ಮನೆ Latest News ನಾನು ಮತ್ತೆ ಸಿಎಂ ಆಗಬೇಕು ಮತ್ತೊಂದು ಬಯಕೆ ಇಲ್ಲ; ಹಾಸನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ

ನಾನು ಮತ್ತೆ ಸಿಎಂ ಆಗಬೇಕು ಮತ್ತೊಂದು ಬಯಕೆ ಇಲ್ಲ; ಹಾಸನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ

0

ಹಾಸನ; ನಾನು ಮತ್ತೆ ಸಿಎಂ ಆಗಬೇಕು ಮತ್ತೊಂದು ಬಯಕೆ ಇಲ್ಲ ಎಂದು ಹಾಸನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.

ನಾನು ಬದುಕಿರೊವರೆಗೆ ನನ್ನ ಮೇಲೆ‌ ವಿಶ್ವಾಸ ಇಟ್ಟು ಬರೊ ಬಡವನಿಗೆ ಏನಾದರು ಶಕ್ತಿ ತುಂಬಲು ಸಾದ್ಯ ವಾ ಎನ್ನೋದು ನನ್ನ ಚಿಂತೆ. ಅದು ಬಿಟ್ಟು ಮತ್ತೆ ಸಿಎಂ ಆಗಬೇಕು ಯಾವುದು ಇಲ್ಲ. ದೇವರು ಎಲ್ಲಾ ಕೊಟ್ಟಿದಾನೆ ನೋಡಿಯಾಗಿದೆ. ನನ್ನ ಪರಿಸ್ಥಿತಿ ಹೇಗಿದೆ ಎಂದರೆ ಯಾರ ಕೈಗೂ ಸಿಗದೆ ಒಂದು ಅರಣ್ಯ ಕ್ಕೆ ಹೋಗಿ ಗುಪ್ತ ವಾಗಿ ಇರಬೇಕು ಎನ್ನಿಸಿದೆ. ಏನೆಲ್ಲಾ ಲೂಟಿ ಆದರೂ ಈ ದೇಶ ಬದುಕಿದೆ. ಈಗ ಯಾರು ಲೂಟಿ ಮಾಡ್ತಾ ಇದಾರೆ. ಈಗಲೂ ಸಂಪತ್ತು ಇದೆ. ಎಲ್ಲಾ ಇದೆ ಇದನ್ನ ತಗೊಂಡು ಏನು ಮಾಡೋಣ.ಯಾವನು‌‌ ನಿದ್ದೆ ಮಾಡೋಕೆ ಆಗ್ತಿಲ್ಲ. ನಿಮ್ಮ ಲೀಡರ್ ಯಾರೋ ಸಿಎಂ ಆಗ್ಬೇಕು ಅಂತಾನಲ್ಲ ನಿದ್ದೆ ಮಾಡ್ತಾನಾ ಎಂದು ಕುಮಾರಸ್ವಾಮಿ ಲೇವಡಿ‌ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಡಿಸಿಎಂ ಡಿ ಕೆ ಶಿ ಕಾಲೆಳೆದಿದ್ದಾರೆ ಕುಮಾರಸ್ವಾಮಿ.

ನನ್ನಲ್ಲಿ ಯಾವುದೇ ಸಣ್ಣ ತನ ಇಲ್ಲ. ಮುಕ್ತ ತೀರ್ಮಾನ ಮಾಡಲು ಬಿಜೆಪಿ ‌ಜೊತೆ ಸಂಬಂಧ ಬೆಳೆಸಿದೆ. ಕಾಂಗ್ರೆಸ್ ನೋಡಿಯಾಗಿದೆ. ದೇವೇಗೌಡರು ಕಾಂಗ್ರೆಸ್ ನೋಡಿ ಅವರ ಜೀವನ ಹಾಳು ಮಾಡಿಕೊಂಡರು. ದೇವೇಗೌಡರ ಜೀವನ ರಾಜಕೀಯವಾಗಿ ಹಾಳಾಗಲು ಪ್ರಮುಖ ಕಾರಣ ಇದೇ ಕಾಂಗ್ರೆಸ್ ಎಂದು ಎಚ್ಡಿಕೆ ಹೇಳಿದ್ದಾರೆ.