನವರು ಅಗೌರವ ತೋರಿದ್ದಾರೆ. ಹೆಚ್.ಕೆ ಪಾಟೀಲರೇ ಅಡ್ಡಿಪಡಿಸಿದ್ದಾರೆ ಎಂದಿದ್ದಾರೆ.

ವಿಘ್ನ, ಅಡ್ಡಿಯುಂಟು ಮಾಡುವಂತಿಲ್ಲ. ಅಡ್ಡಿ ಪಡಿಸಿದವರ ಮೇಲೆ ಕ್ರಮ ಆಗ್ಬೇಕು. ಅಡ್ಡಿಪಡಿಸಿದವರನ್ನ ಸದನದಿಂದ ಹೊರ ಹಾಕ್ಬೇಕು. ವಿಧಾನಸಭೆಯ ಸ್ಪೀಕರ್ ಈ ಕ್ರಮ ವಹಿಸಬೇಕು.ಇವರ ಬಿಲ್ ಗಳಿಗೆಲ್ಲ ರಾಜ್ಯಪಾಲರು ಸಹಿ ಹಾಕಿ ಕಳಿಸಿದ್ದಾರೆ, ಆಗ ಇವ್ರಿಗೆ ಸರಿ ಇತ್ತಾ?. ಲೋಕಭವನವನ್ನ ಕಾಂಗ್ರೆಸ್ ಭವನ ಮಾಡಲು ಹೊರಟಿದ್ದಾರೆ. ಸಂವಿಧಾನದ ವಿರೋಧಿ ನಡೆ. ರಾಹುಲ್, ಸೋನಿಯಾ ಮೆಚ್ಚಿಸುವ ಕುತಂತ್ರ ಇದು. ಸಂವಿಧಾನಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ.ಅಂಬೇಡ್ಕರ್ ನ ಈ ಹಿಂದೆ ಸೋಲಿಸಿದ್ದೇ ಅವ್ರು. ಸದನದಲ್ಲಿ ಅಗೌರವ ತೋರಿಸಿದ ಶಾಸಕರ ವಿರುದ್ಧ ಕ್ರಮ ಆಗ್ಬೇಕು. ಸ್ಪೀಕರ್ ಗೆ ಈಗ ಪತ್ರ ಕೊಡುತ್ತಿದ್ದೇನೆ ಎಂದಿದ್ದಾರೆ.