ಮನೆ Latest News ಜನವರಿ 24 ರಂದು ಹಾಸನದಲ್ಲಿ ಜೆಡಿಎಸ್ ಸಮಾವೇಶ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿಕೆ

ಜನವರಿ 24 ರಂದು ಹಾಸನದಲ್ಲಿ ಜೆಡಿಎಸ್ ಸಮಾವೇಶ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿಕೆ

0

ಬೆಂಗಳೂರು: ಜನವರಿ 24 ರಂದು ಹಾಸನದಲ್ಲಿ ಜೆಡಿಎಸ್ ಸಮಾವೇಶ ನಡೆಯಲಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು 24 ರಂದು ಹಾಸನದಲ್ಲಿ ಸಮಾವೇಶ ನಡೆಯಲಿದೆ. ಅದರ ಸಿದ್ದತೆಗೆ ಇಂದು ಸಭೆ ಮಾಡುತ್ತಿದ್ದೇವೆ. ದೊಡ್ಡ ಮಟ್ಟದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಹೀಗಾಗಿ ಹಾಸನ ಜಿಲ್ಲೆಯ ಮುಖಂಡರನ್ನ ಕರೆದಿದ್ದೇನೆ. ಬಳ್ಳಾರಿ ವಿಚಾರ ಟಿವಿಯಲ್ಲಿ ನೋಡಿದ್ದೇನೆ. ಗುಂಪು ಘರ್ಷಣೆ ಆಗಿದೆ. ಶಾಸಕರು, ಯಾರ್ಯಾರು ಭಾಗಿ ಅನ್ನೋದು‌ ಗೊತ್ತಿಲ್ಲ. ಒಬ್ಬ ಮೃತಪಟ್ಟಿದ್ದಾನೆ. ಗುಂಡು ಹೊಡೆದವರು ಯಾರು ಗೊತ್ತಿಲ್ಲ. ಜನಾರ್ದನ ರೆಡ್ಡಿ ಮನೆಯಲ್ಲಿ ಇದ್ದಿದ್ದರೆ ಅಪಾಯ ಆಗ್ತಿತ್ತೊ ಅನ್ನೊ ಸುದ್ದಿ ನೋಡಿದೆ. ಎಲ್ಲಾ ವರದಿ ಬಂದ ಮೇಲೆ ಕ್ರಮ ಎಂದು ಸಿಎಂ ಹೇಳಿದ್ದಾರೆ. ನಾಲ್ಕು FIR ಆಗಿದೆ. ಖಾಸಗಿ ವ್ಯಕ್ತಿ ಹೊರಗಡೆಯಿಂದ ಹೊಡೆದಿದ್ದು ಎಂದು ಸುದ್ದಿ ನೋಡಿದೆ. ನಿಖರವಾಗಿ ಹೀಗೆ ಎಂದು ಹೇಳಲು ನನಗೆ ಕಷ್ಟ. ಶ್ರೀರಾಮುಲು, ಜನಾರ್ದನ ರೆಡ್ಡಿಗೆ ರಕ್ಷಣೆ ಕೊಡಬೇಕು ಎಂದು ಹೇಳಿದ್ದನ್ನ ಕೇಳಿದ್ದೇನೆ ಎಂದಿದ್ದಾರೆ.

ಗನ್ ಸಂಸ್ಕೃತಿ ರಾಜ್ಯಕ್ಕೂ ಬಂತು ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಬಗ್ಗೆ ನಾನೇನು ಹೇಳಲ್ಲ. ಕುಮಾರಸ್ವಾಮಿ ಎರಡು ಸಲ ಸಿಎಂ ಆಗಿ ಸಾಕಷ್ಟು ಕ್ರಮ ತಗೊಂಡಿದ್ದಾರೆ. ವಿಪಕ್ಷ‌ನಾಯಕನಾಗಿಯೂ ಹೋರಾಟ ಮಾಡಿದ್ದಾರೆ. ಇಂದಿನ‌ ಬಳ್ಳಾರಿ ಘಟನೆ ಬಗ್ಗೆ ಏನು ಮಾತಾಡಲ್ಲ. ಡಿಕೆಶಿ , ನೈಸ್ ರೋಡ್ ವಿಚಾರದ ಬಗ್ಗೆ ಕಠಿಣವಾಗಿ ಮಾತಾಡಿದ್ದಾರೆ. ಕ್ರಮ ತಗೋಳೋದು ಅನಿವಾರ್ಯ, ಅತಿಯಾಗಿದೆ ಎಂದು ಹೇಳಿದ್ದಾರೆ. ಡಿಕೆಶಿ ಹಾಗೆ ಹೇಳಿದ್ದು ತುಂಬ ಸಂತೋಷ. ಕ್ರಮ ತಗೊಂಡ್ರೆ ತುಂಬ ಸಂತೋಷ. ನಾವು ದೇವೇಗೌಡ್ರು ಮೇಲೆ ಯಾವುದೇ ರಿಟ್ ಹಾಕಿಲ್ಲಾ ಎಂದು ಅಶೋಕ್ ಖೇಣಿ ಹೇಳ್ತಾರೆ. ೨೧ ಜನವರಿ ಸುಪ್ರೀಂ ಕೋರ್ಟ್ ನಲ್ಲಿ ನೈಸ್  ಕೇಸ್ ಇದೆ. ಚೀಫ್ ಸೆಕ್ರೆಟರಿ ಅವರನ್ನ ಪಾರ್ಟಿ ಮಾಡಿಲ್ಲ. ಬಾಬಾ ಕಲ್ಯಾಣಿ ಅರ್ಜಿದಾರರಾಗಿದ್ದಾರೆ. ನಮ್ಮ ಸರ್ಕಾರ ಏನ್ ಕ್ರಮ ತೆಗೆದುಕೊಳ್ಳುತ್ತೆ ನೋಡೋಣ. ಡಿಸಿಎಂ ತುಂಬಾ ಕಠಿಣವಾಗಿ ಹೇಳಿದ್ದಾರೆ. ಇದನ್ನ ಸ್ವಾಗತ ಮಾಡ್ತಿನಿ. ೨೦೨೪ ರಲ್ಲಿ ಸಿಎಂಗೆ ಪತ್ರ ಬರೆದಿದ್ದೇನೆ. ಎಷ್ಟು ಎಕರೆ ಯಾವ ಯಾವ ಜಾಗದಲ್ಲಿ ಭೂಮಿ ತೆಗೆದುಕೊಂಡಿದ್ದಾರೆ. ಇದರ ಮೇಲೆ ಕ್ರಮ ಕೈಗೊಳ್ಳಿ ಎಂದು ಪತ್ರ ಬರೆದಿದ್ದೇನೆ. ಖೇಣಿ ಮೇಲೆ ಏನ್ ಕ್ರಮ ತೆಗೆದುಕೊಳ್ತಾರೆ ನೋಡೊಣ. ತೆಗೆದುಕೊಂಡ್ರೆ ತುಂಬಾ ಸಂತೋಷ ಎಂದು ತಿಳಿಸಿದ್ದಾರೆ.

ಐದು ಗ್ಯಾರಂಟಿ ಮಾಡಿ ಅಭಿವೃದ್ಧಿಗೆ ದುಡ್ಡಿಲ್ಲ. ರಸ್ತೆ ಮಾಡಿಲ್ಲಾ ನೀರಾವರಿಗೆ ದುಡ್ಡಿಲ್ಲ. ಪ್ರತಿದಿನ ಎರಡುವರೆ ಕೋಟಿ ಟೋಲ್ ಸಂಗ್ರಹ ಆಗ್ತಿದೆ.ಟೋಲ್ ಸಂಗ್ರಹಕ್ಕೆ ಅಧಿಕಾರ ಇಲ್ಲಾ ಎಂದು ಸರ್ಕಾರವೇ ಹೇಳಿದೆ. ಕಾಂಗ್ರೇಸ್ ಹಾಸನದಲ್ಲಿ ಎರಡು ಸಭೆ ಮಾಡಿದ್ರಿ ಯಾಕೆ..?. ಟೈಮ್ ಬರುತ್ತೆ, ಸಮುದ್ರದ ಅಲೆಗಳು ಟೈಮ್ ನ್ನ ನಿಲ್ಲಿಸೋಕೆ ಆಗೊಲ್ಲ. ಬಳ್ಳಾರಿ ಘಟನೆ ನೋಡಿದ್ದೇನೆ. ಗೃಹ ಸಚಿವರು ಸಮಯಕ್ಕೆ ಸರಿಯಾಗಿ ಕ್ರಮ ತಗೋತಾರೆ. ಅವಕಾಶ ಕೊಟ್ರೆ ಸಿಎಂ ಆಗ್ತಿನಿ ಎಂದು ಪರಮೇಶ್ವರ್ ಹೇಳಿದ್ದಾರೆ.ಆ ಕಡೆ ಜಾಸ್ತಿ ಗಮನ ಕೊಡ್ತಿದಾರೆ ಎಂದಿದ್ದಾರೆ.

ಕೋಗಿಲು ಅಕ್ರಮ ಮನೆ ತೆರವು ವಿಚಾರದ ಬಗ್ಗೆ ಮಾತನಾಡಿದ ಅವರು  ಅಲ್ಲಿ ಕೇರಳದವರೆ ಇದಾರೆ ಅನಿಸಲ್ಲ. ಬಾಂಗ್ಲಾದವರು ಇರಬಹುದು. ಈ ಜಾಗದ ವಿಚಾರದಲ್ಲಿ ಇಷ್ಟೊಂದು ಪರ ವಿರೋಧ. ಕೇರಳ – ಕರ್ನಾಟಕ ಸಿಎಂ ವಿಜ್ರಂಭಿಸ್ತಿದ್ದಾರೆ. ಬೆಂಗಳೂರಲ್ಲಿ ಅನಧಿಕೃತ ಎಷ್ಟು ಸ್ಲಂ ಇದಾವೆ . ವ್ಹೀಲ್ ಚೇರ್ ನಲ್ಲೆ ಬರ್ತೇನೆ, ಬನ್ನಿ ನನ್ನ ಜೊತೆ. ಆ ಸ್ಲಂ ಗೆ ಎಲ್ಲೆಲ್ಲಿಂದ ಅಲ್ಲಿ ಬಂದು ಜನ ಸೇರಿದ್ದಾರೆ ನೋಡೋಣ. ಅನಧಿಕೃತ ಸ್ಲಂ ಬಗ್ಗೆ ಯಾರ್ ಕ್ರಮ ತಗೊಂಡಿದಾರೆ. ಕೋಗಿಲು ಘಟನೆ ಬಿಜೆಪಿ – ಕಾಂಗ್ರೆಸ್ ಸಂಘರ್ಷ ಎಕ್ಸ್ಟ್ರೀಮ್ ಹೋಗಿದೆ. ಮೊದಲು ಅನಧಿಕೃತ ಸ್ಲಂ ಎಷ್ಟಿದೆ ನೋಡೋಣ. ನಾನು ಸಿಎಂ ಆದಾಗ ಒಂದು ಮನೆಯನ್ನು ಒಡೆದಿಲ್ಲ. ನಂದಿನಿ‌ಲೇಔಟ್ ನಲ್ಲಿ800 ಮನೆ ಒಡೆಯಲು ಬುಲ್ಡೋಜರ್ ಹೋಗಿತ್ತು. ಬೆಳಿಗ್ಗೆ 6 ಗಂಟೆಗೆ ಸ್ಥಳಕ್ಕೆ ಹೋಗಿ ಸ್ಟಡಿ ಮಾಡಿದೆ, ಒಡೆಯೋದನ್ನ ನಿಲ್ಲಿಸಿದೆ. ಮನೆ ಹೊಡೆಯೋದನ್ನ ತಪ್ಪಿಸಿದೆ. ಜಾಗದ ಹಣ ಕೊಟ್ವವರೆಗೆ ಬೇರೆ ಕಡೆ ಮನೆ ಕಟ್ಟಿಸಿಕೊಡಿ ಎಂದಿದ್ದೆ. ನಾನು ಸಿಎಂ ಪ್ರಧಾನಿಯಾಗಿದ್ದೆ ಆಡಳಿತ ಏನು ಅನ್ನೋದು ಗೊತ್ತಿದೆ ಎಂದು ಅವರು ಹೇಳಿದ್ದಾರೆ.