ಮನೆ Latest News ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ಹೆಚ್ ಎಂ ರೇವಣ್ಣ

ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ಹೆಚ್ ಎಂ ರೇವಣ್ಣ

0

ಬೆಂಗಳೂರು; ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹೆಚ್ ಎಂ ರೇವಣ್ಣ ಸದಾಶಿವ ನಗರದ ಡಿಕೆಶಿ ನಿವಾಸದಲ್ಲಿ ಭೇಟಿಯಾದ್ರು,

ಡಿಕೆ ಶಿವಕುಮಾರ್ ಬಳ್ಳಾರಿ ಬ್ಯಾನರ್ ಗಲಾಟೆ ಕುರಿತು ಸತ್ಯ ಶೋಧನ ಸಮಿತಿ ರಚಿಸಿದ್ದರು. ಪಕ್ಷದ ವತಿಯಿಂದ ಸತ್ಯ ಶೋಧನ ಸಮಿತಿ ರಚಿಸಲಾಗಿತ್ತು. ಹೆಚ್ ಎಂ ರೇವಣ್ಣ ನೇತೃತ್ವದಲ್ಲಿ ಸಮಿತಿ ಮಾಡಲಾಗಿತ್ತು. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸಂಗ್ರಹಿಸಿದ ಮಾಹಿತಿ ನೀಡಲು ರೇವಣ್ಣ ಬಂದಿದ್ದರು.ಇನ್ನೂ ಸತ್ಯ ಶೋಧನ ವರದಿ ಸಿದ್ದವಾಗಿಲ್ಲ, ಕೇವಲ ಮಾಹಿತಿ ನೀಡಲು ಬಂದಿದ್ದೇನೆ ಎಂದಷ್ಟೇ ಹೇಳಿ ರೇವಣ್ಣ ಒಳಹೋಗಿದ್ದಾರೆ.

ಬಳಿಕ ಮಾತನಾಡಿದ ಅವರು ಬಳ್ಳಾರಿಯಲ್ಲಿ ಆಗಿರೋ ಅಹಿತಕರ ಘಟನೆ ವಾಸ್ತವಾಂಶ , ಸತ್ಯತೆ ತಿಳಿಯಲು ಸಮಿಯಿ ರಚನೆ ಮಾಡಲಾಗಿದೆ.ನಾನು, ಜಯಪ್ರಕಾಶ್ ಹೆಗಡೆ, ಕುಮಾರ್ ನಾಯ್ಕ್ ಸೇರಿ ಆರು ಜನ ತಂಡ ಸಮಿತಿ ಆಗಿತ್ತು. ಹೋಗಿ ಭೇಟಿ ನೀಡಿದ್ವಿ, ಸಂಜೆಯವರೆಗೂ ಎಲ್ಲರಿಗೂ ಮಾತಾಡಿದ್ವಿ. ನೇರವಾಗಿ ಹೋಗಿ ಅಲ್ಲಿ ಸ್ಥಳ ಪರಿಶೀಲನೆ ಮಾಡಿದ್ವಿ, ಅಲ್ಲಿ ನೋಡಿದವರನ್ನ ಮಾತನಾಡಿಸಿದ್ದೇನೆ. ವರದಿ ಸಲ್ಲಿಕೆ ಮಾಡಬೇಕು. ಭರತ್ ರೆಡ್ಡಿ ಅವರ ತಂಡ ಉತ್ತಮ ಕೆಲಸ ಮಾಡಿದೆ. ಬ್ಯಾನರ್ ಕುರಿತು ಗಲಾಟೆ ಆಗಿದೆ. ಆದ್ರೆ ಅದರಿಂದ ಗಲಾಟೆ ಆಗಿದೆ, ಇದರಿಂದ ರಾಜಶೇಖರ್ ಪ್ರಾಣ ಹೋಗಿದೆ.ಮೂರು ದಿನದಲ್ಲಿ ವರದಿ ನೀಡುತ್ತೇವೆ ಎಂದರು.

ಮೂರು ದಿನದಲ್ಲಿ ವರದಿ ಸಲ್ಲಿಕೆ ಮಾಡುತ್ತೇವೆ ಎಂದ ಅವರು ಯಾರ ತಪ್ಪು ಎಂಬ ವಿಚಾರದ ಬಗ್ಗೆ ಮಾತನಾಡಿ ರೆಡ್ಡಿ ಅವರ ಮನೆಗೆ ಹೋಗಿಲ್ಲ. ಜನ ಸೇರಿಕೊಂಡು ಹೋಗಿಲ್ಲ. ದೊಣ್ಣೆ , ಖಾರದ ಪುಡಿ ಎರಚಿರೋದು ಅವರು , ಇದನ್ನ ನಾವು ಖಂಡಿಸುತ್ತೇವೆ. ಫೈರ್ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮೊದಲು ಎಫ್ ಎಸ್ ಎಲ್ ರಿಪೋರ್ಟ್ ಬರಬೇಕು. ವರದಿ ಬಂದ್ಮೇಲೆ ಯಾರು ಮಾಡಿದ್ದು ಅನ್ನೋದು ಗೊತ್ತಾಗುತ್ತದೆ. ಎಲ್ಲರನ್ನ ಮಾತಾಡಿದ್ದೇವೆ, ಸ್ಥಳದಲ್ಲಿ ಪ್ರತ್ಯಕ್ಷ ದರ್ಶಿ ಮಾತಾಡಿದ್ದೇವೆ ಎಂದಿದ್ದಾರೆ.

ಮೂರು ಜನರ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಅಲ್ಲಿನ ರಿಪೋರ್ಟ್ ನಮಗೆ ಬರಲಿ. ಡಿಸಿ,ಹಿರಿಯ ಅಧಿಕಾರಿಗಳನ್ನ ಮಾತಾಡಿದ್ದೀವಿ. ನಾವು ರಿಪೋರ್ಟ್ ತೆಗೆದುಕೊಂಡಿದ್ದೇವೆ, ಸಲ್ಲಿಕೆ ಮಾಡುತ್ತೇವೆ. ಜನಾರ್ದನ ರೆಡ್ಡಿ ಯಾವ ರೀತಿ ಮಾಡಿದ್ದಾರೆ ಅನ್ನೋದು ಗೊತ್ತು. ರಿಪಬ್ಲಿಕ್ ಆಫ್ ಬಳ್ಳಾರಿ ಆಗಿರೋ ಜಾಗ.ಅವರ ಜನಾಭಿಪ್ರಾಯ ಕಡಿಮೆಯಾಗುತ್ತಲೇ ಈ ರೀತಿ ಆಗಿದೆ. ಅವರ ಜೊತೆಗ ಇರುವವರು ನಮ್ಮ ಕಡೆ ಸೇರಿದ್ದಾರೆ, ಹೀಗಾಗಿ ಇದನ್ನೆಲ್ಲಾ ಮಾಡಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅಂತ ವರದಿ ಬರಲಿದೆ ಎಂದರು.