ಮನೆ Latest News ಕೋಗಿಲು ಲೇಔಟ್ ಅಕ್ರಮ ನಿವಾಸಗಳಿಗೆ ಸರ್ಕಾರದಿಂದ ಮನೆ ಕೊಡ್ತಿರೋ ವಿಚಾರ; ಸರ್ಕಾರದ ವಿರುದ್ದ ಶಾಸಕ ಯತ್ನಾಳ್...

ಕೋಗಿಲು ಲೇಔಟ್ ಅಕ್ರಮ ನಿವಾಸಗಳಿಗೆ ಸರ್ಕಾರದಿಂದ ಮನೆ ಕೊಡ್ತಿರೋ ವಿಚಾರ; ಸರ್ಕಾರದ ವಿರುದ್ದ ಶಾಸಕ ಯತ್ನಾಳ್ ಆಕ್ರೋಶ

0

ಬೆಂಗಳೂರು; ಕೋಗಿಲು ಲೇಔಟ್ ಅಕ್ರಮ ನಿವಾಸಗಳಿಗೆ ಸರ್ಕಾರದಿಂದ ಮನೆ ಕೊಡ್ತಿರೋ ವಿಚಾರದ ಬಗ್ಗೆ ಸರ್ಕಾರದ ವಿರುದ್ದ ಶಾಸಕ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.

ಕರ್ನಾಟಕದಲ್ಲಿ ತುಷ್ಟೀಕರಣ ಪರಾಕಾಷ್ಠೆ ಮುಟ್ಟಿದೆ. ಸಿದ್ದರಾಮಯ್ಯ ನಿಜವಾದ ಕನ್ನಡಿಗರು, ಮೂಲ ನಿವಾಸಿಗಳಿಗೆ ವಸತಿ ಕೊಡೋದು ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಸಿಎಂ,ಡಿಸಿಎಂ ಗೆ ವಾರ್ನಿಂಗ್ ಮಾಡಿದ್ದರಿಂದ ಲೋಕಲ್ ಅಲ್ಲದೆ ಇರೋರಿಗೆ ಮನೆ ಕೊಡ್ತಾ ಇದ್ದಾರೆ‌. ಅವರೆಲ್ಲಾ ಯಾವ ದೇಶದವರು ಅಂತ ತನಿಖೆ ಮಾಡದೇ ಓಟ್ ಬ್ಯಾಂಕ್ ಸಲುವಾಗಿ ಸರ್ಕಾರ ಮನೆ ಕೊಡೋ ನಿರ್ಧಾರ ಮಾಡ್ತಿದೆ.ಇದನ್ನ ನಾವು ವಿರೋಧ ಮಾಡ್ತೀವಿ.ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಇದ್ದಾರೆ ಅವರನ್ನ ತನಿಖೆ ಮಾಡಿ ಪುನರ್ ವಸತಿ ಕಲ್ಪಿಸಬೇಕು.ದಶಕಗಳಿಂದ ಉತ್ತರ ಕರ್ನಾಟಕದ ಜನ ಕೂಲಿ-ನಾಲಿ, ಜೀವನ ಮಾಡಲು ಬೆಂಗಳೂರು ಬಂದವರಿಗೆ ಪುನರ್ ವಸತಿ ಕಲ್ಪಿಸಬೇಕು ಎಂದು ಅವರು ಹೇಳಿದ್ದಾರೆ.

ಆದ್ರೆ ಕಾಂಗ್ರೆಸ್ ಹೈಕಮಾಂಡ್ ‌ಗೆ ತಲೆಬಾಗಿ ಕನ್ನಡಿಗರಿಗೆ ಅಪಮಾನ ಮಾಡೋ ಕೆಲಸ ಈ‌ ಸರ್ಕಾರ ಮಾಡ್ತಿದೆ. ಸರ್ಕಾರದ ನಡೆ ಖಂಡಿಸುತ್ತೇನೆ.ಅಕ್ರಮ ಬಾಂಗ್ಲಾದೇಶದವರ‌ ಬಗ್ಗೆ ತನಿಖೆ ಕೇಂದ್ರ ಸರ್ಕಾರ ಶುರು ಮಾಡಿತ್ತು. ಈಗ ಯಾಕೆ ನಿಂತಿದೆ ಗೊತ್ತಿಲ್ಲ. ಕೂತು ಚರ್ಚೆ ಮಾಡ್ತೀವಿ. ಇದು ಅವಶ್ಯಕತೆ ‌ಇದೆ.ದೇಶದಲ್ಲಿ SIR ನಡೆಯುತ್ತಿದೆ. ತಮಿಳುನಾಡಿನ 1 ಕೋಟಿ ನಕಲಿ ಮತದಾರರು ಸಿಕ್ಕಿದ್ದಾರೆ.ಪಶ್ಚಿಮ ಬಂಗಾಳ ದಲ್ಲಿ ಒಂದು ಕೋಟಿ ನಕಲಿ ಮತದಾರರು ಸಿಕ್ಕಿದ್ದಾರೆ.ಕರ್ನಾಟಕದಲ್ಲೂ ನಕಲಿ ಮತದಾರರು, ಬಾಂಗ್ಲಾ, ರೋಹಿಂಗ್ಯಾಗಳ ಇದ್ದಾರೆ. ನಾನು ಈಗಾಗಲೇ ವಿಜಯಪುರ ಡಿಸಿಗೆ ವಿಜಯಪುರದಲ್ಲಿ 19 ಸಾವಿರ ನಕಲಿ ಮತದಾರರು ಇದ್ದಾರೆ.ಅ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ.ಕರ್ನಾಟಕದಲ್ಲೂ SIR ಪ್ರಾರಂಭ ಮಾಡಬೇಕು.ನಕಲಿ ಮತದಾರರನ್ನ ಭಾರತದ ಗಡಿಯಿಂದ ಆಚೆ ಹಾಕೋ ಕೆಲಸ ಸರ್ಕಾರ ಮಾಡಬೇಕು. ಅವರು ಹೋಗದೇ ಇದ್ದರೆ ಬಾಂಗ್ಲಾದೇಶದಲ್ಲಿ ಹೇಗೆ ಹಿಂದೂಗಳನ್ನು ಕೊಲೆ ಮಾಡ್ತಾ ಇದ್ದಾರೆ ಅದೇ ರೀತಿ ಅನಿವಾರ್ಯವಾಗಿ ಭಾರತದ ಜನರೇ ಅವರನ್ನು ಕೊಲೆ ಮಾಡೋ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ತಿಳಿಸಿದ್ದಾರೆ.

ನಾಳೆ ಮನೆ ಕೊಡ್ತೀವಿ ಎಂಬ ಸಚಿವ ಜಮೀರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅವೆರೆಲ್ಲಾ ಮುಸ್ಲಿಂ ಇದ್ದಾರೆ ಅಂತ ಜಮೀರ್ ಮಾತಾಡ್ತಾ ಇದ್ದಾರೆ.ಜಮೀರ್ ಗೆ ದೇಶ, ರಾಜ್ಯ ಬೇಕಾಗಿಲ್ಲ. ತಮ್ಮ ಜನಸಂಖ್ಯೆ, ತಮ್ಮ ‌ಮತದಾರರು ಹೆಚ್ಚಾಗಬೇಕು.ಈ ದೇಶವನ್ನು ಆದಷ್ಟು ಬೇಗ ಇಸ್ಲಾಂಮೀಕರಣ ಮಾಡಬೇಕು.ಇದೆ ಜಮೀರ್ ಟಾರ್ಗೆಟ್, ಬಿಟ್ಟರೆ ಅವರ ತಲೆಯಲ್ಲಿ ಏನು ಇರಲ್ಲ. ದುರ್ದೈವ ಅಂದರೆ ಸಿದ್ದರಾಮಯ್ಯ ಅಂತಹವರು ಜಾತ್ಯಾತೀತ ಅನ್ನೋ ಹೆಸನಿಂದ ಮುಸ್ಲಿಂ ತುಷ್ಟೀಕರಣ ಮಾಡೋದು ಬಿಟ್ಟು ಬೇರೆ ಜನರ ಸಮಸ್ಯೆ ಗೊತ್ತಿಲ್ಲ. ಹೀಗಾಗಿ ಇಂತಹ ‌ನಿರ್ಣಯ ಆಗ್ತಿದೆ ಎಂದಿದ್ದಾರೆ.

2026ಕ್ಕೆ ಬಿಜೆಪಿಗೆ  ವಾಪಸ್ ಬರ್ತಿರಾ ಒಳ್ಳೆಯದಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು 2026 ಏನ್ ಆಗುತ್ತೋ ನೋಡಬೇಕು.ಯಾರಿಗೆ ಶುಭ ಸುದ್ದಿ, ಯಾರಿಗೆ ಅಶುಭ ಸುದ್ದಿ ಆಗುತ್ತೋ. ಯಾರು ಮನೆಗೆ ಹೋಗ್ತಾರೋ, ಯಾರು ಮೇಲೆ ಹೋಗ್ತಾರೋ ಗೊತ್ತಿಲ್ಲ. ಅನೇಕ ಶಾಸಕರು ಬಿಜೆಪಿಗೆ ಬರಬೇಕು ಅಂತ ಹೇಳ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಬಿಜೆಪಿಗೆ ಬರಬೇಕು ಅಂತ ಕೇಳಿದ್ರು. ಇಲ್ಲದೆ ಹೋದ್ರೆ ಜನ ಆಕರ್ಷಕ ಮಾಡದೇ ಇರೋ ವ್ಯಕ್ತಿಯ ಮುಂದೆ ನಾವು ಜೋತು ಬಿದ್ದು ಹಣ ಖರ್ಚು ಮಾಡಿ. ಜನ ಸೇರಿಸಿ ಕಾರ್ಯಕ್ರಮ ಮಾಡೋದ್ರಲ್ಲಿ ಸತ್ತು ಹೋಗಿದ್ದೇವೆ ಅಂತ ಶಾಸಕರು ಹೇಳ್ತಿದ್ದಾರೆ. ನಾನು ಹೋದರೆ ಜನ ದುಡ್ಡು  ಇಲ್ಲದೆ ಸೇರುತ್ತಾರೆ. ನಮ್ಮ ಶಾಸಕರಿಗೆ ಈ ವರ್ಷ ಖರ್ಚು ಕಡಿಮೆ ಆಗೋ ವರ್ಷ ಆಗಲಿ ಅಂತ ಶಾಸಕರು ಇದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.