ಬೆಂಗಳೂರು; ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಶಾಸಕ ಸೋಮಶೇಖರ್ ಆಕ್ರೋಶ ಹೊರ ಹಾಕಿದ್ದಾರೆ.ಯಶವಂತಪುರ ಕ್ಷೇತ್ರದ ಚಿಕ್ಕನಹಳ್ಳಿಯಲ್ಲಿ ಅಕ್ರಮವಾಗಿ ಬಂಡೆ ಬ್ಲಾಸ್ಟ್ ಮಾಡಿದ್ದಾರೆ. ಇದರಿಂದ ನಾಲ್ಕು ಚಿರತೆ ಸಾವನ್ನಪ್ಪಿವೆ.ನನ್ನ ಗಮನಕ್ಕೆ ಬಂದ ಕೂಡಲೇ ಫಾರೆಸ್ಟ್ ಆಫಿಸರ್ ಗಮನಕ್ಕೆ ತಂದಿದ್ದೇನೆ. ಅರಣ್ಯ ಸಚಿವರ ಗಮನಕ್ಕೆ ತರಲು ಸಾಕಷ್ಟು ಕರೆ ಮಾಡಿದ್ರೂ, ತೆಗೆದಿಲ್ಲ. ಚಿರತೆ ಸಾವಿಗೆ ಕಾರಣ ಯಾರು.? ಇಲ್ಲೀಗಲ್ ಬ್ಲಾಸ್ಟ್ ಹೆಚ್ಚಾಗಿದೆ. ಬಂಡೆ ಬ್ಲಾಸ್ಟ್ ನಿಂದ ಸಮಸ್ಯೆ ಆಗ್ತಿದೆ.ರಾತ್ರಿ ವೇಳೆ ಬ್ಲಾಸ್ಟ್ ಮಾಡ್ತಿದ್ದಾರೆ.ಬ್ಲಾಸ್ಟ್ ಮಾಡ್ತಿರೋದ್ರಿಂದ ಧೂಳು ಹೆಚ್ಚಾಗಿದೆ.ಅರಣ್ಯ ಸಚಿವರು ಎಚ್ಚೆತ್ತುಕೊಳ್ಳಬೇಕು.ಮೈನ್ಸ್ ಆಂಡ್ ಜಿಯೋಲಜಿ ಇಲಾಖೆ ಕೂಡ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.
ಕೋಗಿಲು ಲೇಔಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಅವರೊಬ್ಬರಿಗೆ ಮಾತ್ರ ಯಾಕೆ ಪುನರ್ವಸತಿ ಮಾಡಬೇಕು. ಸಾಕಷ್ಟು ಜನ ಇದ್ದಾರೆ.ಕೋಗಿಲು ಅವರಿಗೆ ಮಾತ್ರ ಎರಡುವರೆ ಲಕ್ಷ ಕಟ್ಟಬೇಕು.?. ಮಾಡಿದ್ರೆ ಎಲ್ಲರಿಗೂ ಒಂದೇ ಕಾನೂನು ಮಾಡಬೇಕು. ನಲವತ್ತು ಕಡೆ ಕಟ್ಟಡ ನಿರ್ಮಾಣ ಆಗ್ತಿದೆ. ಎಲ್ಲಾ ಕಡೆ ರಿಯಾಯಿತಿ ಕೊಡಬೇಕು. ಇಡೀ ಬೆಂಗಳೂರನ್ನ ಒಂದಾಗಿ ನೋಡಬೇಕು ಎಂದು ಸರ್ಕಾರದ ನಿರ್ಧಾರಕ್ಕೆ ಸೋಮಶೇಖರ್ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಶಾಸಕ ಎಸ್ಟಿ ಸೋಮಶೇಖರ್ ಆರೋಪಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದು ಎಸ್ಟಿ ಸೋಮಶೇಖರ್ ಅವರ ಆರೋಪದ ಬಗ್ಗೆ ಈಗಷ್ಟೇ ಮಾಹಿತಿ ಬಂದಿದೆ. ನಾನು ಬೀದರ್ನಲ್ಲಿದ್ದೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದೆ. ಅವರು ಕರೆ ಮಾಡಿದ್ರಂತೆ ನಾನು ಫೋನ್ ಬದಲಾಯಿಸಿದ ಕಾರಣ ನಾನು ಕರೆ ಸ್ವೀಕರಿಸಲು ಆಗಿಲ್ಲ. ಈಗಷ್ಟೇ ಮಾಹಿತಿ ಬಂದಿದೆ. ಕ್ವಾರಿಯವರು ಬ್ಲಾಸ್ಟ್ ಮಾಡಿದ್ದಾರೆ. ಕ್ವಾರಿ ಅರಣ್ಯದ ಒಳಗಡೆ ಬರುವುದಿಲ್ಲ ಅರಣ್ಯದ ಹೊರಗೆ ಬರುತ್ತೆ. ನಮ್ಮ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಬ್ಲಾಸ್ಟ್ ಮಾಡಿದ ಕಾರಣಕ್ಕಾಗಿ ಒಂದು ಚಿರತೆ ಸತ್ತಿದೆ . ಚಿರತೆ ಪೋಸ್ಟ್ ಮಾರ್ಟಂ ಮಾಡಿದಾಗ ಹೊಟ್ಟೆಯಲ್ಲಿ ಮರಿ ಇತ್ತು ಅಂತ ಗೊತ್ತಾಗಿದೆ. ಅದನ್ನ ಅತ್ಯಂತ ಗಂಭೀರವಾಗಿ ನಮ್ಮ ಇಲಾಖೆ ಪರಿಗಣಿಸುತ್ತೆ .ಯಾರು ತಪ್ಪಿತಸ್ಥರೇ ಇದ್ದಾರೆ ಅವರ ಮೇಲೆ ಈಗಾಗಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಅವರ ವಿರುದ್ಧ ಅತ್ಯಂತ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ .ವನ್ಯಜೀವಿ ಸಂರಕ್ಷಣೆ ನಮ್ಮ ಆದ್ಯತೆ.ವನ್ಯಜೀವಿ ಸಂರಕ್ಷಣೆ ಮಾಡಿದರೆ ಮಾತ್ರ ಪ್ರಕೃತಿಯ ಸಮತೋಲನ ಕಾಪಾಡಲು ಸಾಧ್ಯ.ನಾವು ಆ ವಿಚಾರದ ಬಗ್ಗೆ ಬಹಳ ಗಂಭೀರವಾಗಿದ್ದೇವೆ ಎಂದಿದ್ದಾರೆ.
ನಾನು ಎಸ್ಟಿ ಸೋಮಶೇಖರ್ ಅವರ ಜೊತೆಗೂ ಕೂಡ ಮಾತನಾಡುತ್ತೇನೆ. ಕ್ವಾರಿ ಅರಣ್ಯ ಒಳಗಡೆ ಇಲ್ಲ ಅಂತ ಮಾಹಿತಿ ಇದೆ. ಸಾಕಷ್ಟು ವರ್ಷಗಳಿಂದ ಕೆಲ ಗಣಿಗಾರಿಕೆಗಳು ನಡೆಯುತ್ತಿವೆ. ನಿಯಮಾವಳಿಯಲ್ಲಿ ಅವಕಾಶ ಇದೆ ಮಾರ್ಗಸೂಚಿಯಲ್ಲಿ ಏನಾದರೂ ಉಲ್ಲಂಘನೆ ಆಗಿದ್ರೆ ಅತ್ಯಂತ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳುತ್ತೆ. ಯಾರೇ ಇರಲಿ ಎಷ್ಟೇ ಒತ್ತಡ ಬರಲಿ. ಹಿಂದೆನೂ ನಾವು ಬಿಟ್ಟಿಲ್ಲ ಮುಂದೇನು ಬಿಡಲ್ಲ. ಪಾರದರ್ಶಕವಾದ ತನಿಖೆ ನಡೆಯುತ್ತದೆ ಕ್ರಮ ಆಗುತ್ತೆ. ಲೀಗಲ್ ಮೈನಿಂಗ್ ಇದ್ದರೂ ಕೂಡ ಈ ರೀತಿ ಬ್ಲಾಸ್ಟ್ ಮಾಡಲು ಅವಕಾಶ ಇಲ್ಲ. ಈಗಾಗಲೇ ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ತನಿಖೆ ಆದ ಮೇಲೆ ಅವರ ಮೇಲೆ ಕ್ರಮನೂ ಆಗುತ್ತೆ ಎಂದು ತಿಳಿಸಿದ್ದಾರೆ.











