ಮನೆ Latest News ಬಳ್ಳಾರಿಯಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ವಿಚಾರ: ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಬಳ್ಳಾರಿಯಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ವಿಚಾರ: ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

0

ಬಳ್ಳಾರಿಯಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ವಿಚಾರದ ಬಗ್ಗೆ ಮಾತನಾಡಿದ ಅವರು ನಾಳೆ ಸಂಜೆ ಉದ್ಘಾಟನೆಗೆ ಹೋಗಬೇಕಿತ್ತು. ನಿನ್ನೆ ಗಲಾಟೆ ಆಗಿದೆ, ಆಗಬಾರದಿತ್ತು. ಪೋಸ್ಟರ್ ಮನೆ ಮುಂದೆ ಕಟ್ಟಿದ್ದಕ್ಕೆ ಗಲಾಟೆಯಾಗಿದೆ. ಪೊಲೀಸರು ಏನು ಮಾಡ್ತಾರೋ ನೋಡೋಣ. ಉದ್ದೇಶಪೂರ್ವಕನಾ ಅಂತ ಗೊತ್ತಿಲ್ಲ. ಸತ್ಯಾಂಶ ಗೊತ್ತಾಗಬೇಕು ಅಂದ್ರೆ ತನಿಖೆ ಆಗಬೇಕು. ಪೊಲೀಸ್ ತನಿಖೆ ಆಗಲಿ, ನಿಜಾಂಶ ಗೊತ್ತಾಗುತ್ತದೆ. ಯಾರು, ಏನಕ್ಕೆ ಮಾಡಿದ್ರು ಅಂತ ತನಿಖೆಯಿಂದ ಹೊರಬರಬೇಕು ಎಂದು ಅವರು ಹೇಳಿದ್ದಾರೆ.

ನಮ್ಮ ಅವಧಿಯಲ್ಲಿ ಆಗಬಾರದು ನಿಮ್ಮ‌ಅವಧಿಯಲ್ಲಿ ಆಗಬಾರದು ಅಂತ ಇದ್ರು. ಸಣ್ಣ ವಿಚಾರಕ್ಕಾಗಿ ಗಲಾಟೆ ಆಗಿದೆ. ಭರತ್ ರೆಡ್ಡಿ ಜೊತೆ ಮಾತನಾಡ್ತೀನಿ. ನಾಳೆ ಕಾರ್ಯಕ್ರಮ ಇದ್ರೆ ಹೋಗ್ತೀನಿ, ಇಲ್ಲಾಂದ್ರೆ ಹೋಗಲ್ಲ. ಗಣೇಶ್, ಭರತ್ ರೆಡ್ಡಿ ಕಷ್ಟಪಟ್ಟು ಪ್ರತಿಮೆ ಮಾಡಿದ್ದಾರೆ. ಪೋಸ್ಟರ್ ಹಾಗೂ ಕಾರ್ಯಕ್ರಮ ಮುಂದಕ್ಕೆ ಹಾಕಬೇಕು ಅಂತ ಗಲಾಟೆ ಇರಬಹುದು. ಯಾವ ವಿಚಾರಕ್ಕೆ ಅಂತ ಮುಂದೆ ತನಿಖೆಯಲ್ಲಿ ಗೊತ್ತಾಗಬೇಕು ಎಂದ ಅವರು ಸರ್ಕಾರಕ್ಕೆ 1000 ದಿನ ತುಂಬಿದ ವಿಚಾರದ ಬಗ್ಗೆ ಮಾತನಾಡಿದ ಅವರು ಸಮಾವೇಶ ಮಾಡಬಹುದು, ರಾಜಕೀಯ ಇರೋದೇ ಶಕ್ತಿ ಪ್ರದರ್ಶನಕ್ಕಾಗಿ. ರಾಜಕೀಯದಲ್ಲಿ 365 ದಿನವೂ ಬದಲಾವಣೆಯೇ. ನಾವು ಯಾವುದರ ಮೇಲೆಯೂ ಆಸೆ, ನಿರೀಕ್ಷೆ ಇಟ್ಟಿಲ್ಲ ಎಂದಿದ್ದಾರೆ.

ಬಜೆಟ್ ಪೂರ್ವಭಾವಿ ಸಭೆ ವಿಳಂಬ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಬಜೆಟ್ ಮಾರ್ಚ್ ತಿಂಗಳಲ್ಲಿ ಆಗುತ್ತೆ. ಫೆಬ್ರವರಿ ನಲ್ಲಿ ತಯಾರಿ ನಡೆಯುತ್ತೆ ಎಂದ ಅವರು ದಲಿತ ಸಿಎಂ ಬಗ್ಗೆ ಪರಮೇಶ್ವರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಪರಮೇಶ್ವರ ಸಹ ಸೀನಿಯರ್. ಅವದು ದಲಿತ ನಾಯಕರು.ನಾನೂ ಆಗಬಹುದು ಅಂತ ಅವ್ರು ಹೇಳಿದ್ದಾರೆ.ನಾಯಕತ್ವ ಬದಲಾವಣೆ ವಿಚಾರ ಸ್ಥಳೀಯ ಚುನಾವಣೆಗೆ ಪ್ರಭಾವ ಬೀರಲ್ಲ.ಈಗಲೇ ಏನೂ ಹೇಳೋಕೆ ಆಗಲ್ಲ, ಆದ್ಮೇಲೆ ಹೇಳಬಹುದು ಅಲ್ವಾ. ಗೊಂದಲ ಬಗೆಹರಿಸಬೇಕು, ಹೇಳಿದ್ದೇವೆ. ಬೆಂಗಳೂರಿನ ಸಭೆ ದೆಹಲಿಯಲ್ಲೇ ಆಯ್ತು. 2 ಸಭೆಗಳು ಅಲ್ಲೇ ಆಯ್ತು, ಅದಕ್ಕೇ ಸುರ್ಜೇವಾಲ ಬಂದಿಲ್ಲ ಎಂದು ಹೇಳಿದ್ದಾರೆ.

ಕೋಗಿಲು ಲೇಔಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಸಂಬಂಧಪಟ್ಟ ಇಲಾಖೆ ಮಂತ್ರಿಗಳಿದ್ದಾರೆ. ಸಿಎಂ ಉತ್ತರ ಕೊಡ್ತಾರೆ, ಯಾರಿಗೆ ಕೊಡಬೇಕು ಅಂತ ಚರ್ಚೆ ಆಗುತ್ತೆ. ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ. ಕೆ.ಸಿ ವೇಣುಗೋಪಾಲ್ ಎಂಟ್ರಿ ಬಗ್ಗೆ ಬಿಜೆಪಿ ಟೀಕೆ ವಿಚಾರದ ಬಗ್ಗೆ ಮಾತನಾಡಿ ಸುಮ್ಮನೇ ಮನೆ ಕೊಡೋಕೆ ಆಗಲ್ಲ. ಎಲ್ಲವನ್ನೂ ಪರಿಶೀಲಿಸಿ‌ ಕೊಡಬೇಕು.ಅರ್ಹತೆ ಇದ್ದರೆ ಕೊಡಬೇಕಾಗುತ್ತೆ, ಇಲ್ಲಾ ಅಂದ್ರೆ ಇಲ್ಲ ಎಂದು ತಿಳಿಸಿದ್ದಾರೆ.