ಮನೆ Latest News ಗೃಹ ಲಕ್ಷ್ಮಿ ಹಣ 5 ಸಾವಿರ ಕೋಟಿ ಎಲ್ಲಿ ಹೋಯ್ತು ಎಂಬ ಆರೋಪಕ್ಕೆ ಬೈರತಿ ಸುರೇಶ್...

ಗೃಹ ಲಕ್ಷ್ಮಿ ಹಣ 5 ಸಾವಿರ ಕೋಟಿ ಎಲ್ಲಿ ಹೋಯ್ತು ಎಂಬ ಆರೋಪಕ್ಕೆ ಬೈರತಿ ಸುರೇಶ್ ತಿರುಗೇಟು

0

ಬೆಳಗಾವಿ: ಗೃಹ ಲಕ್ಷ್ಮಿ ಹಣ 5 ಸಾವಿರ ಕೋಟಿ ಎಲ್ಲಿ ಹೋಯ್ತು ಎಂಬ ಆರೋಪಕ್ಕೆ ಬೈರತಿ ಸುರೇಶ್ ತಿರುಗೇಟು ಕೊಟ್ಟಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು ಸಂಬಂಧ ಪಟ್ಟ ಮಂತ್ರಿ ಹೇಳ್ತಾರೆ,ಎಲ್ಲೂ ಹೋಗಲ್ಲ. ಸರ್ಕಾರದ ಖಜಾನೆಯಲ್ಲಿ ಇರುತ್ತೆ. ಯಾರು ತಪ್ಪು ಮಾಹಿತಿ ನೀಡದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಸರಿಯಾದ ಮಾಹಿತಿ ಕೊಡ್ತಾರೆ. ಸರ್ಕಾರದ ಹಣ ಎಲ್ಲಿಯೂ ಹೋಗಲ್ಲ. ಬಿಜೆಪಿ ಅವ್ರು ಯಾವಾಗಲೂ ಅನುಮಾನ ವ್ಯಕ್ತಪಡಿಸುತ್ತಾರೆ. ಆರ್ ಅಶೋಕ್ ಹೇಳವ್ರೆ ಅಲ್ವ .ಸುಳ್ಳು ಹೇಳೋಕೆ ವಿರೋಧ ಪಕ್ಷ ಇರೋದು ಅಂತ. ಅದನ್ನೆ ಎಲ್ಲರೂ ಹೇಳೋದು. ಆ ತರ ಆರೋಪ ಮಾಡೋಕೆ ಏನ್ ಹೇಳೋದು ಎಂದು ಬಿಜೆಪಿ ಆರೋಪಕ್ಕೆ ಬಿ.ಎಸ್.ಸುರೇಶ್ ತಿರುಗೇಟು ನೀಡಿದ್ದಾರೆ.

ಮುಡಾ ಕೇಸ್ ವಿಚಾರಣೆ ವಿಚಾರದ ಬಗ್ಗೆ ಮಾತನಾಡಿದ ಅವರು ನ್ಯಾಯಾಲಯ ಏನು ತೀರ್ಪು ಕೊಡುತ್ತೆ. ಆ ತೀರ್ಪಿನ ಮೇಲೆ ಹೋಗ್ತೀವಿ. ಜಯ ಆಗೋದು ಯಾರಿಗೆ ಗೊತ್ತು. ನಮಗೆ ಗೊತ್ತಿಲ್ಲ. ನ್ಯಾಯಮೂರ್ತಿಗಳು ಮುಡಾ ಕೇಸ್ ನಲ್ಲಿ ಇವತ್ತು ಇದೆ. ಏನು ತೀರ್ಮಾನ ತೆಗೆದುಕೊಳ್ತಾರೆ ಅದರ ಮೇಲೆ ಹೋಗ್ತೀವಿ. ರಿಪೋರ್ಟ್ ತಿರಸ್ಕಾರ ಮಾಡಿಲ್ಲ.ಪೂರ್ತಿ ರಿಪೋರ್ಟ್ ಕೋಡೋಕೆ ಹೇಳಿತ್ತು ನ್ಯಾಯಾಲಯ.ಸ್ನೇಹಮಯಿ ಕೃಷ್ಣ ಅವ್ರು ಕಾನೂನು ಹೋರಾಟ ಮಾಡ್ಲಿ.ಸುಳ್ಳು ಆರೋಪ ಎಷ್ಟು ಮಾಡ್ತಾರೋ ಮಾಡ್ಲಿ. ಈ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇನ್ನು ಬದುಕಿದೆ ಅಲ್ವ. ನ್ಯಾಯಾಂಗದ ಮೇಲೆ ನಾವು ನಂಬಿಕೆ ಇಟ್ಟುಕೊಂಡಿರೋರು ನಾವು. ನಮ್ಮ ಸರ್ಕಾರ,ನಾವಯ,ಸಿದ್ದರಾಮಯ್ಯ ಅವ್ರು. ಸುಳ್ಳು ಸುಳ್ಳು ಆರೋಪಗಳನ್ನ ಮಾಡಲಿ. ಕೃಷ್ಣ ಅವ್ರು ಎಷ್ಟು ಕಿರುಕುಳ ಕೋಡ್ತಾರೋ ಕೊಡಲಿ.ಉದ್ದೇಶ ಪೂರ್ವಕವಾಗಿ ಅಲ್ಲದೆ ಇನ್ನು ಏನು? ಅದು ನಿಜನಾ.ಅಣ್ಣನಿಂದ ತಂಗಿಗೆ ಬಂದಿರೋವ ಜಾಗ, ಇಡಿ ದೇಶಕ್ಕೆ ಗೊತ್ತು. ಸುಪ್ರೀಂಕೋರ್ಟ್ ಏನ್ ಹೇಳಿತ್ತು,ನ್ಯಾ.ನಾಗಪ್ರಸನ್ನ ಏನು ಹೇಳಿದ್ರು.ಅದೇ ರೀತಿ ನ್ಯಾಯಧೀಯರು ತುಲನೆ ಮಾಡ್ತಾರೆ.ಯಾವ ರೀತಿ ಕಿರುಕುಳನಾ ಏನು ಅಂತ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.